ಕ್ವಾರಂಟೈನ್ ಕರ್ಮಕಾಂಡ: ಊಟ, ಉಪಾಹಾರ, ಹಾಲಿಗಾಗಿ ಮಕ್ಕಳು-ಜನರ ಪರದಾಟ

ಬಾಗಲಕೋಟೆ: ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ಜನರಿಗೆ ಸರಿಯಾದ ಯಾವುದೇ ಮೂಲಸೌಕರ್ಯಗಳು ಸಿಗುತ್ತಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಸರ್ಕಾರ ಇನ್ನು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಗಲಕೋಟೆಯ ನವನಗರದ ಪದವಿ ಕಾಲೇಜಿನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಬಂದಿರುವ ಬಡ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಅವರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಅಧಿಕಾರಿಗಳೇ ಸಾಮಾಜಿಕ ಅಂತರ ಮರೆತು ಕ್ವಾರಂಟೈನ್ ಕೇಂದ್ರದಲ್ಲಿ […]

ಕ್ವಾರಂಟೈನ್ ಕರ್ಮಕಾಂಡ: ಊಟ, ಉಪಾಹಾರ, ಹಾಲಿಗಾಗಿ ಮಕ್ಕಳು-ಜನರ ಪರದಾಟ

Updated on: May 17, 2020 | 11:27 AM

ಬಾಗಲಕೋಟೆ: ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ಜನರಿಗೆ ಸರಿಯಾದ ಯಾವುದೇ ಮೂಲಸೌಕರ್ಯಗಳು ಸಿಗುತ್ತಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಸರ್ಕಾರ ಇನ್ನು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಗಲಕೋಟೆಯ ನವನಗರದ ಪದವಿ ಕಾಲೇಜಿನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಬಂದಿರುವ ಬಡ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ಅವರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಅಧಿಕಾರಿಗಳೇ ಸಾಮಾಜಿಕ ಅಂತರ ಮರೆತು ಕ್ವಾರಂಟೈನ್ ಕೇಂದ್ರದಲ್ಲಿ ಜನರನ್ನು ಜಾನುವಾರುಗಳು, ಕುರಿಗಳಂತೆ ತುಂಬಿದ್ದಾರೆ.

ಚಿಕ್ಕ ಚಿಕ್ಕ ಕಂದಮ್ಮಗಳು ಹಸಿವು, ಜ್ವರದಿಂದ ಬಳಲುತ್ತಿವೆ. ಕ್ವಾರಂಟೈನ್​ನಲ್ಲಿರುವ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಕೂಡ ಸಿಗುತ್ತಿಲ್ಲ. ಸರಿಯಾದ ಸಮಯಕ್ಕೆ ಊಟ, ಉಪಹಾರವಿಲ್ಲ. ಊಟ ಕೊಡ್ರು ಅದರ ಗುಣಮಟ್ಟ ಸರಿ ಇರಲ್ಲ. ಇಲ್ಲಿರುವ 150ಕ್ಕೂ ಹೆಚ್ಚು ಮಂದಿಗೆ ಒಂದೇ ನಲ್ಲಿ ಇರೋದು. ಕುಡಿಯೋದಕ್ಕೂ ಅದೇ ನೀರು. ಬಟ್ಟೆ, ಪಾತ್ರೆ ತೊಳೆಯೋದಕ್ಕೂ ಅದೇ ನೀರು ಬಳಸಬೇಕು. ಮಹಿಳೆಯರಿಗೆ ಶೌಚಾಲಯ, ಸ್ನಾನಕ್ಕೆ ತೊಂದರೆ ಇದೆ.

ಇಲ್ಲಿ ನಮ್ಮನ್ನು ಪ್ರಾಣಿಗಳಂತೆ ನೋಡಿಕೊಳ್ಳಲಾಗುತ್ತಿದೆ. ನಮ್ಮನ್ನು ನಮ್ಮ ಊರಿಗೆ ಕಳಿಸಿ ಹೊಲದಲ್ಲಿ ಗುಡ್ಡಗಾಡಿನಲ್ಲಿ ಇರುತ್ತೇವೆ. ನಮ್ಮ ಊರಿಗೆ ಕಾಲಿಡೋದಿಲ್ಲ. ಆದರೆ ಇಲ್ಲಿ ಇಂತಹ ಕರ್ಮಕಾಂಡದಲ್ಲಿ ಇಡಬೇಡಿ ಎಂದು ಕ್ವಾರಂಟೈನ್​ನಲ್ಲಿರುವ ಜನರು ಮನವಿ ಮಾಡಿಕೊಂಡ್ರು.