ಮಸ್ಕಿ ಬೈಎಲೆಕ್ಷನ್; ನಾಳೆ ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾನೆ ಮತದಾರ
ನಾಳೆ ನಡೆಯುವ ಮತದಾನಕ್ಕಾಗಿ ಒಟ್ಟು 305 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಈ ಮೊದಲು 231 ಮತಗಟ್ಟೆಗಳಿದ್ದವು. ಕೊವಿಡ್ ಹಿನ್ನೆಲೆಯಲ್ಲಿ 74 ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 62 ಸೂಕ್ಷ್ಮ, 7 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ. ಒಟ್ಟು 2,309 ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ.
ರಾಯಚೂರು: ರಾಜ್ಯದ ಮೂರು ಕ್ಷೇತ್ರಗಳ ಬೈಎಲೆಕ್ಷನ್ ಪ್ರಚಾರಕ್ಕೆ ತೆರೆಬಿದ್ದಿದೆ. ಏಪ್ರಿಲ್ 17 ಅಂದ್ರೆ ನಾಳೆ ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಲಿದೆ. ನಾಳೆ ಮಸ್ಕಿ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಹೀಗಾಗಿ ಜಿಲ್ಲಾಡಳಿತ ಇಂದು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ನಾಳೆ ನಡೆಯುವ ಮತದಾನಕ್ಕಾಗಿ ಒಟ್ಟು 305 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಈ ಮೊದಲು 231 ಮತಗಟ್ಟೆಗಳಿದ್ದವು. ಕೊವಿಡ್ ಹಿನ್ನೆಲೆಯಲ್ಲಿ 74 ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 62 ಸೂಕ್ಷ್ಮ, 7 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ. ಒಟ್ಟು 2,309 ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. ಹಾಗೂ ಒಟ್ಟು 2,06,429 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಅದರಲ್ಲಿ 1,01,340 ಪುರುಷ, 10,576 ಮಹಿಳಾ ಹಾಗು 13 ಇತರೆ ಮತದಾರರಿದ್ದಾರೆ. ಒಟ್ಟು 2 ಸಖಿ ಮತಗಟ್ಟೆಗಳಿವೆ. 153 ವೆಬ್ ಕಾಸ್ಟಿಂಗ್ ಮತಗಟ್ಟೆಗಳಾಗಿವೆ.
ಭದ್ರತೆಗಾಗಿ ಒಟ್ಟು 739 ಪೊಲೀಸರು ,71 ಎಎಸ್ಐ, 25 ಪಿಎಸ್ಐ, 7 ಸಿಪಿಐಗಳು, 3 ಡಿವೈಎಸ್ಪಿ ಭದ್ರತೆಗೆ ಬಳಸಿಕೊಳ್ಳಲಾಗುತ್ತೆ. ಒಟ್ಟು 847 ಪೊಲೀಸರ ನಿಯೋಜನೆ ಮಾಡಲಾಗಿದೆ. ಮೂರು ಸಿಆರ್ಪಿಎಫ್, ಹೆಚ್ಚುವರಿಯಾಗಿ ಕೇಂದ್ರ ಮೀಸಲು ಪಡೆ, ಕೆಎಸ್ಆರ್ಪಿ ತಂಡಗಳನ್ನು ನಿಯೋಜಿಸಲಾಗಿದೆ. 20 ಸಾರಿಗೆ ಬಸ್, 30 ಸ್ಕೂಲ್ ಬಸ್ಗಳನ್ನು ಚುನಾವಣೆ ಕರ್ತವ್ಯಕ್ಕೆ ಬಳಸಲಾಗ್ತಿದೆ. ಒಟ್ಟು 20 ಸೆಕ್ಟರ್ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕೊರೊನಾ ಸೋಂಕಿತರಿಗಾಗಿ ಮತಗಟ್ಟೆಗಳಲ್ಲಿ ಸಂಜೆ 6 ರಿಂದ 7 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಒಟ್ಟು ಕಣದಲ್ಲಿ 8 ಅಭ್ಯರ್ಥಿಗಳಿದ್ದು ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್ನಿಂದ ಬಸನಗೌಡ ತುರವಿಹಾಳ, ಕರ್ನಾಟಕ ರಾಷ್ಟ್ರೀಯ ಸಮಿತಿಯ ಓಬಳೇಶ್ವರ, ಐದು ಜನ ಪಕ್ಷೇತರರಿದ್ದಾರೆ. ನಾಳೆ ಮತದಾರ ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾನೆ.
ಇದನ್ನೂ ಓದಿ: ಮಸ್ಕಿ ಮತದಾರರಿಗೆ ಹಣ ಹಂಚಿದ ಅರೋಪ: ಬಿಜೆಪಿ ನಾಯಕ ನಂದೀಶ್ ರೆಡ್ಡಿ ಬಂಧನ, ಬಿಡುಗಡೆ
Published On - 2:58 pm, Fri, 16 April 21