‘ಪೊಲೀಸರೇ ಈ ರೀತಿ ಮಾಡಿದರೆ ಕನ್ನಡ ಪರ ಸಂಘಟನೆಗಳು ಕನ್ನಡ ಉಳಿಸೋದು ಹೇಗೆ?’ ಕಪಾಳಮೋಕ್ಷ ಮಾಡಿದ ಪೊಲೀಸ್​ಗೆ ಕರವೇ ಪ್ರಶ್ನೆ

‘ಪೊಲೀಸರೇ ಈ ರೀತಿ ಮಾಡಿದರೆ ಕನ್ನಡ ಪರ ಸಂಘಟನೆಗಳು ಕನ್ನಡ ಉಳಿಸೋದು ಹೇಗೆ?’ ಕಪಾಳಮೋಕ್ಷ ಮಾಡಿದ ಪೊಲೀಸ್​ಗೆ ಕರವೇ ಪ್ರಶ್ನೆ
ವಾಗ್ವಾದ

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ, ‘ಕನ್ನಡ ಪರ ಹೋರಾಟಗಾರರ ಮೇಲೆ ಹಲ್ಲೆ ಖಂಡನೀಯ. ಪೊಲೀಸರು ಈ ರೀತಿ ಹಲ್ಲೆ ಮಾಡಬಾರದಿತ್ತು. ಪೊಲೀಸರೇ ಈ ರೀತಿ ಮಾಡಿದರೆ ಕನ್ನಡ ಪರ ಸಂಘಟನೆಗಳು ಕನ್ನಡ ಉಳಿಸೋದು ಹೇಗೆ? ಎಂದು ಪ್ರಶ್ನಿಸಿದರು.

guruganesh bhat

|

Apr 15, 2021 | 10:49 PM

ಬೆಂಗಳೂರು: ಚೀಟಿಂಗ್‌ ಪ್ರಕರಣವೊಂದರ ಆರೋಪಿಗಳಾಗಿದ್ದ ರಂಗಸ್ವಾಮಿ ಹಾಗೂ ಲೋಕೇಶ್ ಎಂಬ ಪೊಲೀಸರ ವಶದಲ್ಲಿದ್ದ ವ್ಯಕ್ತಿಗಳನ್ನು ಮಾತನಾಡಿಸಿದ ಆರೋಪದಡಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಉಪಾಧ್ಯಕ್ಷ ಉಮೇಶ್​ಗೌಡಗೆ ನೆಲಮಂಗಲ ಟೌನ್ ಠಾಣೆಯ ಎಸ್​ಐ ಸುರೇಶ್‌ ಕಪಾಳಮೋಕ್ಷ ಮಾಡಿದ್ದಾರೆ. ಕಪಾಳಮೋಕ್ಷಮಾಡಿರುವುದನ್ನು ಖಂಡಿಸಿ ನೆಲಮಂಗಲ ಟೌನ್ ಪೊಲೀಸ್ ಠಾಣೆ ಎದುರು ಕರವೇ ಕಾರ್ಯಕರ್ತರು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಪಿಎಸ್​ಐ ಸುರೇಶ್​ರನ್ನು ಅಮಾನತು​ ಮಾಡುವಂತೆ ಡಿವೈಎಸ್​ಪಿ ಜಗದೀಶ್ ಅವರಲ್ಲಿ ​ಒತ್ತಾಯಿಸಿದ್ದಾರೆ. 

ಕೆಲ ಹೊತ್ತಿನ ನಂತರ ಪ್ರತಿಭಟನೆ ತೀವ್ರಗೊಂಡಿರುವುದನ್ನು ಗಮನಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಹರಸಾಹಸಪಟ್ಟರು. ಆದರೂ ತಡೆಯದ ಪ್ರತಿಭಟನಾಕಾರರು ಪೊಲೀಸ್ ಠಾಣೆ ಒಳಗೆ ನುಗ್ಗಿದರು. ಠಾಣೆ ಒಳಗೆ ಪೊಲೀಸರು ರಾಜಿ ಸಂಧಾನಕ್ಕೆ ಯತ್ನಿಸಿದರೂ ಪ್ರತಿಭಟನಾಕಾರರು ಬಹಿರಂಗ ಕ್ಷಮೆಯಾಚನೆಗೆ ಬಿಗಿಪಟ್ಟು ಹಿಡಿದಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಗಂಭೀರ ಪ್ರಶ್ನೆ

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ‘ಕನ್ನಡ ಪರ ಹೋರಾಟಗಾರರ ಮೇಲೆ ಹಲ್ಲೆ ಖಂಡನೀಯ. ಪೊಲೀಸರು ಈ ರೀತಿ ಹಲ್ಲೆ ಮಾಡಬಾರದಿತ್ತು. ಪೊಲೀಸರೇ ಈ ರೀತಿ ಮಾಡಿದರೆ ಕನ್ನಡ ಪರ ಸಂಘಟನೆಗಳು ಕನ್ನಡ ಉಳಿಸೋದು ಹೇಗೆ? ಎಂದು ಗಂಭೀರವಾಗಿ ಪ್ರಶ್ನಿಸಿದರು. ಅಲ್ಲದೇ, ಈ ವಿಚಾರದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ಪಿಎಸ್‌ಐ ಸುರೇಶ್ ಮೇಲೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲೇಬೇಕು. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಒಂದೇ ಬೆಡ್​ನಲ್ಲಿ ಇಬ್ಬರಿಗೆ ಚಿಕಿತ್ಸೆ, ಆಸ್ಪತ್ರೆ ಹೊರಗೆ ಹೆಣಗಳು; ಕೊರೊನಾದಿಂದ ಪರಿಸ್ಥಿತಿ ಭೀಕರ

Maski By Election: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್​ ಪ್ರಚಾರ ಮಾಡಿದ ಗ್ರಾಮಗಳಲ್ಲಿ ಕೊರೊನಾ ಟೆಸ್ಟ್​ಗೆ ಸೂಚನೆ

(Pro Kannada activist Praveen Shetty protests at Nelamangala Town police station against PSI Suresh)

Follow us on

Related Stories

Most Read Stories

Click on your DTH Provider to Add TV9 Kannada