ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಹೌದೋ, ಅಲ್ಲವೋ ಹೇಳಲಿ: ಮುತಾಲಿಕ್
ಕೊಲೆ ಮಾಡಿದವರೇ ನನ್ನ ಅಕ್ಕನ ಬಗ್ಗೆ ಮಾತನಾಡುತ್ತಾರೆ. ಇದರಿಂದ ನಮಗೂ ಬೇಜಾರಾಗುವುದಿಲ್ಲವೇ? ಎಂದು ಇಂದ್ರಜಿತ್ ಲಂಕೇಶ್ ತಮ್ಮ ನೋವು ತೋಡಿಕೊಂಡಿದ್ರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದ್ರಜಿತ್ ಲಂಕೇಶ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನಿನ್ನೆಯ ಹೇಳಿಕೆಗೆ ಇಂದು ಮರುಜೀವ.. ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಎಬ್ಬಿಸಿರುವ ಸುಂಟರಗಾಳಿಗೆ ಸಂಬಂಧಪಟ್ಟಂತೆ ಪ್ರಮೋದ್ ಮುತಾಲಿಕ್ ಅವರು, ಇಂದ್ರಜಿತ್ ಲಂಕೇಶ್ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ ವ್ಯಸನಿ ಆಗಿದ್ದರೆಂದು ಹೇಳಿಕೆ […]
ಕೊಲೆ ಮಾಡಿದವರೇ ನನ್ನ ಅಕ್ಕನ ಬಗ್ಗೆ ಮಾತನಾಡುತ್ತಾರೆ. ಇದರಿಂದ ನಮಗೂ ಬೇಜಾರಾಗುವುದಿಲ್ಲವೇ? ಎಂದು ಇಂದ್ರಜಿತ್ ಲಂಕೇಶ್ ತಮ್ಮ ನೋವು ತೋಡಿಕೊಂಡಿದ್ರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದ್ರಜಿತ್ ಲಂಕೇಶ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆಯ ಹೇಳಿಕೆಗೆ ಇಂದು ಮರುಜೀವ.. ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಎಬ್ಬಿಸಿರುವ ಸುಂಟರಗಾಳಿಗೆ ಸಂಬಂಧಪಟ್ಟಂತೆ ಪ್ರಮೋದ್ ಮುತಾಲಿಕ್ ಅವರು, ಇಂದ್ರಜಿತ್ ಲಂಕೇಶ್ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ ವ್ಯಸನಿ ಆಗಿದ್ದರೆಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಸಂಬಂಧಪಟ್ಟಂತೆ ಇಂದು ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದರು. ಆದರೆ ಈಗ ಇಂದ್ರಜಿತ್ ಲಂಕೇಶ್ ಅವರ ಪ್ರತಿಕ್ರಿಯೆಗೆ ಕೆಂಡಾಮಂಡಲವಾಗಿರುವ ಪ್ರಮೋದ್ ಮುತಾಲಿಕ್ ಅವರು, ಇಂದ್ರಜಿತ್ ಲಂಕೇಶ್ ಮೇಲೆ ಹರಿಹಾಯ್ದಿದ್ದಾರೆ.
ಮೊದಲು ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಹೌದೋ ಇಲ್ಲವೋ ಹೇಳಿ. ಅವರು ಎಲ್ಲಿ ಡ್ರಗ್ ಸೇವನೆ ಮಾಡುತ್ತಿದ್ದದ್ದು ಎಂಬುದನ್ನ ನಾನು ತೋರಿಸ್ತೀನಿ. ನಾಲ್ಕು ನಟಿಯರು ಮಾಡಿದ್ದಕ್ಕೆ ಆರೋಪ ಮಾಡ್ತೀರಾ, ಜನರು ನಿಮಗೆ ಥೂ.. ಛೀ.. ಎನ್ನುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ಗೆ ಮುತಾಲಿಕ್ ಟಾಂಗ್ ಕೊಟ್ಟಿದ್ದಾರೆ.
ಗೌರಿ ಹತ್ಯೆಯಲ್ಲಿ ಶ್ರೀರಾಮ ಸೇನೆಯ ಪಾತ್ರವಿಲ್ಲ.. ಗೌರಿ ಲಂಕೇಶ್ ಹತ್ಯೆಯಲ್ಲಿ ಶ್ರೀರಾಮ ಸೇನೆಯ ಪಾತ್ರವಾಗಲೀ, ನನ್ನ ಪಾತ್ರವಾಗಲೀ ಇಲ್ಲ. ನನ್ನ ಮೇಲೆ ವಿನಾಕಾರಣ ಆರೋಪ ಮಾಡಬೇಡಿ. ಹೀಗಾಗಿ ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಮುತಾಲಿಕ್ ಗುಡುಗಿದ್ದಾರೆ.
ಹ್ಯಾರೀಸ್ ಕ್ಷೇತ್ರದಲ್ಲಿರುವ ಕಾಲೇಜುಗಳಲ್ಲಿ ಡ್ರಗ್ ದಂಧೆ ಹೆಚ್ಚಾಗಿದೆ.. ಬೆಂಗಳೂರಿನ ಬಿಷಪ್, ಬಾಲ್ಡ್ ವಿನ್ ಗರ್ಲ್ಸ್ ಹೈಸ್ಕೂಲ್ ಸೇರಿ ಏಳು ಕಾಲೇಜಿನಲ್ಲಿ ಡ್ರಗ್ಸ್ ಸಿಗ್ತಿದೆ. ಹ್ಯಾರೀಸ್ ಕ್ಷೇತ್ರದಲ್ಲಿರುವ ಕಾಲೇಜುಗಳಲ್ಲಿ ಡ್ರಗ್ ದಂಧೆ ಹೆಚ್ಚಾಗಿದೆ. ದಾವಣಗೆರೆಯಲ್ಲಿಯೂ ಸಹ ಡ್ರಗ್ಸ್ ಜಾಲ ಇದೆ. ಜೊತೆಗೆ ಗೋವಾದಲ್ಲಿ ಡ್ರಗ್ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅಲ್ಲಿ ಡ್ರಗ್ ಬ್ಯಾನ್ ಆಯಿತು. ಕಳೆದ ಆರು ವರ್ಷದಿಂದ ಗೋವಾಕ್ಕೆ ಡ್ರಗ್ಸ್ ಕಾಲಿಡಲು ಅನುಮತಿ ನೀಡಿಲ್ಲ. ಹೀಗಾಗಿ ಡ್ರಗ್ಸ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.