AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನಚುಕ್ಕಿ ಜಲಪಾತೋತ್ಸವಕ್ಕೆ ಕಾಂಗ್ರೆಸ್- ಜೆಡಿಎಸ್ ನಡುವೆ ಪಾಲಿಟಿಕ್ಸ್, ಸರ್ಕಾರಕ್ಕೆ ಮಾಜಿ ಶಾಸಕ ಖಡಕ್ ಎಚ್ಚರಿಕೆ

ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಗಗನಚುಕ್ಕಿಯಲ್ಲಿ ಇದೇ ತಿಂಗಳ 14 ಹಾಗೂ 15ರಂದು ಗಗನಚುಕ್ಕಿ ಜಲಪಾತೋತ್ಸವ ನಡೆಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಆದರೆ ಗಗನಚುಕ್ಕಿ ಜಲಪಾತೋತ್ಸವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪಾಲಿಟಿಕ್ಸ್ ಆರಂಭಗೊಂಡಿದೆ. ಜಲಪಾತೋತ್ಸವ ಹೆಸರಲ್ಲಿ ತಮಿಳುನಾಡಿಗೆ ನೀರು ಹರಿಸುವ ಹುನ್ನಾರ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಗಗನಚುಕ್ಕಿ ಜಲಪಾತೋತ್ಸವಕ್ಕೆ ಕಾಂಗ್ರೆಸ್- ಜೆಡಿಎಸ್ ನಡುವೆ ಪಾಲಿಟಿಕ್ಸ್, ಸರ್ಕಾರಕ್ಕೆ ಮಾಜಿ ಶಾಸಕ ಖಡಕ್ ಎಚ್ಚರಿಕೆ
ಗಗನಚುಕ್ಕಿ ಜಲಪಾತೋತ್ಸವಕ್ಕೆ ಕಾಂಗ್ರೆಸ್- ಜೆಡಿಎಸ್ ನಡುವೆ ಪಾಲಿಟಿಕ್ಸ್, ಸರ್ಕಾರಕ್ಕೆ ಮಾಜಿ ಶಾಸಕ ಖಡಕ್ ಎಚ್ಚರಿಕೆ
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 09, 2024 | 4:36 PM

Share

ಮಂಡ್ಯ, ಸೆಪ್ಟೆಂಬರ್​ 09: ಸಕ್ಕರಿನಗರಿ ಮಂಡ್ಯ ಜಿಲ್ಲೆ ಅಂದರೆ ಹಾಗೇನೇ. ಇಲ್ಲಿ ಯಾವುದೇ ವಿಚಾರವಿದ್ದರೂ ಅಲ್ಲಿ ರಾಜಕಾರಣ ಇರುತ್ತದೆ. ಇದೀಗ ಗಗನಚುಕ್ಕಿ ಜಲಪಾತೋತ್ಸವ (Gaganachukki Waterfall Festival) ವಿಚಾರದಲ್ಲೂ ರಾಜಕಾರಣ ಶುರುವಾಗಿದೆ. ಸೆಪ್ಟೆಂಬರ್ 14 ಹಾಗೂ 15ರಂದು ಗಗನಚುಕ್ಕಿಯಲ್ಲಿ ಜಲಪಾತೋತ್ಸವ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಇದೀಗ ಇದರಲ್ಲೂ ಪಾಲಿಟಿಕ್ಸ್ ಆರಂಭಗೊಂಡಿದೆ.

ಸೆ. 14 ಹಾಗೂ 15ರಂದು ಗಗನಚುಕ್ಕಿ ಜಲಪಾತೋತ್ಸವ

ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಗಗನಚುಕ್ಕಿಯಲ್ಲಿ ಇದೇ ತಿಂಗಳ 14 ಹಾಗೂ 15ರಂದು ಗಗನಚುಕ್ಕಿ ಜಲಪಾತೋತ್ಸವ ನಡೆಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಎರಡೂ ದಿನಗಳ ಕಾಲ ನಡೆಯುವ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಸೆ.14 ರಂದು ಸಿಎಂ ಸಿದ್ದರಾಮಯ್ಯ ಚಾಲನೆ‌‌‌‌‌‌ ನೀಡಲಿದ್ದಾರೆ. ಕಾರ್ಯಕ್ರವನ್ನು ಅದ್ದೂರಿಯಾಗಿ ಮತ್ತು ಅರ್ಥ ಪೂರ್ಣವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆಗೆ ಬಹುತೇಕ ಅಭ್ಯರ್ಥಿ ಫಿಕ್ಸ್, ಜೆಡಿಎಸ್ ಪಾಲಾದ ಟಿಕೆಟ್

ಗಗನಚುಕ್ಕಿ ಜಲಪಾತೋತ್ಸವದ ಅಂಗವಾಗಿ ವಿದ್ಯುತ್ ದೀಪಾಂಲಕಾರ, ಲೇಸರ್ ಶೋ ಕೂಡ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಸಚಿವರಾದ ಚಲುವರಾಯಸ್ವಾಮಿ, ಹೆಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಸೇರಿ ಜಿಲ್ಲೆಯ ಶಾಸಕರು ಭಾಗಿಯಾಗುತ್ತಿದ್ದಾರೆ. ಇನ್ನು ಈ ಬಾರಿ ಉತ್ತಮ ಮಳೆಯಾಗಿ ಗಗನಚುಕ್ಕಿಗೆ ಉತ್ತಮ ಕಳೆ ಬಂದಿರುವ ಹಿನ್ನೆಲೆಯಲ್ಲಿ ಜಲಪಾತೋತ್ಸವ ಕಾರ್ಯಕ್ರಮವನ್ನ ನಡೆಸಲಾಗುತ್ತಿದೆ. ಇನ್ನು ಈ ಹಿಂದೆ ಹಲವು ವರ್ಷಗಳಿಂದಲೂ ಕೂಡ ಗಗನಚುಕ್ಕಿ ಜಲಪಾತೋತ್ಸವನ್ನ ಆಚರಣೆ ಮಾಡಿಕೊಂಡು ಬರಲಾಗಿದೆ.

ಅಂದಹಾಗೆ ಜಲಾಶಯಗಳು ತುಂಬಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತ ಮೈದುಂಬಿ ಧುಮುಕುತ್ತಿರುವ ಹಿನ್ನೆಲೆಯಲ್ಲಿ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಲಪಾತೋತ್ಸವ ನಡೆಸಲಾಗುತ್ತಿದೆ. ಆದರೆ ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಇದೇ ವಿಚಾರವಾಗಿ ಪಾಲಿಟಿಕ್ಸ್ ಆರಂಭವಾಗಿದೆ.

ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ

ಮಳವಳ್ಳಿ ತಾಲ್ಲೂಕಿನಲ್ಲಿ ಕೆರೆ ಕಟ್ಟೆ ತುಂಬಿಸಿಲ್ಲ. ನೀರಿಲ್ಲದೆ ರೈತರು, ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದಲ್ಲಿ ಜಲಪಾತೋತ್ಸವಕ್ಕೆ ನಿರ್ಧಾರ ಮಾಡಿದ್ದಾರೆ. ಮೊದಲು ಗಗನಚುಕ್ಕಿ ಜಲಪಾತೋತ್ಸವ ಮಾಡಿದ್ದೇ ನಾವು. ನಮ್ಮ ಕಾಲದಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದು. ಕೃತಕವಾಗಿ ನೀರು ಹರಿಸಿ ಗಗನಚುಕ್ಕಿ ಜಲಪಾತೋತ್ಸವ ಮಾಡುತ್ತೀರಾ? ಕಳೆದ ತಿಂಗಳು ಮಳೆಯಿಂದ ಸಾಕಷ್ಟು ನೀರು ಹರಿಯುತ್ತಿತ್ತು ಆವಾಗ ಜಲಪಾತೋತ್ಸವ ಮಾಡಬೇಕಿತ್ತು. ಕೃತಕ ನೀರು ಬಿಟ್ಟು ಗಗನಚುಕ್ಕಿ ಜಲಪಾತೋತ್ಸವ ಸರಿಯಲ್ಲ.

ಇದನ್ನೂ ಓದಿ: ಕಣ್ಸನ್ನೆ, ಕೈಸನ್ನೆ ಮೂಲಕ ಹಣದ ಆಮೀಷ ಒಡ್ಡಿದ ಮಂಡ್ಯ ಶಾಸಕ; HD ಕುಮಾರಸ್ವಾಮಿ ಗಂಭೀರ ಆರೋಪ

ಜಲಪಾತೋತ್ಸವ ಹೆಸರಲ್ಲಿ ತಮಿಳುನಾಡಿಗೆ ನೀರು ಹರಿಸುವ ಹುನ್ನಾರ ಮಾಡಲಾಗಿದೆ. ಜಲಪಾತೋತ್ಸವಕ್ಕೆ ಅಡ್ಡಿ ಮಾಡಿ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ. ಗಗನಚುಕ್ಕಿ ಜಲಪಾತೋತ್ಸವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪಾಲಿಟಿಕ್ಸ್ ಆರಂಭಗೊಂಡಿದೆ. ಕಾರ್ಯಕ್ರಮ ಯಾವ ರೀತಿ ನಡೆಯುತ್ತೆ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.