ಪ್ರವಾಹದಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಅರೆಸ್ಟ್​ ವಾರಂಟ್​!

|

Updated on: Sep 14, 2019 | 2:04 PM

ಮಹಾರಾಷ್ಟ್ರದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹಕ್ಕೆ ಉತ್ತರ ಕರ್ನಾಟಕದ ರೈತರ ಜೀವನ ಇನ್ನೂ ಸುಧಾರಿಸಿಲ್ಲ. ಬೆಳಗಾವಿ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಲೂ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡ್ತಿದ್ದಾರೆ. ಆದ್ರೆ ಇದೀಗ ಇದೇ ಪ್ರವಾಹದಲ್ಲಿ ತಮ್ಮ ಜಮೀನನ್ನು ಕಳೆದುಕೊಂಡಿದ್ದ ರೈತನಿಗೆ ಪೊಲೀಸರು ಅರೆಸ್ಟ್​ ವಾರಂಟ್ ನೀಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ತವರು ಕ್ಷೇತ್ರದಲ್ಲೇ ಭೂಮಿ ಕಳೆದುಕೊಂಡ ರೈತನಿಗೆ ಅರೆಸ್ಟ್​ ವಾರಂಟ್​ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಏಣಗಿ ಗ್ರಾಮದ ರೈತ ಈರಪ್ಪ ಹುಬ್ಬಳ್ಳಿ ಎಂಬುವರ […]

ಪ್ರವಾಹದಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಅರೆಸ್ಟ್​ ವಾರಂಟ್​!
Follow us on

ಮಹಾರಾಷ್ಟ್ರದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹಕ್ಕೆ ಉತ್ತರ ಕರ್ನಾಟಕದ ರೈತರ ಜೀವನ ಇನ್ನೂ ಸುಧಾರಿಸಿಲ್ಲ. ಬೆಳಗಾವಿ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಲೂ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡ್ತಿದ್ದಾರೆ. ಆದ್ರೆ ಇದೀಗ ಇದೇ ಪ್ರವಾಹದಲ್ಲಿ ತಮ್ಮ ಜಮೀನನ್ನು ಕಳೆದುಕೊಂಡಿದ್ದ ರೈತನಿಗೆ ಪೊಲೀಸರು ಅರೆಸ್ಟ್​ ವಾರಂಟ್ ನೀಡಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ತವರು ಕ್ಷೇತ್ರದಲ್ಲೇ ಭೂಮಿ ಕಳೆದುಕೊಂಡ ರೈತನಿಗೆ ಅರೆಸ್ಟ್​ ವಾರಂಟ್​ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಏಣಗಿ ಗ್ರಾಮದ ರೈತ ಈರಪ್ಪ ಹುಬ್ಬಳ್ಳಿ ಎಂಬುವರ 11 ಎಕರೆ ಜಮೀನು ಮಲಪ್ರಭಾ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈಗೀಗ ತಾನೇ ತನ್ನ ಬದುಕನ್ನ ಕಟ್ಟಿಕೊಳ್ಳಲು ಮುಂದಾದ ರೈತ ಈರಪ್ಪಗೆ ಯಾವುದೇ ಸಮನ್ಸ್​ ನೀಡದೆ ಪೊಲೀಸರು ಅರೆಸ್ಟ್​ ವಾರಂಟ್ ಜಾರಿ ಮಾಡಿದ್ದಾರೆ.

ಅಷ್ಟಕ್ಕೂ ಅರೆಸ್ಟ್​ ವಾರಂಟ್ ಜಾರಿ ಮಾಡಲು ಕಾರಣ ಏನಪ್ಪಾ ಅಂದ್ರೆ, 2014ರಲ್ಲಿ ಬೈಲಹೊಂಗಲದ ಐಸಿಐಸಿಐ ಬ್ಯಾಂಕ್​ನಲ್ಲಿ 2.67 ಲಕ್ಷ ರೂಪಾಯಿ ಸಾಲ ಮಾಡಿದ್ದ. ಬಳಿಕ 2016ರಲ್ಲಿ ಸಾಲದ ಮೇಲಿನ ಬಡ್ಡಿಯನ್ನು ರೈತ ಈರಪ್ಪ ಹುಬ್ಬಳ್ಳಿ ಪಾವತಿಸಿದ್ದ. ಆದ್ರೆ ಈಗ ಮತ್ತೆ ಬಡ್ಡಿ ಸೇರಿ 4.70 ಲಕ್ಷ ರೂ. ಸಾಲವಿದೆ ಅಂತ ಬ್ಯಾಂಕ್​ನವರು ಹೇಳ್ತಿದ್ದಾರೆ. ಅದೂ ಅಲ್ದೆ ಆಗಸ್ಟ್​ 28ರಂದೇ ಪೊಲೀಸರು ವಾರಂಟ್ ನೀಡಿ ವಾಪಸ್​ ಪಡೆದಿದ್ದರು. ಇದೀಗ ಬೆಳಗಾವಿ ಎಸ್​ಪಿ ಕಚೇರಿಯಿಂದಲೇ ರೈತ ಈರಪ್ಪಗೆ ವಾರಂಟ್ ನೀಡಿದ್ದಾರೆ.