ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಸಂಚು​ ವಿಫಲ ಬೆನ್ನಲ್ಲೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೆ ಇಡೀ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿಬಿದ್ದಿತ್ತು. ಕಣ್ಣು ತೆರೆದು ಬಿಡುವಷ್ಟರಲ್ಲೇ ಎಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಎನ್​ಐಎ ಅಧಿಕಾರಿಗಳು ವಿಶೇಷ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಸಂಚು​ ವಿಫಲ ಬೆನ್ನಲ್ಲೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ
ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್​: ವಿಶೇಷ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಿದ NIA
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Sep 09, 2024 | 5:22 PM

ಬೆಂಗಳೂರು, ಸೆಪ್ಟೆಂಬರ್​​ 09: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameswaram Cafe) ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​​ಐಎ ಅಧಿಕಾರಿಗಳಿಂದ ನಾಲ್ವರು ಆರೋಪಿಗಳ ವಿರುದ್ಧ ವಿಶೇಷ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಕೆ ಮಾಡಲಾಗಿದೆ. ಆರೋಪಿಗಳಾದ ಅಬ್ದುಲ್ ಮತಿನ್ ತಾಹಾ, ಮುಸಾವೀರ್ ಹುಸೇನ್, ಶೋಯೆಬ್ ಮಿರ್ಜಾ ಸೇರಿ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

2024ರ ಜ.22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಪ್ರಾಣಪ್ರತಿಷ್ಠಾಪನೆ ಸಮಾರಂಭ ದಿನದಂದು ಕರ್ನಾಟಕದ ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಪ್ಲ್ಯಾನ್​ ವಿಫಲವಾದ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಲು ಪ್ಲ್ಯಾನ್​ ಮಾಡಿದ್ದರು. ಅದರಂತೆ ಆರೋಪಿಗಳು ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಿದ್ದರು ಎಂದು ಎನ್​ಐಎ ವಿಶೇಷ ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​​ಶೀಟ್​​​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಇಟ್ಟ ಶಂಕಿತ ಉಗ್ರನಿಗೆ ತೀರ್ಥಹಳ್ಳಿಯ ಲಿಂಕ್ ಇದೆ! ಪಿನ್​ ಟು ಪಿನ್ ಡೀಟೇಲ್ಸ್​ ಇಲ್ಲಿದೆ

ಮಾರ್ಚ್ ಒಂದರಂದು ನಡೆದಿದ್ದ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣದ ತನಿಖೆ ಚುರುಕಾಗಿತ್ತು. ಟೋಪಿವಾಲನ ಬೆನ್ನತ್ತಿರುವ ಎನ್​ಐಎ, ದಿಕ್ಕು ದಿಕ್ಕಿನಲ್ಲೂ ತಲಾಶ್ ನಡೆಸಿದ್ದರು. ತನಿಖೆ ವೇಳೆ ಮುಸಾವಿರ್ ಹುಸೇನ್ ಶಾಜೀಬ್ ಎಂಬಾತ ಬಾಂಬ್ ಇಟ್ಟಿರಬಹುದು. ಆತನಿಗೆ ಅಬ್ದುಲ್ ಮತೀನ್ ತಾಹ ಸಹಾಯ ಮಾಡಿರುವ ಶಂಕೆ ವ್ಯಕ್ತ ವ್ಯಕ್ತವಾಗಿತ್ತು. ಈ ಇಬ್ಬರು ಐಸಿಸ್ ಹಾಗೂ ಅಲ್ ಹಿಂದ್ ಗ್ರೂಪ್​ನ ಘೋಷಿತ ಉಗ್ರರು. ಕ್ರಿಮಿಗಳ ಜತೆ ಇವ್ರಿಗೆ ಕನೆಕ್ಷನ್​ ಇರಬಹುದೆಂದು ಇಬ್ಬರನ್ನೂ ಎನ್​ಐಎ ವಶಕ್ಕೆ ಪಡೆದಿತ್ತು.

ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರು ಬಿಸಿಬಿಸಿಯಾದ ಊಟವನ್ನ ಸವಿಯುತ್ತಿದ್ದರು. ಆದರೆ ಏಕಾಏಕಿ ಹೋಟೆಲ್​ನಲ್ಲಿ ಬಾಂಬ್​ ಸ್ಫೋಟಗೊಂಡಿತ್ತು. ಊಟ ಮಾಡ್ತಿದ್ದವರು ಬಿಟ್ಟು ಓಡಿದ್ದರು. ಹೋಟೆಲ್ ಸಿಬ್ಬಂದಿ ಫಾರುಖ್, ಅಮೇಜನ್ ಕಂಪನಿಯ ಸಿಬ್ಬಂದಿ ದೀಪಾಂಶು, ಸ್ವರ್ಣಾಂಬ, ಮೋಹನ್, ನಾಗಶ್ರೀ, ಮೋಮಿ, ಬಲರಾಮ್ ಕೃಷ್ಣನ್, ನವ್ಯಾ, ಶ್ರೀನಿವಾಸ್ ಗಾಯಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್​; ಎನ್​ಐಎ ತಂಡದಿಂದ ಸ್ಥಳ ಮಹಜರು

ಇದ್ರಲ್ಲಿ ಸ್ವರ್ಣಾಂಬಗೆ 40 ಪರ್ಸೆಂಟ್ ಸುಟ್ಟಗಾಯಗಳಾಗಿದ್ದವು. ಸ್ಫೋಟದ ತೀವ್ರತೆಗೆ ಮಹಿಳೆ ವಿಲವಿಲ ಒದ್ದಾಡಿದ್ದರು. ಜೊತೆಗೆ 8ರಿಂದ 9 ಮಂದಿಗೆ ಗಂಭೀರಗಾಯವಾಗಿತ್ತು. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಯ್ತು. ಓರ್ವನ ಸ್ಥಿತಿ ಚಿಂತಾಜನಕವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:46 pm, Mon, 9 September 24