AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಬ್ಬಬ್ಬಾ… ಇದೇನಿದು ಅಚ್ಚರಿ; ನಾಯಿ ಮರಿಗಳೊಂದಿಗೆ ಆಟವಾಡಿದ ಸಿಂಹಗಳು

ಕಾಡು ಪ್ರಾಣಿಗಳು ಆಹಾರವನ್ನರಸುತ್ತಾ ನಾಡಿನತ್ತ ಬರುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿಯೂ ಕಾಡು ಪ್ರಾಣಿಗಳ, ವಿಶೇಷವಾಗಿ ಸಿಂಹಗಳು ಮತ್ತು ಚಿರತೆಗಳ ಸಂಚಾರ ಹೆಚ್ಚಾಗಿದ್ದು, ಅಚ್ಚರಿಯ ಸಂಗತಿ ಏನೆಂದ್ರೆ ಇಲ್ಲಿನ ಊರೊಳಗೆ ಎಂಟ್ರಿಕೊಟ್ಟ ಎರಡು ಸಿಂಹಗಳು ನಾಯಿಮರಿಯೊಂದಿಗೆ ಆಟವಾಡಿವೆ. ಈ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Video: ಅಬ್ಬಬ್ಬಾ… ಇದೇನಿದು ಅಚ್ಚರಿ; ನಾಯಿ ಮರಿಗಳೊಂದಿಗೆ ಆಟವಾಡಿದ ಸಿಂಹಗಳು
ವೈರಲ್‌ ವಿಡಿಯೋImage Credit source: Social Media
ಮಾಲಾಶ್ರೀ ಅಂಚನ್​
|

Updated on: Dec 20, 2025 | 12:30 PM

Share

ಗುಜರಾತ್‌, ಡಿಸೆಂಬರ್ 20: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಆಹಾರವನ್ನರಸುತ್ತಾ ಬರುವ ಆನೆ, ಹುಲಿ, ಚಿರತೆಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಅದರಲ್ಲೂ ಹುಲಿ, ಸಿಂಹಗಳಂತೂ (lions) ಬೀದಿಯಲ್ಲಿ ಓಡಾಡುವ ಶ್ವಾನಗಳು,ಇನ್ಯಾವುದೇ ಪ್ರಾಣಿಗಳನ್ನು ಕಂಡರೂ ಬಡೆದು ಬಾಯಿಗೆ ಹಾಕಿಬಿಡುತ್ತವೆ. ಆದ್ರೆ ಗುಜರಾತ್‌ನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗ್ರಾಮದೊಳಗೆ ಪ್ರವೇಶಿಸಿದ  ಸಿಂಹಗಳ ಗುಂಪು ದಾಳಿ ನಡೆಸುವ ಬದಲು ಅಲ್ಲಿದ್ದ ನಾಯಿ ಮರಿಗಳೊಂದಿಗೆ ಆಟವಾಡಿ, ನಾಯಿ ಮರಿಗಳಿಗೆ ಯಾವುದೇ ತೊಂದರೆ ಕೊಡದೆ ವಾಪಸ್‌ ಹೊರಟು ಹೋಗಿವೆ. ಈ ಅಚ್ಚರಿಯ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ನಾಯಿ ಮರಿಯೊಂದಿಗೆ ಆಟವಾಡಿದ ಸಿಂಹ:

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ರಾಜುಲಾ ಪ್ರದೇಶದ ಕೊವಾಯಾ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಮಧ್ಯರಾತ್ರಿ ಗ್ರಾಮದೊಳಗೆ ಎಂಟ್ರಿಕೊಟ್ಟಂತಹ ಎರಡು ಸಿಂಹಗಳು ಅಲ್ಲಿದ್ದ ಮುದ್ದಾದ ನಾಯಿ ಮರಿಗಳ ಜೊತೆ ಚೆಂದವಾಗಿ ಆಟವಾಡಿವೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಹಾರವನ್ನರಸುತ್ತಾ ಬಂದಂತಹ ಆ ಸಿಂಹಗಳು ಅತ್ತಿಂದಿತ್ತ ಅಡ್ಡಾಡ್ಡಿ, ನಾಯಿ ಮರಿಗಳೊಂದಿಗೆ ಆಟವಾಡಿ ಅವುಗಳಿಗೆ ಒಂದು ಚೂರು ತೊಂದರೆ ಕೊಡದೆ ವಾಪಸ್‌ ಹೊರಟು ಹೋಗಿವೆ.

ಸಿಸಿ ಟಿವಿ ದೃಶ್ಯದಲ್ಲಿ ಸಿಂಹಗಳು ವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಸಿಂಹಗಳನ್ನು ಕಂಡು ಭಯಗೊಂಡ ನಾಯಿಮರಿಗಳೆರಡು ಅಲ್ಲಿಂದ ಓಡಿ ಹೋಗಿವೆ. ಆ ನಾಯಿಮರಿಗಳ ಹಿಂದೆಯೇ ಓಡಿ ಹೋದ ಸಿಂಹಗಳು ಅವುಗಳೊಂದಿಗೆ ಆಟವಾಡಿ, ಏನು ತೊಂದರೆ ಕೊಡದೆ ಅಲ್ಲಿಂದ ಹೊರಟು ಹೋಗಿವೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಕಾಡು ಪ್ರಾಣಿಗಳ ಓಡಾಟದಿಂದ ಸ್ಥಳೀಯ ಜನರಲ್ಲಿ ಆತಂಕ:

ಅಮ್ರೇಲಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಸಿಂಹಗಳು ಮತ್ತು ಚಿರತೆಗಳ ಓಡಾಟ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ. ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿಯಂತ್ರಿಸಲು, ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಆರೋಪಿಗಳು ಜಿಲೆಟಿನ್ ಇಟ್ಟಿದ್ಯಾಕೆ?
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಆರೋಪಿಗಳು ಜಿಲೆಟಿನ್ ಇಟ್ಟಿದ್ಯಾಕೆ?
ಬೆಂಗಳೂರಿನಲ್ಲೊಂದು ವಿಚಿತ್ರ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!
ಬೆಂಗಳೂರಿನಲ್ಲೊಂದು ವಿಚಿತ್ರ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?
ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್
ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್
ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ
ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ
ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: ರಂಗೋಲಿಯಲ್ಲಿ ಮೂಡಿದ ಡಿಕೆಶಿ
ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: ರಂಗೋಲಿಯಲ್ಲಿ ಮೂಡಿದ ಡಿಕೆಶಿ