Humanity ಬಸ್​ ಅಪಘಾತ: ಮಾನವೀಯತೆ ಮರೆತೇ ಬಿಟ್ರಾ ಮನುಷ್ಯರು-ಪೊಲೀಸರು!

Raichur Accident: ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ವಿರುಪಾಪುರ ಗ್ರಾಮದ ಹನುಮಂತ ಗಾಯಾಳು. ಹನುಮಂತ ಸಿಂಧನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹನುಮಂತ ಮೇಲೆ ಬಸ್ ಹರಿದಿದೆ. ಘಟನೆಯಲ್ಲಿ ಹನುಮಂತನ ಎರಡೂ ಕಾಲುಗಳು ತುಂಡಾಗಿವೆ.

Humanity ಬಸ್​ ಅಪಘಾತ: ಮಾನವೀಯತೆ ಮರೆತೇ ಬಿಟ್ರಾ ಮನುಷ್ಯರು-ಪೊಲೀಸರು!
Humanity: ಬಸ್​ ಅಪಘಾತ -ಮಾನವೀಯತೆ ಮರೆತೇ ಬಿಟ್ರಾ ಮನುಷ್ಯರು-ಪೊಲೀಸರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 04, 2022 | 6:35 PM

ರಾಯಚೂರು: ಮಾನವೀಯತೆಯನ್ನೇ ಮರೆತು ಬಿಟ್ರಾ ಮನುಷ್ಯರು! ಅಪಘಾತವಾಗಿ ಅರ್ಧ ಗಂಟೆಯಾದರೂ ಅತ್ತ, ಬಸ್ ಡಿಪೊ‌ ಅಧಿಕಾರಿಗಳು ಸ್ಥಳಕ್ಕೆ ಬಾರದೇಹೋದರು, ಇತ್ತ, ಮಹಾಜನತೆ ಕೂಡ ಗಾಯಾಳುವಿನ ಸಹಾಯಕ್ಕೆ ಬಾರದೇ ತಮ್ಮಲ್ಲಿ ಮನುಷ್ಯತ್ವ ಎಂಬುದು ನಶಿಸಿಬಿಟ್ಟಿದೆ ಎಂದು ತೋರಿಸಿಕೊಟ್ಟಿದ್ದಾರೆ. ಕೊನೆಗೆ ಕಾಲೇಜು ವಿದ್ಯಾರ್ಥಿಗಳಿಂದ ಗಾಯಾಳು ರಕ್ಷಣೆಯಾಗಿದೆ.

ಏನಿದು ಘಟನೆ: ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ವಿರುಪಾಪುರ ಗ್ರಾಮದ ಹನುಮಂತ ಗಾಯಾಳು. ಹನುಮಂತ ಸಿಂಧನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹನುಮಂತ ಮೇಲೆ ಬಸ್ ಹರಿದಿದೆ. ಘಟನೆಯಲ್ಲಿ ಹನುಮಂತನ ಎರಡೂ ಕಾಲುಗಳು ತುಂಡಾಗಿವೆ. ಹನುಮಂತ ರಕ್ತಸಿಕ್ತಗೊಂಡು, ಮೂರ್ಚೆ ಹೋಗಿದ್ದ. ಅ ವೇಳೆ, ಸ್ಥಳೀಯರು ಅರ್ಧ ಗಂಟೆಯಾದರೂ ಗಾಯಾಳು ಸಹಾಯಕ್ಕೆ ಬರಲಿಲ್ಲ. ಕೊನೆಗೆ ಗಾಯಾಳು ಹನುಮಂತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು ಕಾಲೇಜು ವಿದ್ಯಾರ್ಥಿಗಳು. ಘಟನೆ ನಡೆದೂ ಅರ್ಧ ಗಂಟೆಯಾದರೂ ಸಿಂಧನೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಾರದೇ ಹೋಗಿದ್ದು ಶೂಚನೀಯ.

ಎಲೆಕ್ಟ್ರಾನಿಕ್ ಸಿಟಿ: ಮಳೆಗೆ ಸ್ಕಿಡ್ ಆಗಿ ಬಿದ್ದ ದ್ವಿಚಕ್ರ ವಾಹನ ಸವಾರ, ತಲೆ ಮೇಲೆ ಹತ್ತಿದ ಐಚರ್ ವಾಹನ, ಸಾವು

ಬೆಂಗಳೂರು: ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ಬೈಕ್​ಗೆ ಹಿಂಬದಿಯಿಂದ ಈಚರ್ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೊಮ್ಮಸಂದ್ರದ ನಿವಾಸಿ ಕಿರಣ್ ಕುಮಾರ್ (30) ಮೃತ ದುರ್ದೈವಿ. ಅಪಘಾತದಿಂದ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿ ಕೆಲಕಾಲ ಟ್ರಾಫಿಕ್‌ ಜಾಮ್ ಉಂಟಾಗಿತ್ತು.

ಸವಾರ ಕಿರಣ್ ಕುಮಾರ್ ತನ್ನ ಸ್ಕೂಟಿ ವಾಹನ ಓಡಿಸಿಕೊಂಡು ಸಿಲ್ಕ್ ಬೋರ್ಡ್ ಕಡೆ ಹೊರಟಿದ್ದ. ಮಳೆಗೆ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾನೆ. ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಐಚರ್ ವಾಹನ ಆತನ ತಲೆಯ ಮೇಲೆ ಚಲಿಸಿದೆ. ಮೃತ ವ್ಯಕ್ತಿಯ ಶವ ಸೇಂಟ್ ಜಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ‌ ನೀಡಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೃತ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಬೆಂಗಳೂರು-ಚೆನೈ ಹೈವೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

Published On - 5:12 pm, Thu, 4 August 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ