ಹೊಸವರ್ಷ ಆಚರಣೆಗೆ 50-50 ರೂಲ್ಸ್​: ಬ್ಯಸಿನೆಸ್​ಗೆ ಹೊಡೆತ ಬೀಳಲಿದೆ ಎಂದು ಆತಂಕಗೊಂಡ ಪಬ್​ ಮಾಲೀಕರು

ಈಗಾಗಲೇ ಡಿಜೆ ಗೆ ಮುಂಗಡ ಹಣ ಪಾವತಿ ಮಾಡಿಯಾಗಿದೆ. ಆದರೆ ಈಗ ಸರ್ಕಾರ ಬ್ಯಾನ್ ಮಾಡಿರುವ ಕಾರಣ ಬ್ಯುಸಿನೆಸ್ ಗೆ ಹೊಡೆತ ಬೀಳಲಿದೆ. ಶೇ.50 ರಷ್ಟು ಮಾತ್ರ ವಾಪಸ್ ಹಣ ಬರುತ್ತೆ. 50-50 ರೂಲ್ಸ್ ಇದೆ ಜನ ಕೂಡಾ ಬರುವುದಿಲ್ಲ.

ಹೊಸವರ್ಷ ಆಚರಣೆಗೆ 50-50 ರೂಲ್ಸ್​: ಬ್ಯಸಿನೆಸ್​ಗೆ ಹೊಡೆತ ಬೀಳಲಿದೆ ಎಂದು ಆತಂಕಗೊಂಡ ಪಬ್​ ಮಾಲೀಕರು
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Dec 21, 2021 | 6:06 PM

2021 ಮುಗಿದು ಹೊಸವರ್ಷ ಆಗಮಿಸುತ್ತಿದೆ. ಇದರ ನಡುವೆ ಕೊರೋನಾ, ಒಮಿಕ್ರಾನ್​ ಸೋಂಕು ಸಂಭ್ರಮಾಚರಣೆಗೆ ಬ್ರೇಕ್​ ಹಾಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ 50-50ಗೈಡ್​ಲೈನ್ಸ್ ಹೊರಡಿಸಿದೆ. ಹೆಚ್ಚು ಜನರು ಸೇರುವಂತಿಲ್ಲ, ಪಬ್​, ಬಾರ್​ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಿಬ್ಬಂದಿಗೆ 2 ಡೋಸ್​ ವ್ಯಾಕ್ಸಿನೇಷನ್​ ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಪಬ್​ ಮಾಲೀಕರು ಕಂಗಾಲಾಗಿದ್ದಾರೆ. ಈಗಾಗಲೇ ಡಿಜೆ ಗೆ ಮುಂಗಡ ಹಣ ಪಾವತಿ ಮಾಡಿಯಾಗಿದೆ. ಆದರೆ ಈಗ ಸರ್ಕಾರ ಬ್ಯಾನ್ ಮಾಡಿರುವ ಕಾರಣ ಬ್ಯುಸಿನೆಸ್ ಗೆ ಹೊಡೆತ ಬೀಳಲಿದೆ. ಶೇ.50 ರಷ್ಟು ಮಾತ್ರ ವಾಪಸ್ ಹಣ ಬರುತ್ತೆ. 50-50 ರೂಲ್ಸ್ ಇದೆ ಜನ ಕೂಡಾ ಬರುವುದಿಲ್ಲ. ಜತೆಗೆ ಸರ್ಕಾರ ಎಂ.ಜಿ ರೋಡ್ ಬ್ರಿಗೇಡ್ ರೋಡ್ ಎಂದು ಪ್ರಾಮುಖ್ಯತೆ ನೀಡಿ ನಿರ್ಬಂಧ ವಿಧಿಸಿರುವ ಕಾರಣ ಲಾಸ್ ಆಗಲಿದೆ ಎಂದು ಬ್ರಿಗೇಡ್ ರೋಡ್ ನಲ್ಲಿರುವ ಪಬ್ ಮ್ಯಾನೇಜರ್​ ಜಿಸಿಕಾ ಟಿವಿ9 ನೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.

ಇನ್ನು ಈ ನಡುವೆ ಸರ್ಕಾರದ ಹೊಸವರ್ಷ ಆಚರಣೆಗೆ ಬ್ರೇಕ್​ ಹಾಕಿರುವ ನಿಯಮಗಳನ್ನು ಹೆಣ್ಣುಮಕ್ಕಳು ಸ್ವಾಗತಿಸಿದ್ದಾರೆ. ನಮ್ಮ ಸೇಫ್ಟಿಗೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಕೊರೊನಾ ಸೋಂಕು ಹರಡುವ ಭಯವಿದೆ ಹೀಗಾಗಿ ಸರ್ಕಾರದ ನಿರ್ಧಾರ ಒಳ್ಳೆಯದಿದೆ. ನಾವು ಕೂಡಾ ಫ್ಯಾಮಿಲಿ ಜತೆ ಸೆಲೆಬ್ರೆಶನ್ ಮಾಡುತ್ತೇವೆ ಎಂದಿದ್ದಾರೆ.

ಹೊಸವರ್ಷದ ಆಚರಣೆ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸೆಂಬರ್ 30ರಿಂದ ಜನವರಿ 02 ರವರೆಗೆ ಸಾಮೂಹಿಕ ಸಮಾರಂಭಗಳಿಗೆ ನಿರ್ಬಂಧ ಹೇರಿ ಆದೆಶ ಹೊರಡಿಸಿದ್ದಾರೆ. ಮುಖ್ಯವಾಗಿ ಬೆಂಗಳೂರಿನ ಎಂ.ಜಿ ರೋಡ್ ಬ್ರಿಗೇಡ್ ರೋಡ್ ಗಳಲ್ಲಿ ಜನರು ಗುಂಪುಗೂಡದಂತೆ ಆದೇಶ ಹೊರಡಿಸಲಾಗಿದೆ. ಆದರೆ ಕ್ರಿಸ್​ಮಸ್​ ಸಮಯದಲ್ಲಿ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:

New Year 2022 Guidelines: ಹೊಸ ವರ್ಷಾಚರಣೆ, ಕ್ರಿಸ್​ಮಸ್​ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

Published On - 6:05 pm, Tue, 21 December 21

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ