ನಾ ಡ್ರೈವರ, ನೀ ಲವ್ವರ ಅಂತಿದ್ದವನೀಗ ಒಂಟಿ ಜೀವಿ! ರಾಯಚೂರಿನಲ್ಲೊಂದು ವಿಭಿನ್ನ ಲವ್ ಸ್ಟೋರಿ

15 ದಿನಗಳ ಹಿಂದಷ್ಟೇ ಸಿಂಧನೂರಿನಲ್ಲಿ ರಿಜಿಸ್ಟರ್ ಮ್ಯಾರೇಜ್​ ಮಾಡಿಕೊಂಡಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದ ಜೋಡಿಯೊಂದು ಇದೀಗ ದೂರವಾಗಿದ್ದಾರೆ. ಇದಕ್ಕೆ ಯುವತಿ ಕುಟುಂಬಸ್ಥರು ನೀಡಿದ ಅದೊಂದು ದೂರು ಕಾರಣವಾಗಿದೆ. ವಿಚಾರಣೆಗಾಗಿ ಕರೆದು ಯುವತಿಯನ್ನು ಪೋಷಕರೊಂದಿಗೆ ಕಳುಹಿಸಿದ ಆರೋಪ ಕೇಳಿಬಂದಿದೆ.

ನಾ ಡ್ರೈವರ, ನೀ ಲವ್ವರ ಅಂತಿದ್ದವನೀಗ ಒಂಟಿ ಜೀವಿ! ರಾಯಚೂರಿನಲ್ಲೊಂದು ವಿಭಿನ್ನ ಲವ್ ಸ್ಟೋರಿ
ರಮೇಶ್ ಹಾಗೂ ಯಶೋಧಾ
Updated By: ಗಂಗಾಧರ​ ಬ. ಸಾಬೋಜಿ

Updated on: Apr 18, 2025 | 12:35 PM

ರಾಯಚೂರು, ಏಪ್ರಿಲ್​ 18: ತಾವು ಪ್ರೀತಿಸಿದ ಯುವಕ ಅಥವಾ ಯುವತಿಯನ್ನು ಮದುವೆಯಾಗುವ ಯೋಗ ಎಲ್ಲರಿಗೂ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೇ ಅವರಂತ ಅದೃಷ್ಟವಂತರು ಈ ಭೂಮಿ ಮೇಲೆ ಮತ್ಯಾರಿಲ್ಲ. ಎಲ್ಲಾ ಲವ್ ಸ್ಟೋರಿಗಳು (Love) ಯಶಸ್ವಿಯಾಗುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ರಾಯಚೂರಿನಲ್ಲಿ (Raichur) ವಿಭಿನ್ನ ಲವ್ ಸ್ಟೋರಿ ಒಂದು ಬೆಳಕಿಗೆ ಬಂದಿದೆ. ನಾ ಡ್ರೈವರ.. ನೀ ನನ್ನ ಲವ್ವರ ಅಂತಿದ್ದವನು ಇದೀಗ ಒಂಟಿಯಾಗಿದ್ದಾನೆ. ಆರು ವರ್ಷ ಕಾದು ಮದುವೆ ಆದವರು ಇದೀಗ ದೂರವಾಗಿದ್ದಾರೆ.

ಕಾಲೇಜಿನಲ್ಲಿದ್ದಾಗ ಲವ್ವಿ-ಡವ್ವಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದ ರಮೇಶ್ ಹಾಗೂ ಯಶೋಧಾ ಹೈಸ್ಕೂಲ್ ಫ್ರೆಂಡ್ಸ್. ಬಳಿಕ ಕಾಲೇಜಿನಲ್ಲಿದ್ದಾಗ ಇಬ್ಬರ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ. ಆರು ವರ್ಷದಿಂದ ಲವ್​ ಮಾಡಿದ್ದಾರೆ. ಕೈ ಕೈ ಹಿಡಿದು ಓಡಾಡಿದ್ದಾರೆ. ಬೈಕ್​ ಏರಿ ಸ್ಟೈಲೀಶ್​​ ಆಗಿ ರೀಲ್ಸ್​ ಕೂಡ ಮಾಡಿದ್ದರು.

ಇದನ್ನೂ ಓದಿ: ರಾಯಚೂರು: ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ

ಇದನ್ನೂ ಓದಿ
ಬೀದಿ ಕಾಮಣ್ಣರ ಹಾವಳಿ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ಬಂಧನ
ಫೇಸ್​ಬುಕ್​ನಲ್ಲಿ ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ
ಸಾರಿಗೆ ಬಸ್‌ಗಳಲ್ಲಿ ಜಾಹೀರಾತು: ಸಿಎಂ ಕಚೇರಿಯಿಂದ ಬಂತು ಖಡಕ್ ಸೂಚನೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ

ಯಶೋಧಾಗೆ 18 ವರ್ಷವಾಗಲಿ ಎಂದು ರಮೇಶ್​ ಆರು ವರ್ಷ ತಡೆದಿದ್ದ. ಆಕೆಗಾಗಿ ಓದು ಅರ್ಧಕ್ಕೆ ಬಿಟ್ಟು ಕಾರು ಚಾಲಕನಾಗಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದ. ಈ ಮಧ್ಯೆ ಕಳೆದ 15 ದಿನಗಳ ಹಿಂದಷ್ಟೇ ಸಿಂಧನೂರಿನಲ್ಲಿ ಇಬ್ಬರೂ ಖುಷಿಖುಷಿಯಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.

ಯೋಶೋಧಾ ಕುಟುಂಬಸ್ಥರಿಂದ ನಾಪತ್ತೆ ದೂರು

ಮದುವೆ ಬಳಿಕ ರಮೇಶ್ ಹಾಗೂ ಯೋಶೋಧಾ ಇತ್ತ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದರು. ಈ ಮಧ್ಯೆ ಲಿಂಗಸುಗೂರು ಠಾಣೆಗೆ ಯೋಶೋಧಾ ಕುಟುಂಬಸ್ಥರಿಂದ ನಾಪತ್ತೆ ದೂರು ನೀಡಲಾಗಿದೆ. ಆ ಬಳಿಕ ರಮೇಶ್​ಗೆ ಲಿಂಗಸುಗೂರು ಪೊಲೀಸರು ಕರೆ ಮಾಡಿ ವಿಚಾರಣೆಗೆಂದು ಠಾಣೆಗೆ ಕರೆದಿದ್ದಾರೆ.

ರಿಜಿಸ್ಟರ್ ಮ್ಯಾರೇಜ್ ಆದರೂ ಯಶೋಧಾಳನ್ನ ಆಕೆ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರು ಸ್ಥಳೀಯ ಜನಪ್ರತಿನಿಧಿಯೊಬ್ಬರ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಆರೋಪ ಕೂಡ ಕೇಳಿಬಂದಿದ್ದು, ಸದ್ಯ ರಮೇಶ್ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

ಹೆಂಡತಿಗೆ ಮನೆಗೆ ಬಾ ಅಂತಾ ಕರೆದಿದ್ದಕ್ಕೆ ಗಂಡನಿಗೆ ಚಾಕು ಇರಿತ

ಕಲಬುರಗಿ ನಗರದ ಗಾಜಿಪುರ ಬಡಾವಣೆಯ ನಿವಾಸಿ ಆನಂದ್ ಎಂಬಾತ ಕಳೆದ ಎರಡು ವರ್ಷದ ಹಿಂದೆ ಸ್ನೇಹಾ ಎಂಬ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಡ ಹೆಂಡತಿ ಇಬ್ಬರು ಚೆನ್ನಾಗಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಗಂಡ-ಹೆಂಡತಿಯ ಮಧ್ಯೆ ಗಲಾಟೆ ಆಗುತ್ತಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ಕಾಮಣ್ಣರ ಹಾವಳಿ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ಬಂಧನ

ಗಲಾಟೆ ಆದಾಗೆಲ್ಲಾ ಹೆಂಡತಿ ಸ್ನೇಹಾ ತವರು ಮನೆಗೆ ಹೋಗ್ತಿದ್ದಳು. ಮತ್ತೆ ಕೆಲ ದಿನಗಳ ಬಳಿಕ ವಾಪಸ್ ಆಗ್ತಿದ್ದಳು. ಅದರಂತೆ ಕಳೆದ ತಿಂಗಳು ಕೂಡ ಗಂಡ-ಹೆಂಡತಿಯ ಮಧ್ಯೆ ಜಗಳವಾಗಿ ಹೆಂಡತಿ ತವರು ಮನೆ ಸೇರಿಕೊಂಡಿದ್ದಳು. ಇತ್ತ ಆನಂದ್ ಸಹೋದರನ ಮದುವೆ ಫಿಕ್ಸ್ ಆಗಿದ್ದರಿಂದ ಆನಂದ್ ತವರು ಮನೆಗೆ ಹೋಗಿದ್ದ ಹೆಂಡತಿಯನ್ನ ವಾಪಸ್ ಬರುವಂತೆ ಕರೆದಿದ್ದಾನೆ. ಇದರಿಂದ ಕೇರಳಿದ ಸ್ನೇಹಾ ಸಹೋದರರು ಚಾಕುವಿನಿಂದ ಇರಿದು ಆನಂದ್​​ ಕೊಲೆಗೆ ಯತ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:11 pm, Fri, 18 April 25