ಪಿಎಸ್ಐ ನೇಮಕಾತಿ ಹಗರಣ: ಪ್ರಮುಖ ಆರೋಪಿ, ಕಾಮಾಕ್ಷಿಪಾಳ್ಯ ಪಿಎಸ್ಐ ಷರೀಫ್ ಮುಂಬೈನಲ್ಲಿ ತಡವಾಗಿ ಅರೆಸ್ಟ್
PSI Recruitment Scam: ಕಾಮಾಕ್ಷಿಪಾಳ್ಯ ಠಾಣೆ ಪಿಎಸ್ಐ ಷರೀಫ್ ಬಂಧಿತ ಆರೋಪಿ. ಹಗರಣ ಹೊರಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ PSI ಷರೀಫ್, ಮುಂಬೈನಲ್ಲಿ ಅಡಗಿಕೊಂಡಿದ್ದು, ಬೆಂಗಳೂರು ಸಿಐಡಿ ಪೊಲೀಸ್ ತಂಡ ಬಂಧಿಸಿ, ಬೆಂಗಳೂರಿಗೆ ಕರೆತಂದಿದೆ.
ಬೆಂಗಳೂರು: 545 ಪಿಎಸ್ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ (PSI Recruitment Scam) ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಆರೋಪಿಯನ್ನು ಮುಂಬೈನಲ್ಲಿ ತಡವಾಗಿ ಸೆರೆಹಿಡಿಯಲಾಗಿದೆ. ಕಾಮಾಕ್ಷಿಪಾಳ್ಯ ಠಾಣೆ ಪಿಎಸ್ಐ (Kamakshi Palya PSI) ಷರೀಫ್ ಕಲಿಮಠ್ ಬಂಧಿತ ಆರೋಪಿ ಹಗರಣ ಹೊರಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ PSI ಷರೀಫ್, ಮುಂಬೈನಲ್ಲಿ ಅಡಗಿಕೊಂಡಿದ್ದರು. ಬೆಂಗಳೂರು ಸಿಐಡಿ (Bangalore CID) ಪೊಲೀಸ್ ತಂಡ ಮುಂಬೈನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿದೆ.
ಪಿಎಸ್ಐ ನೇಮಕಾತಿ ಅಕ್ರಮ ಆರೋಪಿ ಷರೀಫ್ 10 ದಿನ ಪೊಲೀಸ್ ಕಸ್ಟಡಿಗೆ:
ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿ ಶರೀಫ್ ನನ್ನು ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಸಿಐಡಿ ಪೊಲೀಸರು ಕೋರ್ಟ್ಗೆ ಮನವಿ, ಮಾಡಿಕೊಂಡಿದ್ದಾರೆ. ಸಿಐಡಿ ಮನವಿ ಹಿನ್ನೆಲೆ ಆರೋಪಿ ಶರೀಫ್ ಕಲಿಮಠ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆಗಸ್ಟ್ 8 ರವರೆಗೆ ಸಿಐಡಿ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಸಿಐಡಿ ಬಂಧಿತ ಆರೋಪಿ ಎಸ್ ಡಿಎ ಹರ್ಷಾ ಮತ್ತು ಕೆಲ ಅಭ್ಯರ್ಥಿಗಳೊಂದಿಗೆ ಪಿಎಸ್ಐ ಷರೀಫ್ ಕಲಿಮಠ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈತ 10 ಅಭ್ಯರ್ಥಿಗಳ ಅಕ್ರಮ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಷರೀಫ್ ನನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು ಗ್ರಿಲ್ ಮುಂದುವರೆಸಿದ್ದಾರೆ.
Published On - 7:44 pm, Sat, 30 July 22