AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟದ ರೈಲ್ವೆ ಯೋಜನೆ ಕಾಮಗಾರಿಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವದ್ವಯರು

ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ಹಾಗೂ ಕರ್ನಾಟಕ ಸಚಿವ ಎಂಬಿ ಪಾಟೀಲ್ ಅವರು ಇಂದು ನವದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಕರ್ನಾಟದ ರೈಲ್ವೆ ಯೋಜನೆ ಕಾಮಗಾರಿಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟದ ರೈಲ್ವೆ ಯೋಜನೆ ಕಾಮಗಾರಿಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವದ್ವಯರು
ಕರ್ನಾಟದ ರೈಲ್ವೆ ಯೋಜನೆ ಕಾಮಗಾರಿಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವದ್ವಯರು
Sunil MH
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 09, 2024 | 3:54 PM

Share

ಬೆಂಗಳೂರು, ಸೆಪ್ಟೆಂಬರ್​​ 09: 2026 ರೊಳಗೆ ಎರಡನೇ ಹಂತದ 70 ಕಿಮೀ ಸಬ್ ಅರ್ಬನ್ ರೈಲ್ವೆ ಯೋಜನೆ ಲೋಕಾರ್ಪಣೆ ಮಾಡುತ್ತೇವೆ. ಬೈಯಪ್ಪನಹಳ್ಳಿ – ಚಿಕ್ಕಬಾಣವಾರ 26 ಕಿಮೀ, ರಾಜನಕುಂಟೆ-ಹೀಳಳಿಗೆ 42 ಕಿಮೀ ರೈಲ್ವೆ ಯೋಜನೆ ಇದಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ‌ (V. Somanna) ಹೇಳಿದ್ದಾರೆ. ವಿಧಾನಸೌಧದಲ್ಲಿ ಕೇಂದ್ರ ಸಚಿವ ಸೋಮಣ್ಣ ಮತ್ತು ಸಚಿವ ಎಂ‌ಬಿ ಪಾಟೀಲ್ ಜಂಟಿ ಸುದ್ದಿಗೊಷ್ಠಿ ಮಾಡಿದ್ದಾರೆ.

ತುಮಕೂರು- ಚಿತ್ರದುರ್ಗ ರೈಲ್ವೆ ಶೀಘ್ರವಾಗಿ ಮುಕ್ತಾಯ

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ವಿ.ಸೋಮಣ್ಣ‌, ನಾನು, ಅಶ್ವಿನಿ ವೈಷ್ಣವ್ ವಂದೇ ಭಾರತ್ ನೋಡಲು ಬೆಂಗಳೂರಿಗೆ ಬಂದಿದ್ದೇವು. 15,700 ಕೋಟಿ ರೂ. ವೆಚ್ಚದ 160 ಕಿಮೀ ಉದ್ದದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದರು ಎಂದಿದ್ದಾರೆ.

ಇದನ್ನೂ ಓದಿ: ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ

ಅಂಡರ್ ಪಾಸ್ ಓವರ್ ಬ್ರಿಡ್ಜ್​ಗೆ ರೈಲ್ವೆ ಇಲಾಖೆ 2 ವರ್ಷದಲ್ಲಿ ಮುಗಿಸುತ್ತೇವೆ. ತುಮಕೂರು- ಚಿತ್ರದುರ್ಗ ರೈಲ್ವೆ ಶೀಘ್ರವಾಗಿ ಮುಗಿಸುತ್ತೇವೆ. 207 ಕಿ.ಮೀ ಕೆಲಸ ಟೆಂಡರ್ ಆಗಿದ್ದು, 3 ತಿಂಗಳಲ್ಲಿ ಪ್ಲ್ಯಾನ್​ ಆಗುತ್ತೆ. ಪೋರ್ಟ್​ಗಾಗಿ ಹುಬ್ಬಳ್ಳಿ- ಅಂಕೋಲಾಗೆ ಲೈನ್​ಗೆ ಚರ್ಚೆ ಮಾಡಿ ಮಾಡುತ್ತೇವೆ. ಚಿತ್ರದುರ್ಗ, ಕೊಪ್ಪಳ, ಆಲಮಟ್ಟಿ ಚಿಂತನೆ ಇದೆ. ಚಾಮರಾಜನಗರಕ್ಕೂ ಹೊಸ ಯೋಜನೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಲ್ಯಾಂಡ್ ಅಕ್ವೈಸೇಶನ್ ರಾಜ್ಯ ಸರ್ಕಾರವೇ ಮಾಡಬೇಕಾಗುತ್ತೆ: ವಿ.ಸೋಮಣ್ಣ‌

ವಿಜಯಪುರ ಹಾಗೂ ಮಂಗಳೂರು ಪೋರ್ಟ್​ಗೆ ಡಬ್ಲಿಂಗ್ ಲೈನ್ ಒಂದು ಹಂತಕ್ಕೆ ತರುತ್ತಿದ್ದೇವೆ. 50 ವರ್ಷಗಳಲ್ಲಿ ಆಗದ ಸಾಧನೆಯನ್ನು ಮೋದಿ ಅವರು ಮಾಡುತ್ತಿದ್ದಾರೆ. ಧಾರವಾಡ- ಚಿತ್ತೂರು ಲೈನ್ ಅಕ್ವೈಸೇಜನ್ ನಡಿತಿದೆ. ಯಾವುದು ಯಾವುದು ಇದೆ ಅವರನ್ನೇ ನಮ್ಮ ಎಂಆರ್​ ಸರ್ ಹತ್ರ ಕರಿಸಿ ಬಗೆಹರಿಸೋಣ. ಕೋಚ್​ಗಳನ್ನು ಕೊಂಡುಕೊಳ್ಳುವ ಬಗ್ಗೆಯೂ ಮಾತುಕತೆ ಆಗುತ್ತಿದೆ. ಹೊಸಲೈನ್​ಗೆ ಎಲ್ಲಾ ಸಂಸದರು ಬಯಸುತ್ತಿದ್ದೇವೆ. ಲ್ಯಾಂಡ್ ಅಕ್ವೈಸೇಶನ್ ಇನ್ಮೇಲೆ ರಾಜ್ಯ ಸರ್ಕಾರವೇ ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ.

ರೈಲ್ವೆ ಇಲಾಖೆ ಒಂದು ರೀತಿ ರಕ್ಷಣಾ ಇಲಾಖೆ ರೀತಿಯೇ ಇದೆ. ಒಬ್ಬ ಕನ್ನಡಿಗ ಮಂತ್ರಿ ಆಗಿರೋದು ಎಲ್ಲರಿಗೂ ಹೆಮ್ಮೆ. 2023-24ರಲ್ಲಿ 1.96 ಲಕ್ಷ ರೈಲು ಗಾಲಿ ಇಲ್ಲಿ ತಯಾರು ಮಾಡಲಾಗುತ್ತಿದೆ. ಈ ಸಂಸ್ಥೆ ಲಾಭಕ್ಕಾಗಿ ಕೆಲಸ ಮಾಡುತ್ತಿಲ್ಲ, ಜನರ ಸೇವೆಗಾಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ 3ನೇ ಹಂತದ ಕೆಲಸ ಆರಂಭ ಆಗಬೇಕಿದೆ. ರೈಲು ಗಾಲಿಗಳು ಇಲ್ಲಿಂದ ಅನೇಕ ದೇಶಗಳಿಗೆ ರಫ್ತು ಸಹ ಆಗುತ್ತಿದೆ ಎಂದಿದ್ದಾರೆ.

ಎಂಬಿ ಪಾಟೀಲ್ ಹೇಳಿದ್ದಿಷ್ಟು 

ಎಂಬಿ ಪಾಟೀಲ್ ಮಾತನಾಡಿ, ನಾವು ಕೇಂದ್ರ ಸಚಿವರ ನೇತೃತ್ವದ ಸಭೆಯಲ್ಲಿ ಮೆಟ್ರೋ, ಸಬ್ ಹರ್ಬನ್ ರೈಲು ಒಂದಕ್ಕೊಂದು ಕಾಂಪ್ಲಿಮೆಂಟ್ ಆಗಬೇಕು. ತುಮಕೂರು- ಬೆಂಗಳೂರು 4 ಲೈನ್ ಸಹ ಆಗುತ್ತಿದೆ. ಚಿತ್ರದುರ್ಗ, ಹೊಸಪೇಟೆ, ಆಲಮಟ್ಟಿ ಮಾರ್ಗದ ರೈಲ್ವೆಗೆ ಮಾಹಿತಿ ಮಾಡಿದ್ದೇವೆ. ಅದಕ್ಕೂ ಸ್ಪಂದನೆ ಕೊಟ್ಟಿದ್ದಾರೆ. ಪೋರ್ಟ್ ಇಂಡಸ್ಟ್ರೀಸ್​ಗಾಗಿ ಹೆಚ್ಚು ಒತ್ತು ಕೊಡಲು ಕೇಳಿದ್ದೇವೆ. ವಿಜಯಪುರ- ಬೆಂಗಳೂರು ಪ್ರಯಾಣ ಸಮಯ ಇಳಿಸಲು ಕೇಳಿದ್ದೇವೆ. ವಂದೇ ಭಾರತ್ ರೈಲ್ ಕೇಳಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಎತ್ತಿನಹೊಳೆ ಯೋಜನೆ ಉದ್ಘಾಟನೆ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ನೋಟಿಸ್​ ನೀಡಿದ ಕೇಂದ್ರ

ತುಮಕೂರು- ರಾಯದುರ್ಗ ವೇಗಕ್ಕೆ ಒತ್ತು ಕೊಡಲಾಗುವುದು. ಮಂಗಳೂರು, ಕಾರವಾರದ ಕನೆಕ್ಟಿವಿಟಿ, ಹುಬ್ಬಳ್ಳಿ- ಅಂಕೋಲಾ ಲೈನ್ ಮಾಡಬೇಕಿದೆ. ಈ ಎರಡೂ ಪೋರ್ಟ್ ಮಾಡಿದರೆ ಕೈಗಾರಿಕೆಗಳಿಗೆ ಸಹಕಾರಿಯಾಗುತ್ತೆ. ವಂದೇ ಭಾರತ್ ರೈಲು ಹೆಚ್ಚಳಕ್ಕೆ ಒತ್ತಾಯ ಮಾಡುತ್ತೇವೆ. ಎಲ್ಲಾ ನಮ್ಮ ಬೇಡಿಕೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಸಿದ್ದಾರೆ ಎಂದು ಹೇಳಿದ್ದಾರೆ.

ಯಾಕೆ ಭೇಟಿಯಾಗಬಾರದಾ?

ನಾನು ನನ್ನ ಇಲಾಖೆ ಕುರಿತು ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಸೆಂಟ್ರಲ್ ಮಿನಿಸ್ಟರ್​ಗಳನ್ನ ಭೇಟಿಯಾಗೋದು ಇದೆ. ಹೈ ಕಮಾಂಡ್ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಯಾಕೆ ಭೇಟಿಯಾಗಬಾರದಾ? ಸಮಯ ಸಿಕ್ಕರೆ ನಾನು ಭೇಟಿ ಆಗುತ್ತೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.