ಲಾಕ್​ಡೌನ್​ ನಿಯಮ ಉಲ್ಲಂಘಿಸಿ RTO ಕಚೇರಿಯಲ್ಲಿ ಹೋಮ-ಹವನ

ಸಾಧು ಶ್ರೀನಾಥ್​

|

Updated on:May 17, 2020 | 1:36 PM

ಆನೇಕಲ್: ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಸರ್ಕಾರಿ ಕಚೇರಿಯಲ್ಲಿ ಹೋಮ-ಹವನ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಆರ್​ಟಿಒ ಕಚೇರಿಯಲ್ಲಿ ನಡೆದಿದೆ. RTO ಅಧಿಕಾರಿ ಶ್ರೀನಿವಾಸಪ್ಪ ನೇತೃತ್ವದಲ್ಲಿ ಸುಮಾರು 8ಕ್ಕೂ ಅಧಿಕ ಮಂದಿ ಪುರೋಹಿತರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೋಮ-ಹವನ ಮಾಡಲಾಗಿದೆ. ಈ ವೇಳೆ RTO ಅಧಿಕಾರಿಗಳು, ಸಿಬ್ಬಂದಿ ಮಾಸ್ಕ್​ ಧರಿಸದೇ, ಅಂತರ ಮರೆತು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಲಾಕ್​ಡೌನ್ ಮತ್ತು 144 ಸೆಕ್ಷನ್ ಜಾರಿ ಇದ್ರೂ ಕಾನೂನು ಪಾಲಿಸಬೇಕಾದ ಅಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆಯಾಗಿದೆ. ಕೇಂದ್ರ […]

ಲಾಕ್​ಡೌನ್​ ನಿಯಮ ಉಲ್ಲಂಘಿಸಿ RTO ಕಚೇರಿಯಲ್ಲಿ ಹೋಮ-ಹವನ

ಆನೇಕಲ್: ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಸರ್ಕಾರಿ ಕಚೇರಿಯಲ್ಲಿ ಹೋಮ-ಹವನ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಆರ್​ಟಿಒ ಕಚೇರಿಯಲ್ಲಿ ನಡೆದಿದೆ.

RTO ಅಧಿಕಾರಿ ಶ್ರೀನಿವಾಸಪ್ಪ ನೇತೃತ್ವದಲ್ಲಿ ಸುಮಾರು 8ಕ್ಕೂ ಅಧಿಕ ಮಂದಿ ಪುರೋಹಿತರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೋಮ-ಹವನ ಮಾಡಲಾಗಿದೆ. ಈ ವೇಳೆ RTO ಅಧಿಕಾರಿಗಳು, ಸಿಬ್ಬಂದಿ ಮಾಸ್ಕ್​ ಧರಿಸದೇ, ಅಂತರ ಮರೆತು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಲಾಕ್​ಡೌನ್ ಮತ್ತು 144 ಸೆಕ್ಷನ್ ಜಾರಿ ಇದ್ರೂ ಕಾನೂನು ಪಾಲಿಸಬೇಕಾದ ಅಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಕಾರ್ಯಕ್ರಮ ಮಾಡಬೇಕಿದ್ರು ತಾಲೂಕು ಆಡಳಿತದಿಂದ ಕಡ್ಡಾಯ ಅನುಮತಿ ಪಡೆಯಬೇಕು. ಆದರೆ ಅನುಮತಿ ಸಹ ಪಡೆಯದೇ ಸರ್ಕಾರಿ ಕಚೇರಿಯಲ್ಲಿ ಹೋಮ-ಹವನ ಮಾಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada