AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಪಿಂಗ್​ಗೆ ಪೊಲೀಸ್ ಇಲಾಖೆ ವಾಹನ ಬಳಕೆ ಆರೋಪ.. ಸಾರ್ವಜನಿಕರಿಂದ ಆಕ್ರೋಶ

KA 11, G594ನ ಪೊಲೀಸ್ ವಾಹನದಲ್ಲಿ ನಾಲ್ವರು ಮಹಿಳೆಯರು ಹಬ್ಬದ ಶಾಪಿಂಗ್​​ಗೆ ಬಳಕೆ ಮಾಡಿಕೊಂಡಿದ್ದಾರಂತೆ. ಮಂಡ್ಯದ ವಿವಿಧೆಡೆ ಬಟ್ಟೆ ಶೋರೂಂ, ಫ್ಯಾನ್ಸಿ ಸ್ಟೋರ್​ಗೆ ಪೊಲೀಸ್ ವಾಹನದಲ್ಲೇ ಮಹಿಳೆಯರು ಸುತ್ತಾಡಿದ್ದಾರೆ. ಅಲ್ಲದೆ ಚಾಲಕನನ್ನು ಕೆಲಸದಾಳಂತೆ ಬಳಕೆ ಮಾಡಿಕೊಂಡಿದ್ದಾರೆ.

ಶಾಪಿಂಗ್​ಗೆ ಪೊಲೀಸ್ ಇಲಾಖೆ ವಾಹನ ಬಳಕೆ ಆರೋಪ.. ಸಾರ್ವಜನಿಕರಿಂದ ಆಕ್ರೋಶ
ಪೊಲೀಸ್ ಇಲಾಖೆ ವಾಹನಕ್ಕೆ ಶಾಪಿಂಗ್ ಮಾಡಿದ ವಸ್ತುಗಳನ್ನು ತುಂಬುತ್ತಿರುವ ಚಾಲಕ
ಆಯೇಷಾ ಬಾನು
| Edited By: |

Updated on: Jan 15, 2021 | 10:24 AM

Share

ಮಂಡ್ಯ: ಅಧಿಕಾರಿಯ ಕುಟುಂಬಸ್ಥರು ಖಾಸಗಿ ಕೆಲಸಕ್ಕೆ ಪೊಲೀಸ್​ ಇಲಾಖೆ ವಾಹನ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಮಂಡ್ಯ ನಗರದಲ್ಲಿ ಅಧಿಕಾರಿಯೊಬ್ಬರ ಕುಟುಂಬಸ್ಥರು ಪೊಲೀಸ್ ಇಲಾಖೆಯ ವಾಹನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರಂತೆ.

KA 11, G594ನ ಪೊಲೀಸ್ ವಾಹನದಲ್ಲಿ ನಾಲ್ವರು ಮಹಿಳೆಯರು ಹಬ್ಬದ ಶಾಪಿಂಗ್​​ಗೆ ಬಳಕೆ ಮಾಡಿಕೊಂಡಿದ್ದಾರಂತೆ. ಮಂಡ್ಯದ ವಿವಿಧೆಡೆ ಬಟ್ಟೆ ಶೋರೂಂ, ಫ್ಯಾನ್ಸಿ ಸ್ಟೋರ್​ಗೆ ಪೊಲೀಸ್ ವಾಹನದಲ್ಲೇ ಮಹಿಳೆಯರು ಸುತ್ತಾಡಿದ್ದಾರೆ. ಅಲ್ಲದೆ ಚಾಲಕನನ್ನು ಕೆಲಸದಾಳಂತೆ ಬಳಕೆ ಮಾಡಿಕೊಂಡಿದ್ದಾರೆ.

ಮಹಿಳೆಯರು ಖರೀದಿಸಿದ್ದ ವಸ್ತುಗಳನ್ನು ಚಾಲಕನೇ ಶೋರೂಂನಿಂದ ತಂದು ವಾಹನದಲ್ಲಿ ಇರಿಸಿದ್ದಾನೆ. ಸರ್ಕಾರಿ ಸೇವಾ ನಿಷ್ಠೆಯ ಜೊತೆಗೆ ಅಧಿಕಾರಿಯ ಕುಟುಂಬಸ್ಥರಿಗೂ ಕೆಲಸ ಮಾಡುವಂತ ಪರಿಸ್ಥಿತಿ ಚಾಲಕನದ್ದಾಗಿದೆ. ಈ ರೀತಿ ಸರ್ಕಾರಿ ವಾಹನವನ್ನು ತನ್ನ ಖಾಸಗಿ ಕೆಲಸಕ್ಕೆ ದುರ್ಬಳಕೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಪೊಲೀಸ್ ವಾಹನ ದುರ್ಬಳಕೆ, PSI ಸಸ್ಪೆಂಡ್​

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More