ಐಪಿಎಲ್ ಬೆಟ್ಟಿಂಗ್: 3 ಲಕ್ಷ ರೂ. ಬೇಡಿಕೆ ಆರೋಪ, ಗಬ್ಬೂರು ಪಿಎಸ್​​ಐ, ಕಾನ್ಸ್​ಟೇಬಲ್ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2024 | 9:55 PM

ಐಪಿಎಲ್ ಬೆಟ್ಟಿಂಗ್ ಪ್ರಕರಣ ವಿಚಾರವಾಗಿ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹಿನ್ನೆಲೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಠಾಣೆ ಮೇಲೆ‌ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿ ಠಾಣೆ PSI ಮಂಜುನಾಥ್​ ಮತ್ತು ಕಾನ್ಸ್​ಟೇಬಲ್​ ರಮೇಶ್​ರನ್ನು ಬಂಧಿಸಿದ್ದಾರೆ. ಫಾರೂಖ್​ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಐಪಿಎಲ್ ಬೆಟ್ಟಿಂಗ್: 3 ಲಕ್ಷ ರೂ. ಬೇಡಿಕೆ ಆರೋಪ, ಗಬ್ಬೂರು ಪಿಎಸ್​​ಐ, ಕಾನ್ಸ್​ಟೇಬಲ್ ಬಂಧನ
ಐಪಿಎಲ್ ಬೆಟ್ಟಿಂಗ್: 3 ಲಕ್ಷ ರೂ. ಬೇಡಿಕೆ ಆರೋಪ, ಗಬ್ಬೂರು ಪಿಎಸ್​​ಐ, ಕಾನ್ಸ್​ಟೇಬಲ್ ಬಂಧನ
Follow us on

ರಾಯಚೂರು, ಮೇ 24: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಠಾಣೆ ಮೇಲೆ‌ ಲೋಕಾಯುಕ್ತ (Lokayukta) ಅಧಿಕಾರಿಗಳ ದಾಳಿ ಮಾಡಿ ಠಾಣೆ PSI ಮಂಜುನಾಥ್​ ಮತ್ತು ಕಾನ್ಸ್​ಟೇಬಲ್​ ರಮೇಶ್ ಬಂಧನ ಮಾಡಿದ್ದಾರೆ. ಐಪಿಎಲ್ ಬೆಟ್ಟಿಂಗ್ ಪ್ರಕರಣ ವಿಚಾರವಾಗಿ PSI ಮಂಜುನಾಥ್​​​ ವಿರುದ್ಧ ಹಣಕ್ಕೆ ಬೇಡಿಕೆ ಆರೋಪ ಹಿನ್ನಲೆ ಬಂಧಿಸಿರುವುದಾಗಿ ಟಿವಿ9ಗೆ ಲೋಕಾಯುಕ್ತ ಉನ್ನತ ಮೂಲಗಳ ಮಾಹಿತಿ ನೀಡಿದೆ. ಫಾರೂಖ್​​ ಎಂಬಾತನ ಬಳಿ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪಿಎಸ್​ಐ ಮಂಜುನಾಥ್​​ ವಿರುದ್ಧ ಫಾರೂಖ್​ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮೊದಲ ಕಂತಿನಲ್ಲಿ​​ 1 ಲಕ್ಷ ರೂ. ಹಣ ಪಡೆದಿದ್ದು, ನಂತರ 70 ಸಾವಿರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಫಾರೂಖ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದು ಪೊಲೀಸ್​ ಪೇದೆ ಎಸ್ಕೇಫ್​

ಇಂದು ಕಾನ್ಸ್​ಟೇಬಲ್ ರಮೇಶ್ 50 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಅವರು ಕೂಡ ಲೋಕಾ ಬಲೆಗೆ ಬಿದಿದ್ದಾರೆ.​ ವಿಚಾರಣೆ ವೇಳೆ ಪಿಎಸ್​ಐ ಮಂಜುನಾಥ್ ವಿರುದ್ಧವೂ ಆರೋಪ ಮಾಡಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ಇಬ್ಬರನ್ನು ಲೋಕಾ ಪೊಲೀಸರು ಬಂಧಿಸಿದ್ದಾರೆ.

ಐಪಿಎಲ್ ಬೆಟ್ಟಿಂಗ್: ನಾಲ್ವರ ಪೈಕಿ ಓರ್ವ ಅರೆಸ್ಟ್​

ಕೋಲಾರ: ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರ ಪೈಕಿ ಓರ್ವನನ್ನ ಬಂಧಿಸಿದ್ದು, ಮೂವರು  ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೊಲಾರದ ಗಲ್‌ಪೇಟೆ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿ, ಕೋಲಾರ ನಗರದ ರೆಹಮತ್ ನಗರದ ಉರ್ದು ಶಾಲೆಯ ಬಳಿ ಆನ್ ಲೈನ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸಲಾಗುತಿತ್ತು.

ಇದನ್ನೂ ಓದಿ: ಕೋಲಾರ: ಮಳಿಗೆ ನೋಂದಣಿ ಮಾಡಿಸಲು ಲಂಚಕ್ಕೆ ಬೇಡಿಕೆ ಆರೋಪ: ಎಪಿಎಂಸಿ ಕಾರ್ಯದರ್ಶಿ ವಿಡಿಯೋ ವೈರಲ್

ನಾಲ್ಕು ಜನ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ. ಇನ್ನೂ ಸ್ಥಳದಲ್ಲಿ 1 ಮೋಬೈಲ್ ಫೋನ್, 3400 ರೂ ನಗದು ಹಣ ವಶಕ್ಕೆ ಪಡೆಯಲಾಗಿದ್ದು, ಕೋಲಾರದ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮುಜಾಮಿಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್ ಎನ್ನಲಾಗಿದೆ. ಆಪ್ ವೊಂದನ್ನ ಬಳಿಸಿಕೊಂಡು ಆನ್ ಲೈನ್ ಮೂಲಕ ಬೆಟ್ಟಿಂಗ್ ನಡೆಸುತಿತ್ತು ಎನ್ನಲಾಗಿದ್ದು, ಮುಜಮಿಲ್, ಕುತುಬ್ ಪಾಷಾ, ಇಮ್ರಾನ್ ಪರಾರಿಯಾಗಿದ್ದಾರೆ, ಆದ್ರೆ ನಿಜಾಮುದ್ದಿನ್ ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.