ಹೊಸ ಬಾಂಬ್​ ಸಿಡಿಸಿದ ಸಂಬರಗಿ: ಕನ್ನಡ ಪರ ಹೋರಾಟಗಾರರ ಬಗ್ಗೆ ಹೇಳಿದ್ದೇನು?

ಹೊಸ ಬಾಂಬ್​ ಸಿಡಿಸಿದ ಸಂಬರಗಿ: ಕನ್ನಡ ಪರ ಹೋರಾಟಗಾರರ ಬಗ್ಗೆ ಹೇಳಿದ್ದೇನು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ನಿದ್ದೆ ಕೆಡಿಸಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈಗ ಕನ್ನಡ ಪರ ಹೋರಾಟಗಾರರ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೆ ಮಂಜು ಕೆಲವು ದಿನಗಳ ಹಿಂದೆ ಸಂಬರಂಗಿಯನ್ನು ಕನ್ನಡಪರ ಹೋರಾಟಗಾರನೇ ಅಲ್ಲ ಎಂದಿದ್ದರು, ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿರುವ ಸಂಬರಂಗಿ ಕನ್ನಡಪರ ಸಂಘಟನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಡೈಲಾಗ್ ಮೇಲೆ ಡೈಲಾಗ್ ಹೊಡೆಯುತ್ತಿರೊ ಪ್ರಶಾಂತ್ ಸಂಬರಗಿ, ಕಾವೇರಿ ಹೋರಾಟ ಬಂದಾಗ ನಾಲ್ಕು ಕೆಟ್ಟ […]

sadhu srinath

|

Sep 16, 2020 | 10:34 AM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ನಿದ್ದೆ ಕೆಡಿಸಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈಗ ಕನ್ನಡ ಪರ ಹೋರಾಟಗಾರರ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕೆ ಮಂಜು ಕೆಲವು ದಿನಗಳ ಹಿಂದೆ ಸಂಬರಂಗಿಯನ್ನು ಕನ್ನಡಪರ ಹೋರಾಟಗಾರನೇ ಅಲ್ಲ ಎಂದಿದ್ದರು, ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿರುವ ಸಂಬರಂಗಿ ಕನ್ನಡಪರ ಸಂಘಟನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಡೈಲಾಗ್ ಮೇಲೆ ಡೈಲಾಗ್ ಹೊಡೆಯುತ್ತಿರೊ ಪ್ರಶಾಂತ್ ಸಂಬರಗಿ, ಕಾವೇರಿ ಹೋರಾಟ ಬಂದಾಗ ನಾಲ್ಕು ಕೆಟ್ಟ ಮಾತಾನಾಡಿ, ಆಟೋ ಒಡೆದು ಹಾಕಿ, ಟೈರ್ ಅಂಗಡಿಯಲ್ಲಿ ಟೈರ್ ತಂದು ಸುಟ್ಟವನು ಕನ್ನಡಿಗನಾ? ತಮಿಳುನಾಡು ಗಾಡಿ, ಪ್ರಾಪರ್ಟಿ ಡ್ಯಾಮೇಜ್ ಮಾಡುವವನು ಕನ್ನಡಿಗನಾ? ಅವನು ಮಾತ್ರ ಫೇಸ್ ಬುಕ್ ಟ್ರೋಲ್ ಮಾಡಿ ಫೇಮಸ್ ಆಗಬೇಕಾ? ಫೇಸ್ ಬುಕ್ ಶೆಟ್ ಡೌನ್ ಆದಾಗ ನಿಜವಾದ ಕನ್ನಡಿಗ ಯಾರಂತ ಗೊತ್ತಾಗುತ್ತೆ? ಎಂದು ಪ್ರಶ್ನೆ ಮಾಡಿದ್ದಾರೆ.

ಒಬ್ಬ ದೊಡ್ಡವರ ಕಥೆ ವ್ಯಂಗ್ಯವಾಗಿ ಹೇಳಿರುವ ಸಂಬರಗಿ, ಕನ್ನಡ ಅಂತ ಹೇಳಿ ಸಂಘ ಕಟ್ಟಿ, ಐಡಿ ಕಾರ್ಡ್ ಕೊಟ್ಟಿರುವವನು ಕನ್ನಡಿಗನಾ? ಈ ವ್ಯಕ್ತಿ 24 ಗಂಟೆ ಕನ್ನಡಕ್ಕಾಗಿ ಹೋರಾಟ ಮಾಡ್ತಾರೆ ಮನೆ ಕಡೆ ಗಮನನೇ ಕೊಡಲ್ಲ? ಆದ್ರೂ ಅವ್ರ ಮನೆ ನೋಡಿದ್ರೆ ಕಣ್ ಕೆಂಪಗೆ ಆಗುತ್ತೆ? ಇವ್ರು ಬಂದ್ ಮಾಡಿದ್ದರೆ ಪಕ್ಕದ ರಾಜ್ಯದವ್ರು ಎಕರೆ ಗಟ್ಟಲೆ ಜಮೀನ್ ಕೊಡ್ತಾರೆ. ಇವ್ರು ನಿಜವಾದ ವೆರಿಫೈಡ್ ಕನ್ನಡಿಗಾ? ನೀವಲ್ಲ, ನಾವಲ್ಲ ಅಂತ ವ್ಯಂಗ್ಯ ಮಾಡಿದ್ದಾರೆ.

ಕನ್ನಡ ಪರ ಹೋರಾಟಗಾರರಿಗೆ ಏನೋ ಕಲೆಕ್ಷನ್ ಇದೆ, ಏನೋ ಕನೆಕ್ಷನ್ ಇದೆ ಎಂದು ಒತ್ತಿ ಹೇಳಿರುವ ಸಂಬರಗಿ, ನಿಜವಾದ ಕನ್ನಡಿಗ ಯಾರು ಅಂತ ಪ್ರಶ್ನೆ ಮಾಡಿದ್ದಾರೆ. ಹಿಂದಿ ಹೇರಿಕೆ ವಿಚಾರವಾಗಿ ಸಾಕಷ್ಟು ಪರ ವಿರೋಧಗಳ ಚರ್ಚೆ ಮಧ್ಯೆ ಸಂಬರಂಗಿ ಹೊಸ ವಿವಾದಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರೆಲ್ ಆಗಿದೆ.

Follow us on

Related Stories

Most Read Stories

Click on your DTH Provider to Add TV9 Kannada