ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದ 206 ಜನರು ಪರಾರಿ, ಕೇಸ್ ದಾಖಲಿಸುವುದಾಗಿ ಎಸ್ಪಿ ಎಚ್ಚರಿಕೆ

|

Updated on: Jun 04, 2020 | 3:15 PM

ರಾಯಚೂರು: ಜಿಲ್ಲೆಯಾದ್ಯಂತ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದ 206 ಜನರು ಅಧಿಕಾರಿಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಪೊಲೀಸರು ಪರಾರಿಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಾಯಚೂರಿನಲ್ಲಿ 148 ಕ್ವಾರಂಟೈನ್ ಕೇಂದ್ರಗಳಿವೆ. ಅದರಲ್ಲಿ 1,500 ಜನ ಇದ್ದಾರೆ. ಈ ಪೈಕಿ 206 ಮಂದಿ ಪರಾರಿಯಾಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ. ಸದ್ಯ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮೂವರನ್ನು ಮಸ್ಕಿ ಠಾಣೆ ಪೊಲೀಸರು ಬಂಧಿಸಿ ಕರೆತಂದು ಮತ್ತೆ ಕ್ವಾರಂಟೈನ್ ಮಾಡಿದ್ದಾರೆ. ಮಸ್ಕಿ ಮೊರಾರ್ಜಿ ವಸತಿ ಶಾಲೆ ಕ್ವಾರಂಟೈನ ಕೇಂದ್ರದಿಂದ ಇವರು ಪರಾರಿಯಾಗಿದ್ದರು. ಈ ಮೂವರ […]

ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದ 206 ಜನರು ಪರಾರಿ, ಕೇಸ್ ದಾಖಲಿಸುವುದಾಗಿ ಎಸ್ಪಿ ಎಚ್ಚರಿಕೆ
Follow us on

ರಾಯಚೂರು: ಜಿಲ್ಲೆಯಾದ್ಯಂತ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದ 206 ಜನರು ಅಧಿಕಾರಿಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾರೆ. ಪೊಲೀಸರು ಪರಾರಿಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಾಯಚೂರಿನಲ್ಲಿ 148 ಕ್ವಾರಂಟೈನ್ ಕೇಂದ್ರಗಳಿವೆ. ಅದರಲ್ಲಿ 1,500 ಜನ ಇದ್ದಾರೆ. ಈ ಪೈಕಿ 206 ಮಂದಿ ಪರಾರಿಯಾಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ.

ಸದ್ಯ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮೂವರನ್ನು ಮಸ್ಕಿ ಠಾಣೆ ಪೊಲೀಸರು ಬಂಧಿಸಿ ಕರೆತಂದು ಮತ್ತೆ ಕ್ವಾರಂಟೈನ್ ಮಾಡಿದ್ದಾರೆ. ಮಸ್ಕಿ ಮೊರಾರ್ಜಿ ವಸತಿ ಶಾಲೆ ಕ್ವಾರಂಟೈನ ಕೇಂದ್ರದಿಂದ ಇವರು ಪರಾರಿಯಾಗಿದ್ದರು. ಈ ಮೂವರ ವಿರುದ್ಧವು ಕೇಸ್ ದಾಖಲಾಗಿದೆ. ಅವಧಿಗೂ ಮುನ್ನ ಯಾರೂ ಕೂಡ ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡ ಹೊಗಬಾರದು. ಹೋದರೆ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ಎಸ್ಪಿ ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ.

Published On - 8:15 am, Thu, 4 June 20