ಇಸ್ರೋ ಕೇಂದ್ರಕ್ಕೆ ಭೇಟಿ ವೇಳೆ ನಯವಾಗಿ ರಾಜಕಾರಣ ದೂರವಿಟ್ಟ ಪ್ರಧಾನಿ ಮೋದಿ; ಗಮನಿಸಲೇಬೇಕಾದ ಅಂಶಗಳು ಇಲ್ಲಿವೆ

PM Modi ISRO Visit; ಹೆಚ್​ಎಎಲ್​ ಏರ್ಪೋರ್ಟ್​ಗೆ ಬಂದಿಳಿದಾಗ ಮೋದಿ ಅವರ ಸ್ವಾಗತಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಅಧಿಕಾರಿಗಳು ಹಾಗೂ ವಿಜ್ಞಾನಿಗಳಷ್ಟೇ ಇದ್ದರು. ಹೆಚ್​ಎಎಲ್​ ಏರ್ಪೋರ್ಟ್ ಹೊರಭಾಗದಲ್ಲಿ ಬಿಜೆಪಿ ನಾಯಕರು ಕಾದುಕುಳಿತಿದ್ದರೂ ಅವರನ್ನು ಅಧಿಕೃತವಾಗಿ ಭೇಟಿಯಾಗಲಿಲ್ಲ.

ಇಸ್ರೋ ಕೇಂದ್ರಕ್ಕೆ ಭೇಟಿ ವೇಳೆ ನಯವಾಗಿ ರಾಜಕಾರಣ ದೂರವಿಟ್ಟ ಪ್ರಧಾನಿ ಮೋದಿ; ಗಮನಿಸಲೇಬೇಕಾದ ಅಂಶಗಳು ಇಲ್ಲಿವೆ
ಬೆಂಗಳೂರಿನಲ್ಲಿ ಮೋದಿ
Follow us
| Updated By: ಗಣಪತಿ ಶರ್ಮ

Updated on:Aug 26, 2023 | 11:13 AM

ಬೆಂಗಳೂರು, ಆಗಸ್ಟ್ 26: ಚಂದ್ರಯಾನ-3 ರ ಯಶಸ್ಸಿನ ನಿಮಿತ್ತ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜಕೀಯದಿಂದ ಬಹಳ ಅಂತರ ಕಾಯ್ದುಕೊಂಡಿದ್ದು ಅವರ ನಡೆ, ನುಡಿಗಳಿಂದ ಸ್ಪಷ್ಟವಾಗಿದೆ. ಒಂದೆಡೆ, ಚಂದ್ರಯಾನ-3 ರ ಯಶಸ್ಸಿನ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಧಾವಂತ ರಾಜಕೀಯ ಪಕ್ಷಗಳ ನಡುವೆ ಕಂಡುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಜಾಹೀರಾತುಗಳ ಮೂಲಕ ಅದು ವ್ಯಕ್ತವಾಗಿದೆ. ಬೆಂಗಳೂರಿಗೆ ಬರುವ ಪ್ರಧಾನಿ ರಾಜಕೀಯ ಲಾಭಕ್ಕೆ ಅದನ್ನು ಬಳಸಿಕೊಳ್ಳಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಕಾಂಗ್ರೆಸ್ಸಿಗರಲ್ಲಿಯೂ ಇತ್ತು. ಆದರೆ, ಸರ್ಕಾರಿ ಕಾರ್ಯಕ್ರಮವಾದದ್ದರಿಂದ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಟ್ಟ ಪ್ರಧಾನಿ, ಎಲ್ಲಿಯೂ ತಮ್ಮ ಬೆಂಗಳೂರು ಭೇಟಿ ವೇಳೆ ರಾಜಕೀಯಕ್ಕೆ ಆಸ್ಪದ ನೀಡಲೇ ಇಲ್ಲ.

ಹೆಚ್​ಎಎಲ್​ ಏರ್ಪೋರ್ಟ್​ಗೆ ಬಂದಿಳಿದಾಗ ಮೋದಿ ಅವರ ಸ್ವಾಗತಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಅಧಿಕಾರಿಗಳು ಹಾಗೂ ವಿಜ್ಞಾನಿಗಳಷ್ಟೇ ಇದ್ದರು. ಹೆಚ್​ಎಎಲ್​ ಏರ್ಪೋರ್ಟ್ ಹೊರಭಾಗದಲ್ಲಿ ಬಿಜೆಪಿ ನಾಯಕರು ಕಾದುಕುಳಿತಿದ್ದರೂ ಅವರನ್ನು ಅಧಿಕೃತವಾಗಿ ಭೇಟಿಯಾಗಲಿಲ್ಲ. ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಭೈರತಿ ಬಸವರಾಜ, ಮಂಜುಳಾ, ಛಲವಾದಿ ನಾರಾಯಣಸ್ವಾಮಿ ಇವರು ಏರ್​​ಪೋರ್ಟ್ ಮುಂಭಾಗ ಜನರ ಜತೆ ಧ್ವಜ ಹಿಡಿದು ಸ್ವಾಗತಿಸಿದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲಹಳ್ಳಿ ಕ್ರಾಸ್​​ನಲ್ಲಿ ರಸ್ತೆ ಬದಿ ನಿಂತು ಸ್ವಾಗತ ಕೋರಿದರು. ಇದೇ ವೇಳೆ, ಶಾಸಕರಾದ ಆರ್.ಅಶೋಕ್, ಡಾ.ಅಶ್ವತ್ಥ್​​ ನಾರಾಯಣ, ಮುನಿರತ್ನ, ಕೆ.ಗೋಪಾಲಯ್ಯ, ಎಂ.ಕೃಷ್ಣಪ್ಪ ಹಾಗೂ ಎಸ್.ಆರ್.ವಿಶ್ವನಾಥ್ ಕೂಡ ಇದ್ದರು. ಇಷ್ಟು ಬಿಟ್ಟರೆ ಯಾವೊಬ್ಬ ಬಿಜೆಪಿ ನಾಯಕನನ್ನೂ ದೆಹಲಿಗೆ ವಾಪಸಾಗುವ ವರೆಗೂ ಮೋದಿ ಭೇಟಿಯಾಗಲೇ ಇಲ್ಲ.

ಜೈ ಮೋದಿ ಎಂದಾಗ ಜೈ ವಿಜ್ಞಾನ್ ಎಂದ ಪ್ರಧಾನಿ

ಹೆಚ್​ಎಎಲ್​ ಏರ್ಪೋರ್ಟ್​​ನಿಂದ ಹೊರಬರುತ್ತಿದ್ದಂತೆಯೇ ತುಸು ಹೊತ್ತು ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡಲು ಮೋದಿ ಮುಂದಾದರು. ಅಷ್ಟರಲ್ಲಿ ಅಲ್ಲಿದ್ದವರು ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮೋದಿ, ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್’ ಘೋಷಣೆ ಕೂಗಿದರು. ಅದೇ ರೀತಿ ಹೇಳುವಂತೆ ಜನರನ್ನು ಪ್ರೇರೇಪಿಸಿದರು. ಆ ಮೂಲಕ ‘ನಿಮ್ಮ ಘೋಷಣೆ ನನಗಲ್ಲ, ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ಸಲ್ಲಬೇಕಾದ್ದು’ ಎಂದು ಪರೋಕ್ಷವಾಗಿ ಸಾರಿದರು.

ಇದನ್ನೂ ಓದಿ: PM Modi ISRO Visit: ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಹೋಗದ್ದೇಕೆ? ಇಲ್ಲಿದೆ ಕಾರಣ

ಇನ್ನು, ಮೋದಿ ಸ್ವಾಗತಕ್ಕೆ ಬಂದ ನಾಯಕರು, ಸಾರ್ವಜನಿಕರ ಬಳಿ ರಾಷ್ಟ್ರಧ್ವಜಗಳೇ ಇರುವಂತೆ ನೋಡಿಕೊಳ್ಳಲಾಗಿತ್ತು. ಬಿಜೆಪಿ ಧ್ವಜ ಯಾರ ಬಳಿಯೂ ಇರದಂತೆ ನೋಡಿಕೊಳ್ಳಲಾಗಿತ್ತು. ಒಂದು ಹಂತದಲ್ಲಿ ಮೋದಿ ಅವರ ಇಸ್ರೋ ಭೇಟಿ ವೇಳೆ ರೋಡ್ ಶೋ ನಡೆಸಲು ಬಿಜೆಪಿ ಉದ್ದೇಶಿಸಿತ್ತಾದರೂ ಅದಕ್ಕೆ ಎಸ್​​ಪಿಜಿ ಅನುಮತಿ ಸಿಗಲಿಲ್ಲ.

ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚಂದ್ರಯಾನ-3 ರ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ವಿಜ್ಞಾನಿಗಳಿಗೆ ನೀಡಿದರು. ಜತೆಗೆ, ನಿಮ್ಮ ಜತೆ ಸರ್ಕಾರ ಇದೆ ಎಂಬ ಭರವಸೆಯ ಮಾತುಗಳನ್ನಾಡಿದರು. ಅಲ್ಲಿಂದ ಹೆಚ್​​ಎಎಲ್​ಗೆ ಹಿಂತಿರುಗಿ ದೆಹಲಿಗೆ ವಾಪಸ್ ಆಗುವ ಮಾರ್ಗದಲ್ಲಿಯೂ ಅಷ್ಟೆ, ಮೋದಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:09 am, Sat, 26 August 23

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ