ಪ್ರವಾಹ ನಿರ್ವಹಣೆಗೆ 950 ಕೋಟಿ ರೂಪಾಯಿ ಹಣ ಇದೆ; ಜಿಲ್ಲಾಧಿಕಾರಿಗಳ ಅಕೌಂಟ್‌ಗೆ ಹಾಕಲಾಗಿದೆ: ಆರ್ ಅಶೋಕ್

ಮಳೆ ಹಾನಿ ಬಗ್ಗೆ ಕ್ರಮವಹಿಸಲು ಹಣಕಾಸಿನ ತೊಂದರೆಯಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಅಕೌಂಟ್‌ಗೆ ಹಣ ಹಾಕಲಾಗಿದೆ. ಪ್ರವಾಹ ನಿರ್ವಹಣೆಗೆ 950 ಕೋಟಿ ರೂಪಾಯಿ ಹಣ ಇದೆ ಎಂದು ಕೂಡ ದೋಣಿಗಾಲ್‌ನಲ್ಲಿ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಪ್ರವಾಹ ನಿರ್ವಹಣೆಗೆ 950 ಕೋಟಿ ರೂಪಾಯಿ ಹಣ ಇದೆ; ಜಿಲ್ಲಾಧಿಕಾರಿಗಳ ಅಕೌಂಟ್‌ಗೆ ಹಾಕಲಾಗಿದೆ: ಆರ್ ಅಶೋಕ್
ಆರ್ ಅಶೋಕ್ (ಸಂಗ್ರಹ ಚಿತ್ರ)

ಹಾಸನ: ವಾರದ ಹಿಂದೆ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೆವು. ಆಗ ಕೊಯ್ನಾ ಜಲಾಶಯ ತುಂಬಿರಲಿಲ್ಲ. ಕೇವಲ ನಾಲ್ಕೈದು ದಿನ ಸುರಿದ ಮಳೆಗೆ ಕೊಯ್ನಾ ಡ್ಯಾಂ ಭರ್ತಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹೆಚ್ಚು ಅನಾಹುತವಾಗಿದೆ. ಹೀಗಾಗಿ ನಾವು ನಾಳೆ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ನಾಳೆ (ಜುಲೈ 25) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರ್. ಅಶೋಕ್ ನೆರೆ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸುವ ಬಗ್ಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮದಲ್ಲಿ ಹೇಳಿದ್ದಾರೆ.

ಮಳೆ ಹಾನಿ ಬಗ್ಗೆ ಕ್ರಮವಹಿಸಲು ಹಣಕಾಸಿನ ತೊಂದರೆಯಿಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಅಕೌಂಟ್‌ಗೆ ಹಣ ಹಾಕಲಾಗಿದೆ. ಪ್ರವಾಹ ನಿರ್ವಹಣೆಗೆ 950 ಕೋಟಿ ರೂಪಾಯಿ ಹಣ ಇದೆ ಎಂದು ಕೂಡ ದೋಣಿಗಾಲ್‌ನಲ್ಲಿ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಹಾಸನ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ವಿಚಾರವಾಗಿ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಉಸ್ತುವಾರಿ ಸಚಿವರಿಗೆ ಪ್ರತಿಭಟನೆ ಬಿಸಿ ಮುಟ್ಟಿದೆ. ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ‌ ಜನರು ಸಚಿವರ ಕಾರು ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಹೋರಾಟ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರ ಕುಸಿತ ಸ್ಥಳ ಪರಿಶೀಲನೆ ಗೆ ಹೊರಟಿದ್ದ ಸಚಿವರಿಗೆ, ಮಾರ್ಗ ಮದ್ಯೆ ಪ್ರತಿಭಟನೆಯ ಬಿಸಿ ಮುಟ್ಟದೆ.

ಮಡಿಕೇರಿ: ಮಳೆಗೆ ವಿವಿಧೆಡೆ ಹಾನಿ
ಧಾರಾಕಾರ ಮಳೆಯಿಂದ ಮನೆಯ ಮೇಲೆ ಮಣ್ಣು ಕುಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಹೆಬ್ಬೆಟ್ಟಗೇರಿಯಲ್ಲಿ ಕಾವೇರಮ್ಮಗೆ ಸೇರಿದ ಮನೆಗೆ ಭಾಗಶಃ ಹಾನಿ ಉಂಟಾಗಿದೆ. ಭಾರಿ ಮಳೆಯಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಮನೆ ಕುಸಿತ ಉಂಟಾಗಿದೆ. ಜಯಮ್ಮ‌ ಎಂಬುವರಿಗೆ ಸೇರಿದ ಮನೆ ಕುಸಿತಗೊಂಡಿದೆ.

ಮಡಿಕೇರಿ-ಸೋಮವಾರಪೇಟೆ ಹೆದ್ದಾರಿಯಲ್ಲಿ ಬಿರುಕು ಮೂಡಿದೆ. ಸುಮಾರು 10 ಮೀಟರ್ ನಷ್ಟು ರಸ್ತೆ ಬಿರುಕು ಬಿಟ್ಟಿದೆ. ಇದರಿಂದ, ರಾಷ್ಟ್ರೀಯ ಹೆದ್ದಾರಿ ಸವಾರರಲ್ಲಿ ಆತಂಕ ಉಂಟಾಗಿದೆ. ರಸ್ತೆಯ ಒಂದು ಬದಿ ಆಳ ಪ್ರಪಾತ ಹಿನ್ನೆಲೆ ಯಾವುದೇ ಕ್ಷಣ ಭೂಕುಸಿತವಾಗೋ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: Karnataka Rains: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ; ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರ ಭೇಟಿ, ಪರಿಶೀಲನೆ

Karnataka Weather Report: ಬೆಂಗಳೂರಲ್ಲಿ 2 ದಿನ, ಕರಾವಳಿ ಭಾಗದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ

(R Ashok on Floods Karnataka Rains Heavy Rainfall DC Fund at Hassan)

Click on your DTH Provider to Add TV9 Kannada