ನೀರಾವರಿ ಇಲಾಖೆಯಲ್ಲಿ ಗೋಲ್ಮಾಲ್​: ನಕಲಿ ಅಂಕಪಟ್ಟಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು!

2022ರ ಅಕ್ಟೋಬರ್​ನಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್​ಲಾಗ್​ ಹುದ್ದೆಗಳಿಗೆ ನೇರ ನೇಮಕಾತಿಗೆ ಪಿಯುಸಿಯಲ್ಲಿ ಫೇಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದಾರೆ. ಪಿಯುಸಿಯಲ್ಲಿ ಫೇಲಾದರೂ ಆಯ್ಕೆ ಹೇಗಾದರು ಎಂಬುವುದರ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.

ನೀರಾವರಿ ಇಲಾಖೆಯಲ್ಲಿ ಗೋಲ್ಮಾಲ್​: ನಕಲಿ ಅಂಕಪಟ್ಟಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು!
ಜಲ ಸಂಪನ್ಮೂಲ ಇಲಾಖೆ, ಪೊಲೀಸ್​ ನೋಟಿಸ್​
Follow us
ಅಮೀನ್​ ಸಾಬ್​
| Updated By: ವಿವೇಕ ಬಿರಾದಾರ

Updated on:Sep 09, 2024 | 2:15 PM

ಬೆಂಗಳೂರು, ಸೆಪ್ಟೆಂಬರ್​ 09: ನೀರಾವರಿ ಇಲಾಖೆಯ (Water Resources Department) ಹೊಸ ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ಅಭ್ಯರ್ಥಿಗಳು ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ವರ್ಷ ಜೂನ್​ 27 ರಂದು ಹೊಸದಾಗಿ 182 ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಆಯ್ಕೆಯಾದ 182 ಅಭ್ಯರ್ಥಿಗಳಲ್ಲಿ 62 ಜನರು ನಕಲಿ ಅಂಕಪಟ್ಟಿಯನ್ನು ನೀಡಿದ್ದಾರೆ ಎಂದು ಕೆಲ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.

2022ರ ಅಕ್ಟೋಬರ್​ನಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್​ಲಾಗ್​ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ದ್ವಿತೀಯ ಪಿಯುಸಿ, ಸಿಬಿಎಸ್​ಸಿ ಮತ್ತು ಎಸ್​​ಎಲ್​ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಯಾವುದೇ ಪರೀಕ್ಷೆ ಇರಲಿಲ್ಲ. ಈ ಹುದ್ದೆಗೆ ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಲಾಗಿತ್ತು.

ನಕಲಿ ಅಂಕಪಟ್ಟಿ ತಯಾರಿಸಿದ್ದು ಹೇಗೆ?

ಈ 62 ಜನ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಯ ನೋಂದಣಿ ಸಂಖ್ಯೆಯನ್ನು ತಿದ್ದಿದ್ದಾರೆ. ಹೆಚ್ಚಿನ ಅಂಕ ಪಡೆದವರ ಅಂಕಪಟ್ಟಿ ಪಡೆದು, ಅದನ್ನು ತಮ್ಮ ಅಂಕಪಟ್ಟಿಗೆ ಅಂಟಿಸಿಕೊಂಡಿದ್ದಾರೆ. ಬಳಿಕ ಅರ್ಜಿ ಸಲ್ಲಿಸಿದ್ದಾರೆ. ಅಧಿಕ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳು ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಅಂಕಪಟ್ಟಿಗೆ ನೀಡಿದ ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದ ರವಿಕುಮಾರ ಎಂಬುವವರಿಗೆ ಸಿಸಿಬಿ ನೋಟಿಸ್ ನೀಡಿದೆ.

ರವಿಕುಮಾರ್ ಪಿಯುಸಿಯಲ್ಲಿ ಫೇಲ್ ಆಗಿದ್ದಾನೆ. ಆದರೆ, ರವಿಕುಮಾರ್​, ಕವಿತಾ ಕಾಂಬ್ಳೆ ಎಂಬುವರ ಪಿಯುಸಿ ನೊಂದಣಿ ಸಂಖ್ಯೆ ಬಳಸಿಕೊಂಡು, ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ಇದನ್ನೂ ಓದಿ: ಮುಡಾದಲ್ಲಿ ಮತ್ತೊಂದು ಹಗರಣ: ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ

ನೊಂದ ಅಭ್ಯರ್ಥಿಯ ಅಳಲು

ಪ್ರಕರಣ ಸಂಬಂಧ ನೊಂದ ಅಭ್ಯರ್ಥಿ ಮಲ್ಲಿಕಾರ್ಜುನ ಕುರಕುಂದಿ ಮಾತನಾಡಿ, ಪರಿಶಿಷ್ಟ ಜಾತಿಯವರಿಗೆ ಮೀಸಲಾತಿಯ ಎಸ್.ಡಿ.ಎ ಬ್ಯಾಕ್ ಲಾಗ್ ಹುದ್ದೆಗಳ ನೇರ ನೇಮಕಾತಿ ನಡೆದಿದ್ದವು. 182 ಹುದ್ದೆಗಳ ನೇರ ನೇಮಾಕಾತಿ ನಡೆದಿದ್ದವು. ನಾನು ಕೂಡ ಎಸ್.ಡಿ.ಎ ಬ್ಯಾಕ್ ಲಾಗ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ದಾಖಲಾತಿ ಸಲ್ಲಿಸುವ ಪ್ರಕ್ರಿಯೆ ಇರಲಿಲ್ಲ. ನಂತರ 2022 ಡಿಸೆಂಬರ್ 5 ರಂದು ಅರ್ಹತಾ ಪಟ್ಟಿ ಪ್ರಕಟಿಸಲಾಗಿತ್ತು. ಆ ಲಿಸ್ಟ್ ನೋಡಿ ನಾವೆಲ್ಲ ಗಾಬರಿಗೊಂಡೆವು.

ಪಟ್ಟಿಯಲ್ಲಿನ ಎಲ್ಲ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಫಲಿತಾಂಶ ಗಮನಿಸಿದೆವು. ಆಯ್ಕೆಯಾದವರೆಲ್ಲ ನೂರಕ್ಕೆ ನೂರು, ನೂರಕ್ಕೆ 99 ಹಾಗೂ ನೂರಕ್ಕೆ 98 ಅಂಕ ಪಡೆದಿದ್ದರು. ಪಿಯುಸಿಯಲ್ಲಿ ಒಳ್ಳೆಯ ಫಲಿತಾಂಶ ಪಡೆದವರು ಇಲ್ಲಿಯವರೆಗೆ ಖಾಲಿ ಕೂರಲು ಸಾಧ್ಯನಾ ಎಂಬುದು ನಮಗೆ ಅನುಮಾನ ಬಂತು. ಕೆಲ ದಿನಗಳ ಬಳಿಕ ಸತ್ಯ ಬೆಳಕಿಗೆ ಬಂದಿದೆ ಎಂದು ಹೇಳಿದರು.

ನಾವು ಅಭ್ಯರ್ಥಿಗಳು ಏನೇನೋ ಸುಳ್ಳನ್ನು ಅಪ್ಲೋಡ್ ಮಾಡುತ್ತೇವೆ. ಆದರೆ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದಷ್ಟೇ ಅಲ್ಲ ಪರಿಶಿಷ್ಟ ಜಾತಿಗೆ ಮೀಸಲಿರುವ ಹುದ್ದೆಯಲ್ಲಿ ಕುಂಬಾರ, ವೀರಶೈವ, ಮುಸ್ಲಿಂ ಅವರಿಗೆ ಹೇಗೆ ನೌಕರಿ ಕೊಟ್ಟರು?. ಈ ಬಗ್ಗೆ ನಾವು ಸಂಬಂಧಪಟ್ಟ ಅಧಿಕಾರಿಗಳು ಕರೆ ಮಾಡಿ ಕೇಳಿದ್ವಿ, ಅವರು ಹಾರಿಕೆ ಉತ್ತರವನ್ನು ಕೊಟ್ಟರು ಎಂದರು.

ನೀರಾವರಿ ಇಲಾಖೆಯಲ್ಲಿ ಎರಡು ಅರ್ಹತಾ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ. ಎಸ್.ಎಸ್.ಎಲ್.ಸಿ ಪಾಸಾದ ಪಿಯುಸಿ ಫೇಲಾದವರ ನೊಂದಣಿ ಸಂಖ್ಯೆಯನ್ನು ತಿದ್ದಿದ್ದಾರೆ. ಬೇರೆಯವರ ನೋಂದಣಿ ಸಂಖ್ಯೆಯಿಂದ ಅಂಕಪಟ್ಟಿ ಸೃಷ್ಟಿಸಿದ್ದಾರೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವವರನ್ನು ತನಿಖೆಗೆ ಒಳಪಡಿಸಬೇಕು. ಅದರಲ್ಲಿ ಮತ್ತಷ್ಟು ಜನ ಸಿಕ್ಕಿಕೊಳ್ಳುತ್ತಾರೆ. ನ್ಯಾಯಯುತವಾದ ಆಯ್ಕೆ ಪ್ರಕ್ರಿಯೆ ನಡೆಯಬೇಕು. ತನಿಖೆ ಮಾಡಿದರೆ 182 ಜನರಲ್ಲಿ 100 ಜನ ಬೋಕಸ್ ಇರುವವರು ಸಿಗುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Mon, 9 September 24

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ