ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು; ನೋಟಿಸ್ ನೀಡಿದ್ದರೂ ಗೈರು ಹಾಜರು!
ಶುಲ್ಕ ನಿಗದಿ ದೂರು ವಿಚಾರಣೆಗೆ ಸಂಬಂಧಿಸಿ ಖಾಸಗಿ ಶಾಲೆಗಳು ವಿಚಾರಣೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ನೋಟೀಸು ನೀಡಿತ್ತು. ಆದರೂ ಖಾಸಗಿ ಶಾಲಾ ಆಡಳಿತ ಮಂಡಳಿ ಶೇ.10ರಷ್ಟು ಗೈರು ಹಾಜರಾಗಿವೆ ಎಂಬುದಾಗಿ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಶುಲ್ಕ ನಿಗದಿ ದೂರು ವಿಚಾರಣೆಗೆ ಸಂಬಂಧಿಸಿ ಖಾಸಗಿ ಶಾಲೆಗಳು ವಿಚಾರಣಾ ಸಭೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ನೋಟಿಸ್ ನೀಡಿತ್ತು. ಆದರೂ ಈ ಕುರಿತು ಗಮನ ಕೊಡದೇ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಈ ಕುರಿತಂತೆ, ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಶಿಕ್ಷಣ ಇಲಾಖೆ, ಖಾಸಗಿ ಶಾಲೆ ಮಂಡಳಿ ಹಾಗೂ ಪೋಷಕರ ಸಭೆ ಕರೆದಿದ್ದರು. ಸಭೆಯಲ್ಲಿ ಶೇ. 10ರಷ್ಟು ಶಾಲೆಗಳ ಆಡಳಿತ ಮಂಡಳಿಯವರು ಗೈರು ಹಾಜರಾಗಿದ್ದಾರೆ. ಕೇವಲ ಪೋಷಕರು ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ. ಹಾಗಾಗಿ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಪೋಷಕರು ಮತ್ತು ಖಾಸಗಿ ಶಾಲೆಗಳಿಗೆ ವಿಚಾರಣೆಗೆ ಬರುವಂತೆ ಹೇಳಲಾಗಿತ್ತು. ಅದರಲ್ಲಿ ಶೇಕಡಾ 10ರಷ್ಟು ಶಾಲೆಯ ಆಡಳಿತ ಮಂಡಳಿಯವರು ಗೈರು ಹಾಜರಾಗಿದ್ದಾರೆ. ನಮಗೊಂದು ನ್ಯಾಯ, ಆಡಳಿತ ಮಂಡಳಿಗೊಂದು ನ್ಯಾಯವೇ? ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪೋಷಕರು ನೇರ ಪ್ರಶ್ನೆ ಒಡ್ಡಿದ್ದಾರೆ.
ಶೇ. 30ರಷ್ಟು ಶಾಲಾ ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆದಿತ್ತು
ಕೊರೊನಾದಿಂದ ಬಂದ್ ಆಗಿದ್ದ ಶಾಲೆಗಳ ಬೀಗ (ಫೆ.22) ರಿಂದ ಪೂರ್ಣ ಪ್ರಮಾಣದಲ್ಲಿ ಓಪನ್ ಆಗಿದೆ. 6ನೇ ತರಗತಿ ಮೇಲ್ಪಟ್ಟ ಎಲ್ಲಾ ತರಗತಿಗಳು ಆರಂಭ ಮಾಡಲು ಸರ್ಕಾರ ಅನುಮತಿ ನೀಡಿದೆ. ಆದ್ರೆ ಎಲ್ಲಾ ಸರಿ ಹೋಯ್ತು ಎನ್ನುವಷ್ಟರಲ್ಲಿ ಸರ್ಕಾರಕ್ಕೆ ಖಾಸಗಿ ಶಾಲೆಗಳು ಶಾಕ್ ಕೊಟ್ಟಿದ್ದವು. ಈಗಾಗಲೇ ಖಾಸಗಿ ಶಾಲೆಗಳಿಗೆ ಸರ್ಕಾರ ಶುಲ್ಕವನ್ನ ನಿಗದಿ ಮಾಡಿ, ಶೇ. 70 ರಷ್ಟು ಬೋಧನಾ ಶುಲ್ಕವನ್ನ ಮಾತ್ರ ತೆಗೆದುಕೊಳ್ಳಬೇಕು ಅಂತಾ ಆದೇಶ ಮಾಡಿತ್ತು. ಆದ್ರೆ, ಈ ಆದೇಶವನ್ನ ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪದೆ, ಶುಲ್ಕ ಕಡಿತದ ಆದೇಶ ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ವು. ಆದ್ರೆ, ಸರ್ಕಾರದಿಂದ ಯಾವುದೇ ರೆಸ್ಪಾನ್ಸ್ ಬಂದಿಲ್ಲ. ಹೀಗಾಗಿ ಮತ್ತೊಂದು ಹಂತದ ಬೃಹತ್ ಹೋರಾಟಕ್ಕೆ ಕ್ಯಾಮ್ಸ್, ಕುಸುಮಾ ಸೇರಿದಂತೆ ಒಟ್ಟು 11 ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿದ್ದವು.
ಇದನ್ನೂ ಓದಿ: ಇಂದು ಖಾಸಗಿ ಶಾಲಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ.. ಶೇ.30ರಷ್ಟು ಶಾಲಾ ಶುಲ್ಕ ಕಡಿತ ವಿರೋಧಿಸಿ ಹೋರಾಟ