ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವ ಶುರು, ಮಠದಲ್ಲಿ ಮನೆಮಾಡಿದ ಸಂಭ್ರಮ

Mantralaya Raghavendra Swamy Aradhana Mahotsava: ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಯರ ಸನ್ನಿಧಿ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ‌‌. ಕಲಿಯುಗದ ಕಾಮಧೇನುವಾಗಿರೊ ರಾಯರ ಆರಾಧನಾ ಮಹೋತ್ಸವ ಶುರುವಾಗಿದೆ. ಧ್ವಜಾರೋಹಣ ಮಾಡುವ ಮೂಲಕ ಶ್ರೀಗಳು 352ನೇ ರಾಯರ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಹಾಗಾದ್ರೆ, ಏಳು ದಿನಗಳ ಕಾಲ ರಾಯರ ಸನ್ನಿಧಿಯಲ್ಲಿ ಏನೆಲ್ಲಾ ಕಾರ್ಯಕ್ರಮಗಳ ನಡೆಯಲಿವೆ ಎನ್ನುವ ವಿವರ ಇಲ್ಲಿದೆ.

ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವ ಶುರು, ಮಠದಲ್ಲಿ ಮನೆಮಾಡಿದ ಸಂಭ್ರಮ
ಮಂತ್ರಾಲಯದಲ್ಲಿ ರಾಯರ ಆರಾಧನೆ
Follow us
ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ

Updated on: Aug 30, 2023 | 6:45 PM

ರಾಯಚೂರು, (ಆಗಸ್ಟ್ 30): ಮಂತ್ರಾಲಯದ(mantralaya)  ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ (Raghavendra Swamy Aradhana Mahotsava) ಚಾಲನೆ ಸಿಕ್ಕಿದೆ. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮೊದಲು ಅಶ್ವ ಪೂಜೆ, ಗೋ ಪೂಜೆ,ಲಕ್ಷ್ಮೀ ಪೂಜೆ ನೆರವೇರಿಸಿದ್ರು. ನಂತರ ಶ್ರೀಗಳು ಧ್ವಜಾರೋಹಣ ನೇರವೇರಿಸುವ ಮೂಲಕ ರಾಯರ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಮಂತ್ರಾಲಯ ರಾಯರ ಮಠದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ರಾಯರ ಆರಾಧನೆಯ ಸಪ್ತರಾತ್ರೋತ್ಸವ ಕೂಡ ಇಂದಿನಿಂದ ಶುರುವಾಗಿದ್ದು, ಮಠದಲ್ಲಿ ಸಂಭ್ರಮ ಮನೆಮಾಡಿದೆ.

ಏನೆಲ್ಲಾ ಕಾರ್ಯಕ್ರಮಗಳ ನಡೆಯಲಿವೆ?

ಸಪ್ತರಾತ್ರೋತ್ಸವದ ಪೈಕಿ ಆಗಸ್ಟ್ 31ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮೊದಲ ದಿನ. ಅಂದು ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ಜರುಗಲಿದೆ. ಸೆಪ್ಟೆಂಬರ್1 ಮಧ್ಯರಾಧನೆ ನಡರಯಲಿದೆ. ಅಂದು ತಿರುಪತಿಯ ವೆಂಕಟೇಶ ದೇವರ ಶೇಷವಸ್ತ್ರ ಸಮರ್ಪಣೆ ನಡೆಯಲಿದೆ. ನಂತರ ರಾಯರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ,ಪ್ರಾಕಾರದಲ್ಲಿ ಸ್ವರ್ಣ ರಥೋತ್ಸವ ನಡೆಯಲಿದೆ. ಸೆಪ್ಟೆಂಬರ್2 ಕ್ಕೆ ಉತ್ತರಾಧನೆ ಜರುಗಲಿದೆ..ಆ ದಿನದಂದು ರಾಯರ ವಸಂತೋತ್ಸವ ಹಾಗೂ ಮಹಾ ರಥೋತ್ಸವ ಜರುಗಲಿದೆ.

ವಸಂತೋತ್ಸವದ ದಿನ ಮೊದಲು ರಾಯರ ಬೃಂದಾವನಕ್ಕೆ ಬಣ್ಣಗಳನ್ನ ಅರ್ಪಿಸುತ್ತಾರೆ. ಬಳಿಕ ಸ್ವಾಮಿಗಳು ಒಬ್ಬರಿಗೊಬ್ಬರ ಬಣ್ಣಗಳನ್ನ ಎರಚಿ ಸಂಭ್ರಮಿಸುತ್ತಾರೆ. ನಂತರ ಭಕ್ತರಿಗೂ ಆ ಬಣ್ಣಗಳನ್ನ ಎರಚಿ ತಮ್ಮ ಧಾರ್ಮಿಕ ವಿಧಿವಿಧಾನಗಳಂತೆ ಆಚರಣೆ ನಡೆಸಲಾಗುತ್ತೆ. ಅದೇ ದಿನ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಹೆಲಿಕಾಫ್ಟರ್​ ಮೂಲಕ ಮೇಲಿನಿಂದ ರಥೋತ್ಸವಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ರಾಯರ ಆರಾಧನಾ ಮಹೋತ್ಸವ ಹಿನ್ನೆಲೆ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರ ದಂಡುಂತ್ರಾಲಯದತ್ತ ಆಗಮಿಸುತ್ತಿದೆ. ಸಕಲ ಸಿದ್ಧಿಗಾಗಿ ಅಪಾರ ಭಕ್ತರು ರಾಯರ ಸನ್ನಿಧಿಗೆ ಆಗಮಿಸುವ ಸಾಧ್ಯತೆ ಇದ್ದು, ಭಕ್ತರಿಗೆ ವಸತಿ ಜೊತೆ ಮೂಲಭೂತ ಸೌಕರ್ಯವನ್ನ ಮಂತ್ರಾಲಯದ ರಾಯರ ಆಡಳಿತ ಮಂಡಳಿ ನೀಡಿ ಸತ್ಕರಿಸುತ್ತಿದೆ. ಕೊರೋನಾದಿಂದಾಗಿ ಎರಡು ವರ್ಷ ರಾಯರ ಆರಾಧನೆಯನ್ನು ಮಿಸ್ ಮಾಡ್ಕೊಂಡಿದ್ದ ಭಕ್ತರು ಈ ಬಾರೀ ರಾಯರ ಸಪ್ತರಾತ್ರೋತ್ಸವ ಕಣ್ತುಂಬಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್