ಒಬ್ಬ ವಿಗ್ ಹಾಕಿ ದೈಹಿಕ ಪರೀಕ್ಷೆಗೆ ಬಂದಿದ್ದ; ಹಾಗಾಗಿ ದೈಹಿಕ ವಾಗಿಯೂ ಮರುಪರೀಕ್ಷೆ ನಡೆಸ್ತೀರಾ? ಪ್ರಿಯಾಂಕ್ ಖರ್ಗೆ ಬೌನ್ಸರ್​

Congress MLA Priyank Kharge: ಸರ್ಕಾರ ನಿರ್ಧಸಿರುವ ಮರುಪರೀಕ್ಷೆಯನ್ನು ನಾನು‌ ಸ್ವಾಗತಿಸುವೆ. ಆದರೆ ಸರ್ಕಾರದ ನಿರ್ಧಾರದಲ್ಲಿ ಸ್ಪಷ್ಟತೆ ಇಲ್ಲ. ಮರುಪರೀಕ್ಷೆ ಅಂದ್ರೆ ದೈಹಿಕಗೂ ಅನ್ವಯ ಆಗುತ್ತದೋ ಅಥವಾ, ಲಿಖಿತ ಪರೀಕ್ಷೆಗೆ ಮಾತ್ರ ಸೀಮಿತವೋ? ಏಕೆಂದರೆ ದೈಹಿಕ ಪರೀಕ್ಷೆಯಲ್ಲಿಯೂ ಕೂಡ ಗೋಲ್​ಮಾಲ್ ಆಗಿದೆ ಎಂದು ಪ್ರಿಯಾಂಕ್ ಆಗ್ರಹಿಸಿದರು.

ಒಬ್ಬ ವಿಗ್ ಹಾಕಿ ದೈಹಿಕ ಪರೀಕ್ಷೆಗೆ ಬಂದಿದ್ದ; ಹಾಗಾಗಿ ದೈಹಿಕ ವಾಗಿಯೂ ಮರುಪರೀಕ್ಷೆ ನಡೆಸ್ತೀರಾ? ಪ್ರಿಯಾಂಕ್ ಖರ್ಗೆ ಬೌನ್ಸರ್​
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
Updated By: ಸಾಧು ಶ್ರೀನಾಥ್​

Updated on: Apr 29, 2022 | 9:05 PM

ಕಲ್ಬುರ್ಗಿ: ಇಡೀ ರಾಜ್ಯದಲ್ಲಿ ಸಂಚಲವನ್ನುಂಟು ಮಾಡಿದ 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣ ಒಂದು ಹಂತಕ್ಕೆ ಬಂದು ನಿಂತಿದೆ. ಪ್ರಧಾನ ಆರೋಪಿ ದಿವ್ಯಾ ಹಾಗರಗಿ ಅರೆಸ್ಟ್​ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಂದ PSI ಮರು ಪರೀಕ್ಷೆ ನಿರ್ಧಾರ ಪ್ರಕರಟವಾಗಿದೆ. ಈ ಬೆಳವಣಿಗೆಗಳ ಬೆನ್ನಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ನಗರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಅಕ್ರಮದ ತನಿಖೆಗೆ ಒತ್ತಾಯಿಸಿದವರಲ್ಲಿ ಪ್ರಿಯಾಂಕ್ ಖರ್ಗೆ ಮೊದಲಿಗರು. ಪರೀಕ್ಷೆ ಅಕ್ರಮದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ಈ ವರೆಗೂ 23 ಜನರನ್ನ ಬಂಧಿಸಿದ್ದಾರೆ.

ಕಲಬುರಗಿ ಪ್ರಕರಣ ತೆಗೆದುಕೊಂಡು ಇಡೀ ಕೇಸ್ ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಯುವಕರು ಕೋರ್ಟ್​ಗೆ ಹೋಗುವುದರಿಂದ ಪ್ರಯೋಜನವಿಲ್ಲ. ದಿವ್ಯಾಳನ್ನ ಬಂಧಿಸಿದ ಬೆನ್ನಲ್ಲೇ ಮರು ಪರೀಕ್ಷೆಗೆ ಘೋಷಣೆ ಮಾಡಲಾಗಿದೆ. ಮರುಪರೀಕ್ಷೆ ನಿನ್ನೆಯೇ ಘೋಷಣೆ ಮಾಡಬಹುದಿತ್ತಲ್ವಾ? ಅಕ್ರಮ ಆಗಿಲ್ಲ ಎಂದವರು ಈಗ ಮರುಪರೀಕ್ಷೆಗೆ ಬಂದು ನಿಂತಿದ್ದಾರೆ. ಆರ್.ಡಿ.ಪಾಟೀಲ್ ಮತ್ತು ದಿವ್ಯಾ ‌ಹಾಗರಗಿ ಬಂಧನ ಆರಂಭವಷ್ಟೇ. ಇನ್ನೂ ತನಿಖೆ ಬಹಳ ಇದೆ ಎಂದ ಶಾಸಕ ಪ್ರಿಯಾಂಕ್​ ಖರ್ಗೆ ಇದರ ಹಿಂದೆ ಸರ್ಕಾರದ ಮಟ್ಟದಲ್ಲಿ ಯಾರಿದ್ದಾರೆ ಎಂಬುದರ ತನಿಖೆ ಆಗಲಿ ಎಂದರು. PSI ನೇಮಕಾತಿ ಅಕ್ರಮ ಪ್ರಕರಣ ತನಿಖಾ ಹಂತದಲ್ಲಿದೆ. ಸಿಐಡಿಯವರು ಇನ್ನೂ ಬಹಳಷ್ಟು ತನಿಖೆ ಮಾಡಬೇಕಿದೆ. ಕಲಬುರಗಿಗೆ ಸೀಮಿತವಾದ FIR ಮೇಲೆ ತನಿಖೆ ಬೇಡ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಲ್ಲಿ ಗೋಲ್​ಮಾಲ್​ ಆಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಿಯಾಂಕ್ ಆಗ್ರಹಿಸಿದರು.

ಸರ್ಕಾರ ನಿರ್ಧಸಿರುವ ಮರುಪರೀಕ್ಷೆಯನ್ನು ನಾನು‌ ಸ್ವಾಗತಿಸುವೆ. ಆದರೆ ಸರ್ಕಾರದ ನಿರ್ಧಾರದಲ್ಲಿ ಸ್ಪಷ್ಟತೆ ಇಲ್ಲ. ಮರುಪರೀಕ್ಷೆ ಅಂದ್ರೆ ದೈಹಿಕಗೂ ಅನ್ವಯ ಆಗುತ್ತದೋ ಅಥವಾ, ಲಿಖಿತ ಪರೀಕ್ಷೆಗೆ ಮಾತ್ರ ಸೀಮಿತವೋ? ಸರ್ಕಾರ ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ ಎಂದು ಪ್ರಿಯಾಂಕ್ ಆಗ್ರಹಿಸಿದರು. ಏಕೆಂದರೆ ದೈಹಿಕ ಪರೀಕ್ಷೆಯಲ್ಲಿಯೂ ಕೂಡ ಗೋಲ್​ಮಾಲ್ ಆಗಿದೆ. ಈ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಭ್ರಷ್ಟಾಚಾರದ ವಿರುದ್ಧ ಸರ್ಕಾರ ಇದ್ದರೆ ಪ್ರಕರಣದ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ಅವರು ಆಶಿಸಿದರು.

ಇದನ್ನೂ ಓದಿ: ಪೊಲೀಸ್​ ಇಲಾಖೆ ಸೇರಲು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವ ಯತ್ನ; ಇಬ್ಬರು ‘ಕುಳ್ಳರು’ ಅರೆಸ್ಟ್! ಏನಿವರ ಮೋಡಸ್​ ಆಪರೆಂಡಿ?

ಬೆಳಗಾವಿಯಲ್ಲಿ ಅಭ್ಯರ್ಥಿಯೊಬ್ಬ ವಿಗ್ ಹಾಕಿಕೊಂಡು ಪರೀಕ್ಷೆ ಬರೆಯಲು ಬಂದಿದ್ದ. ಫಿಜಿಕಲ್, ಓಎಂಆರ್, ಬ್ಲೂಟೂತ್ ಸೇರಿದಂತೆ ಮೂರು ರೀತಿಯಲ್ಲಿ ಅಕ್ರಮ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಲ್ಲಿ ಗೋಲ್​ಮಾಲ್​ ಆಗಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು. ಏಕೆಂದರೆ ಏಳೆಂಟು ಜನ ಆರೋಪಿಗಳನ್ನ ಹೊರೆತುಪಡಿಸಿ ಉಳಿದವರನ್ನ ಪರೀಕ್ಷೆ ಬರೆಯಲು ಅವಕಾಶ ನೀಡ್ತಿವಿ ಅಂತಾರೆ. ಆದರೆ ಪ್ರಕರಣದಲ್ಲಿ ಈಗಾಗಲೇ ಏಳೆಂಟು ಜನ ಅಭ್ಯರ್ಥಿಗಳ ಬಂಧನವಾಗಿದೆ. ಹಾಗಿದ್ರೆ ಪ್ರಕರಣದಲ್ಲಿ ಏಳೆಂಟು ಜನ ಅಭ್ಯರ್ಥಿಗಳು ಮಾತ್ರ ಅಕ್ರಮವಾಗಿ ಬರೆದಿದ್ದಾರಾ? ಸುಮಾರು ಮುನ್ನೂರಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಪರೀಕ್ಷೆ ಅಕ್ರಮ ನಡೆದಿದೆ ಅವರಿಗೂ ಸಹ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕೊಡುತ್ತೀರೋ? ಎಂದು ಪ್ರಿಯಾಂಕ್ ಕೇಳಿದರು.

ಕೆಲ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳು ಆತುರ ಪಡಬಾರದು. ಎಲ್ಲಿ ಜಾಸ್ತಿ ಅಕ್ರಮ ನಡೆದಿದೆಯೋ ಅಲ್ಲಿ ಮರುಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅಭ್ಯರ್ಥಿಗಳು ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಸಾಧಕ-ಬಾಧಕಗಳ ಕುರಿತು ಮತ್ತು ಕಾನೂನು ಬಗ್ಗೆ ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳಿ ಎಂದೂ ಶಾಸಕ ಪ್ರಿಯಾಂಕ್​ ಖರ್ಗೆ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Also Read:
Acid Attack: ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ನಿರಾಕರಣೆ ಕಾರಣ -ಸುಪ್ರೀಂ ಕೋರ್ಟ್ ಏನು ಹೇಳುತ್ತದೆ?

Also Read:
JDS ಅಧಿಕಾರಕ್ಕೆ ಬಾರದಿದ್ದರೆ ವಿಸರ್ಜನೆ ಮಾಡುವ ಮಾತನ್ನು ಒತ್ತಿ ಒತ್ತಿ ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

Published On - 6:26 pm, Fri, 29 April 22