ಯಾರಾದರೂ ಪಾಕ್​ ಜಿಂದಾಬಾದ್​ ಅಂದ್ರೆ ಹೇಳಿ, ನಾವೇ ಗುಂಡಿಕ್ಕಿ ಸಾಯಿಸ್ತೇವೆ: ಸಚಿವ ಜಮೀರ್

| Updated By: ಗಂಗಾಧರ​ ಬ. ಸಾಬೋಜಿ

Updated on: May 03, 2024 | 4:03 PM

ರಾಯಚೂರಿನಲ್ಲಿ ನಡೆದಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಅಂದರೆ ತಿಳಿಸಿ, ನಾವೇ ಗುಂಡಿಕ್ಕಿ ಸಾಯಿಸ್ತೇವೆ ಎಂದು ಹೇಳಿದ್ದಾರೆ.

ಯಾರಾದರೂ ಪಾಕ್​ ಜಿಂದಾಬಾದ್​ ಅಂದ್ರೆ ಹೇಳಿ, ನಾವೇ ಗುಂಡಿಕ್ಕಿ ಸಾಯಿಸ್ತೇವೆ: ಸಚಿವ ಜಮೀರ್
ಯಾರಾದರೂ ಪಾಕ್​ ಜಿಂದಾಬಾದ್​ ಅಂದ್ರೆ ಹೇಳಿ, ನಾವೇ ಗುಂಡಿಕ್ಕಿ ಸಾಯಿಸ್ತೇವೆ: ಸಚಿವ ಜಮೀರ್
Follow us on

ರಾಯಚೂರು, ಮೇ 03: ಯಾರಾದರೂ ಪಾಕಿಸ್ತಾನ ಜಿಂದಾಬಾದ್ (Pakistan Zindabad) ಅಂದರೆ ತಿಳಿಸಿ, ನಾವೇ ಗುಂಡಿಕ್ಕಿ ಸಾಯಿಸ್ತೇವೆ ಎಂದು ಸಚಿವ ಜಮೀರ್ ಅಹ್ಮದ್​​ (zameer ahmed) ಹೇಳಿದ್ದಾರೆ. ಜಿಲ್ಲೆಯ ಸಿಂಧನೂರಿನಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪಾಕ್​ ಜಿಂದಾಬಾದ್​ ಅಂದ್ರೆ ಸರ್ಕಾರಕ್ಕೆ ತಿಳಿಸಿ, ಅವರನ್ನ ಗಲ್ಲಿಗೇರಿಸಲ್ಲ. ನಾವೇ ಡಿಶುಂ ಡಿಶುಂ ಅಂತ ಗುಂಡಿಕ್ಕಿ ಹೊಡಿಯುತ್ತೇವೆ. ಬಿಜೆಪಿ ಅವರಿಗೂ ಈ ಥರದ್ದೇ ಬೇಕು. ಬಿಜೆಪಿಯವರಿಗೆ ಒಟ್ನಲ್ಲಿ ಅಧಿಕಾರಕ್ಕೆ ಬರಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

ಇನ್ನು ಇತ್ತೀಚೆಗೆ ರಾಯಚೂರಿನಲ್ಲಿ ನಡೆದಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಗುಂಡಿಕ್ಕಿ ಹೊಡಿಯುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: FSL ವರದಿ ಬಂದಿಲ್ಲ…ಬಂದಿಲ್ಲ ಎನ್ನುವ ಮಧ್ಯೆ ಮೂವರು ಅರೆಸ್ಟ್: ಅನುಮಾನಗಳಿಗೆ ಎಡೆಮಾಡಿಕೊಟ್ಟ ಸರ್ಕಾರದ ನಡೆ!

ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಗಲಿಗರು ವಿಜಯೋತ್ಸವದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಕೆಲವು ಕಾಂಗ್ರೆಸ್​ನ ನಾಯಕರು ಮಾಧ್ಯಮಗಳ ವರದಿಯನ್ನೇ ಸುಳ್ಳೆಂದು ಜರಿದಿದ್ದರು. ಈ ಹಿನ್ನೆಲೆಯಲ್ಲಿ ಘೋಷಣೆ ಕೂಗಿದ್ದ ವಿಡಿಯೋವನ್ನು ಎಪ್‌ಎಸ್‌ಎಲ್ ವರದಿಗೆ ಕಳುಹಿಸಲಾಗಿತ್ತು. ಆದರೆ, ಈಗ ಎಪ್‌ಎಸ್ಎಲ್ ವರದಿಯನ್ನು ಆಧರಿಸಿ ವಿಧಾನಸೌಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಮೊಹಮ್ಮದ್ ಶಫಿ ನಾಶಿಪುಡಿ, ಮುನಾವರ್ ಅಹ್ಮದ್, ಮೊಹಮ್ಮದ್ ಇಲ್ತಾಜ್‌ ಆರೋಪಿಗಳು.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್: ಕೊನೆಗೂ ಮೂವರು ಅರೆಸ್ಟ್

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಆರೋಪಿಗಳನ್ನ ರಕ್ಷಿಸಿ, ಫೆಬ್ರುವರಿ 27ರ ಮರುದಿನವೇ ಪ್ರಕರಣ ಮುಗಿಸಲು ಪೊಲೀಸರು ಯತ್ನಿಸಿದ್ರಾ ಅನ್ನೋ ಪ್ರಶ್ನೆ ಕೂಡ ಎದ್ದಿತ್ತು. ಯಾಕಂದ್ರೆ, ಆರೋಪಿಗಳ ಮೊಬೈಲ್​ನಲ್ಲಿದ್ದ ಡಾಟಾವನ್ನ ಕೂಡಲೇ ಡಿಲೀಟ್ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರ ಜೊತೆಗಿದ್ದ ಫೋಟೋ, ವಿಡಿಯೋಗಳು, ಸಾಮಾಜಿಕ ಜಾಲತಾಣದ ಪ್ರೊಫೈಲ್ ಸೇರಿ ಎಲ್ಲವನ್ನೂ ಡಿಲೀಟ್ ಮಾಡಲಾಗಿದೆ ಅಂತಾ ಹೇಳಲಾಗಿತ್ತು. ಇದೀಗ ಆರೋಪಿಗಳ ಮೊಬೈಲ್ ರಿಟ್ರೀವ್‌ಗೆ ಪೊಲೀಸರು ಮುಂದಾಗಿದ್ದರು. ಆದ್ರೀಲ್ಲಿ, ಪೊಲೀಸರೇ ಡಾಟಾ ಡಿಲೀಟ್ ಮಾಡಿದ್ರಾ? ಆರೋಪಿಗಳೇ ಡಿಲೀಟ್ ಮಾಡಿದ್ರಾ ಅನ್ನೋ ಅನುಮಾನ ಎದ್ದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:02 pm, Fri, 3 May 24