ರಾಯಚೂರು: ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್​​ ಶವವಾಗಿ ಪತ್ತೆ, ದೂರು ನೀಡಿದ ಪತ್ನಿ

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಷಿಯನ್​​ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಳಕಿಗೆ ಬಂದಿದೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಲ್ಯಾಬ್ ಟೆಕ್ನಿಷಿಯನ್ ಶವ​ ಇಂದು ಠಾಕೂರ್ ಲೇಔಟ್ ಬಳಿ ಪತ್ತೆಯಾಗಿದೆ. ಪತ್ನಿ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಯಚೂರು: ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್​​ ಶವವಾಗಿ ಪತ್ತೆ, ದೂರು ನೀಡಿದ ಪತ್ನಿ
ಮೃತ ಮಂಜುನಾಥ್
Edited By:

Updated on: May 06, 2025 | 10:32 AM

ರಾಯಚೂರು, ಮೇ 05: 2 ದಿನದ ಹಿಂದೆ ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನಿಷಿಯನ್ (Lab Technician) ಇದೀಗ​​ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ (dead) ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದ ಬಳಿ ಠಾಕೂರ್ ಲೇಔಟ್​​ನಲ್ಲಿ ನಡೆದಿದೆ. ಮಂಜುನಾಥ್​ (33) ಮೃತ ಲ್ಯಾಬ್ ಟೆಕ್ನಿಷಿಯನ್. ಸದ್ಯ ಸ್ಥಳಕ್ಕೆ ಮಸ್ಕಿ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಮಂಜುನಾಥ್ ಪತ್ನಿ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಮೃತ ಮಂಜುನಾಥ್​​ ಮೆದಿಕಿನಾಳದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.​ ಪತ್ನಿ ಲಕ್ಷ್ಮೀ ಮತ್ತು ಇಬ್ಬರು ಮಕ್ಕಳೊಂದಿಗೆ ಮಸ್ಕಿ ಪಟ್ಟಣದಲ್ಲಿ ವಾಸವಾಗಿದ್ದರು. ಕಳೆದ ಎರಡು ದಿನಗಳಿಂದ ಮಂಜುನಾಥ್​ ನಾಪತ್ತೆಯಾಗಿದ್ದರು. ಚರಂಡಿಯೊಂದರ ಬಳಿ 2 ದಿನ ನಿಂತಲ್ಲೇ ನಿಲ್ಲಿಸಲಾಗಿದ್ದ ಬೈಕ್​​ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಂಜುನಾಥ್ ಪತ್ನಿ ಲಕ್ಷ್ಮೀ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಉಸಿರುಗಟ್ಟಿಸಿ ಪತಿಯಿಂದಲೇ ಪತ್ನಿಯ ಕೊಲೆ

ಉಸಿರುಗಟ್ಟಿಸಿ ಪತಿಯಿಂದಲೇ ಪತ್ನಿಯ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ವಾಬಸಂದ್ರ ಬಳಿಯ ನಂಜಾರೆಡ್ಡಿ ಲೇಔಟ್​ನಲ್ಲಿ ನಡೆದಿದೆ. ಪತ್ನಿ ಬರ್ಸಾ ಪ್ರಿಯದರ್ಶಿನಿ(21) ಕೊಲೆಗೈದ ಪತಿ ಸೋಹನ್ ಕುಮಾರ್. ದಂಪತಿ ಒಂದು ವಾರದ ಹಿಂದೆ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ
ಕಣ್ಮುಚ್ಚಿ ಬಿಡುವಷ್ಟರಲ್ಲೇ ಕಗ್ಗೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್!
ಬೆಂಗಳೂರು: ತಂದೆಯ ಕೊಲೆ ಪ್ರತೀಕಾರಕ್ಕಾಗಿ ಮಾವನನ್ನು ಕೊಂದ ಪುತ್ರ
ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದ ಹೋಂ ಗಾರ್ಡ್​ ಅರೆಸ್ಟ್​​
ತನಗಿಂತ 2 ವರ್ಷ ದೊಡ್ಡವಳೊಂದಿಗೆ ಲವ್​: ಯುವತಿ ಹಿಂದೆ ಬಿದ್ದ ಯುವಕನ ಹತ್ಯೆ

ಇದನ್ನೂ ಓದಿ: ಹುಬ್ಬಳ್ಳಿ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ

ರಾತ್ರಿ 12 ಗಂಟೆ ಸುಮಾರಿಗೆ ಮಗು ಅಳುತ್ತಿರುವ ಶಬ್ದ ಕೇಳುತ್ತಿತ್ತು. ಮಗುವಿನ ಅಳು ಶಬ್ದ ಕೇಳಿ ಮನೆಯಿಂದ ಮಾಲೀಕನ ಪತ್ನಿ ಹೊರಬಂದಿದ್ದಾರೆ. ಮಾಲೀಕನ ಪತ್ನಿ ಕಂಡು ಆರೋಪಿ ಸೋಹನ್ ಕುಮಾರ್ ಪರಾರಿ ಆಗಿದ್ದಾರೆ. ಬಳಿಕ ಮನೆಯ ಕೊಠಡಿಗೆ ತೆರಳಿ ನೋಡಿದಾಗ ಕೊಲೆ ಬೆಳಕಿಗೆ ಬಂದಿದೆ.

ಒಂಟಿಯಾಗಿ ವಾಸ ಮಾಡ್ತಿದ್ದ ಮಹಿಳೆಯ ಕೊಲೆ: ಸಂಬಂಧಿಕರ ಮೇಲೆ ಶಂಕೆ

ಒಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವಂತಹ ಘಟನೆ  ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ. ಲಕ್ಕಮ್ಮ ದೊಡ್ಡಮನಿ(40) ಬರ್ಬರವಾಗಿ ಹತ್ಯೆಯಾದ ಮಹಿಳೆ.

ಇದನ್ನೂ ಓದಿ: ಕಣ್ಮುಚ್ಚಿ ಬಿಡುವಷ್ಟರಲ್ಲೇ ಕೊಚ್ವಿ ಕೊಲೆ: ಸತ್ತು ಬಿದ್ದವನ ಮುಂದೆ ಡಾನ್ಸ್ ಮಾಡಿ ವಿಕೃತಿ

ಲಕ್ಕಮ್ಮ ದೊಡ್ಡಮನಿ ಮದುವೆಯಾಗದೆ ಒಂಟಿಯಾಗಿ ವಾಸವಾಗಿದ್ದರು. ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಕರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.