ರಾಯಚೂರಿನಲ್ಲಿ ನಿನ್ನೆ ಬುಧವಾರ ಗೃಹಿಣಿಯ ಸಾವು, ಇಂದು ಕಟ್ಟಡದಿಂದ ಕೆಳಕ್ಕೆ ಬಿದ್ದಿರುವ ಸ್ಥಿತಿಯಲ್ಲಿ ಯುವಕನ ಸಾವು
ರಮೇಶ್ ತನ್ನ ಸ್ನೇಹಿತ ಕರೆ ಮಾಡಿದ ಅಂತಾ ನಿನ್ನೆ ರಾತ್ರಿ ಆತನ ಜೊತೆಗೆ ಹೋಗಿದ್ದ, ಇದೇ ತಿಮ್ಮಾಪುರ ಪೇಟೆಯಲ್ಲಿ ಉಮೇಶ್ ಅನ್ನೋ ಮತ್ತೊಬ್ಬ ಸ್ನೇಹಿತನ ನಿರ್ಮಾಣ ಹಂತದ ಕಟ್ಟಡದ ಮೇಲೆ ರಮೇಶ್ ಮಲಗಿದ್ದನಂತೆ..ಆದ್ರೆ ಬೆಳಿಗ್ಗೆ ಎದ್ದು ನೋಡಿದ್ರೆ ರಮೇಶ ಆ ನಿರ್ಮಾಣ ಹಂತದ ಕಟ್ಟಡದಿಂದ ಟಿನ್ ಶೆಡ್ ಮನೆ ಮೇಲೆ ಬಿದ್ದ ಸ್ಥಿತಿಯಲ್ಲಿ ಹೆಣವಾಗಿದ್ದಾನೆ.
ಬಿಸಿಲುನಾಡು ರಾಯಚೂರಿನಲ್ಲಿ ಮತ್ತೊಂದು ಹೆಣ ಉರುಳಿದೆ.. ಎರಡು ದಿನ ಎರಡು ಅನುಮಾನಾಸ್ಪದ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಿನ್ನೆ ಮಹಿಳೆ ಕಟ್ಟಡದಿಂದ ಕೆಳಕ್ಕೆ ಬಿದ್ದ ಕೇಸ್ ನಂತೆ ಇಂದು ಓರ್ವ ಯುವಕ ಕೂಡ ಕಟ್ಟಡದಿಂದ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಹೆಣವಾಗಿದ್ದಾನೆ. ಹೌದು..ಬಿಸಿಲುನಾಡು ರಾಯಚೂರಿನಲ್ಲಿ ಇಂದು ಗುರುವಾರ ಮತ್ತೊಂದು ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ನಗರದ ನೇತಾಜಿ ನಗರದಲ್ಲಿ ನಿನ್ನೆಯಷ್ಟೇ ಶಿಲ್ಪಾ ಅನ್ನೋ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ರು. ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದಿರೊ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು..ಈ ಘಟನೆ ಬೆನ್ನಲ್ಲೇ ಇಂದು ರಾಯಚೂರು ನಗರದ ತಿಮ್ಮಾಪುರ ಪೇಟೆಯಲ್ಲಿನ ಜನ ಇಂದು ಅಕ್ಷರಶಃ ಬೆಚ್ಚಿ ಬಿದ್ದಿದ್ರು..ಯಾಕೆಂದರೆ ಗಣೇಶನ ಹಬ್ಬದ ಖುಷಿಯಲ್ಲಿರೊ ಏರಿಯಾ ಜನಕ್ಕೆ ಇಂದು ಸಾವಿನ ಸೂತಕ ಆವರಿಸಿತ್ತು.. ತಿಮ್ಮಾಪುರ ಪೇಟೆಯ ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಪಕ್ಕದಲ್ಲಿದ್ದ ಟಿನ್ ಶೆಡ್ ನ ಮನೆ ಮೇಲೆ ಬಿದ್ದಿರೊ ಸ್ಥಿತಿಯಲ್ಲಿ ರಮೇಶ್ ಅನ್ನೋ ಯುವಕ ಮೃತಪಟ್ಟಿದ್ದಾನೆ..
ಹೌದು..ಇಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರೊ ರಮೇಶ್ 19 ವರ್ಷದ ಯುವಕ. ಕರಿಯಪ್ಪ ಅನ್ನೋರ ಕಿರಿ ಮಗ ಈತ. ಪಿಯುಸಿ ವರೆಗೂ ಓದಿದ್ದ ರಮೇಶ್, ಮನೆ ಪರಿಸ್ಥಿತಿ ಸರಿಯಿಲ್ಲದ ಹಿನ್ನೆಲೆ ಓದು ಅರ್ಧಕ್ಕೆ ನಿಲ್ಲಿಸಿ ಗಾರೆ ಕೆಲಸಕ್ಕೆ ಹೋಗ್ತಿದ್ದ. ಗಣೇಶ ಚತುರ್ಥಿ ಹಿನ್ನೆಲೆ ನಿನ್ನೆಯೂ ರಮೇಶ ಸಂಜೆ ಏರಿಯಾದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಪೆಂಡಾಲ್ ಬಳಿ ಓಡಾಡಿ, ಕೆಲಸ ಕಾರ್ಯಗಳನ್ನು ಮಾಡಿದ್ದ..
ರಾತ್ರಿ ಆತನ ಸ್ನೇಹಿತನೊಬ್ಬ ಕರೆ ಮಾಡಿದ್ನಂತೆ..ಆಗ ಆತನ ಜೊತೆಗೆ ಹೋಗಿದ್ದ ರಮೇಶ್, ಇದೇ ತಿಮ್ಮಾಪುರ ಪೇಟೆಯಲ್ಲಿ ಉಮೇಶ್ ಅನ್ನೋ ಮತ್ತೊಬ್ಬ ಸ್ನೇಹಿತನ ನಿರ್ಮಾಣ ಹಂತದ ಕಟ್ಟಡದ ಮೇಲೆ ಮಲಗಿದ್ದನಂತೆ..ಆದ್ರೆ ಬೆಳಿಗ್ಗೆ ಎದ್ದು ನೋಡಿದ್ರೆ ರಮೇಶ ಆ ನಿರ್ಮಾಣ ಹಂತದ ಕಟ್ಟಡದಿಂದ ಪಕ್ಕದಲ್ಲಿದ್ದ ಟಿನ್ ಶೆಡ್ ಮನೆ ಮೇಲೆ ಬಿದ್ದಿರೊ ಸ್ಥಿತಿಯಲ್ಲಿ ಹೆಣವಾಗಿದ್ದಾನೆ..
ಆದ್ರೆ ಆತ ಸಾವನ್ನಪ್ಪಿರೊ ಸ್ಥಿತಿ ನೋಡಿದ್ರೆ ಅನುಮಾನವಿದೆ..ಹೀಗಾಗಿ ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಅಂತ ರಮೇಶನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೇತಾಜಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ನಿನ್ನೆ ಬುಧವಾರ ಮೃತ ರಮೇಶ್ ಗೆ ಕರೆ ಮಾಡಿದ್ದ ಯುವಕನ ಹೇಳಿಕೆ ಪಡೆಯೋ ಸಾಧ್ಯತೆ ಇದೆ.
Published On - 4:42 pm, Thu, 21 September 23