ರಸ್ತೆಗುಂಡಿಗೆ ತಪ್ಪಿಸಲು ಪಕ್ಕಕ್ಕೆ ಸರಿದ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಹಿಳೆಯ ಮೇಲೆ ಟಿಪ್ಪರ್ ಲಾರಿ ಹರಿದು, ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಈ ದುರಂತ ನಡೆದಿದೆ. ಮೊನ್ನೆ ಇದೇ ರಸ್ತೆಯಲ್ಲಿ ಟಿಪ್ಪರ್ ಹರಿದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದರು.
ಒಂದೇ ಕುಟುಂಬದ ಮೂವರು ಬೈಕ್ ಮೇಲೆ ಬರುತ್ತಿದ್ದರು. ಆ ವೇಳೆ ರಸ್ತೆ ಗುಂಡಿ ಕಂಡು ವಾಹನವನ್ನು ಪಕ್ಕಕ್ಕೆ ತಿರುಗಿಸಿದಾಗ ಟಿಪ್ಪರ್ ಲಾರಿ ಮಹಿಳೆಯ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿದ್ದ ಇನ್ನಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ 17 ವರ್ಷದ ನುಬಿಯಾ ಮೃತಪಟ್ಟಿದ್ದಾರೆ. 15 ವರ್ಷದ ಆಫ್ರೀನ್ ಮತ್ತು ಅರ್ಹಾನ್ ಗಾಯಗೊಂಡಿದ್ದಾರೆ.
ಇದೇ ರಸ್ತೆಯಲ್ಲಿ ಈ ಹಿಂದೆಯೂ ಟಿಪ್ಪರ್ ಹರಿದು ಇಬ್ಬರು ಬಲಿಯಾಗಿದ್ದರು. ಅಬಕಾರಿ ಇಲಾಖೆ ಸಬ್ಇನ್ಸ್ಪೆಕ್ಟರ್ ಕೃಷ್ಣಪ್ಪ ಬಲಿಯಾಗಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿತ್ತು.
Also Read:
ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ವರದಿ ಸಿದ್ಧಪಡಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ
Also Read:
ಸಚಿವರ ಮನೆ ಬಳಿ ರಸ್ತೆ ಉತ್ತಮಗೊಂಡರೆ ಸಾಲದು; ಬಡವರ ಮನೆ ಬಳಿ ರಸ್ತೆಯೂ ಸರಿಯಾಗಬೇಕು: ಹೈಕೋರ್ಟ್
Bengaluru ರಸ್ತೆ ಗುಂಡಿಗೆ ಮತ್ತೊಂದು ಬಲಿ Pothole ತಪ್ಪಿಸಲು ಹೋಗಿ Bikeನಿಂದ ಬಿದ್ದ ಮಹಿಳೆ ಸಾವು|Tv9Kannada