ವಂಚನೆ ಕೇಸ್​ನಲ್ಲಿ ಶಾಸಕ ರಾಜುಗೌಡ ಹೆಸರು ದುರ್ಬಳಕೆ ಪ್ರಕರಣ: ಹೋರಾಟಗಾರ ಚನ್ನಪ್ಪಗೌಡಗೆ ನೋಟಿಸ್ ಜಾರಿ

ವಂಚನೆ ಕೇಸ್​ನಲ್ಲಿ ಶಾಸಕ ರಾಜುಗೌಡ ಹೆಸರು ದುರ್ಬಳಕೆ ಪ್ರಕರಣ: ಹೋರಾಟಗಾರ ಚನ್ನಪ್ಪಗೌಡಗೆ ನೋಟಿಸ್ ಜಾರಿ
ಹೋರಾಟಗಾರ ಚನ್ನಪ್ಪಗೌಡನನ್ನು ವಿಚಾರಣೆ ಮಾಡುತ್ತಿರುವ ಪೋಲಿಸ್

ಯಾದಗಿರಿಯ ಸುರಪುರ ಪೊಲೀಸರಿಂದ ತನಿಖೆ‌ ಚುರುಕಾಗಿದ್ದು, ವಂಚನೆ ಕೇಸ್ ಬೆಳಕಿಗೆ ತಂದ ಹೋರಾಟಗಾರ ಚನ್ನಪ್ಪಗೌಡಗೆ ಖಾಕಿ ನೋಟಿಸ್ ಜಾರಿ ಮಾಡಿದೆ. ಚನ್ನಪ್ಪಗೌಡಗೆ ನೋಟಿಸ್ ನೀಡಿ, ಪೊಲೀಸರು ವಿಚಾರಣೆ ನಡೆಸಿದ್ದು, ಸುರಪುರ ಚನ್ನಪ್ಪಗೌಡ ವಿಚಾರಣೆಯ ಎಕ್ಸ್ ಕ್ಲುಸಿವ್ ದೃಶ್ಯ ಟಿವಿ9ಗೆ ಲಭ್ಯವಾಗಿವೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 12, 2022 | 1:02 PM

ರಾಯಚೂರು: ವಂಚನೆ ಕೇಸ್​ನಲ್ಲಿ ಶಾಸಕ ರಾಜುಗೌಡ ಹೆಸರು ದುರ್ಬಳಕೆ ಪ್ರಕರಣ ಹಿನ್ನೆಲೆ ಸ್ವಪಕ್ಷದ ಮಹಾನಾಯಕನ ವಿರುದ್ಧ ಪರೋಕ್ಷವಾಗಿ ಶಾಸಕ ರಾಜುಗೌಡ ಗುಡುಗಿದ್ದಾರೆ. ಈ ಬಗ್ಗೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಆಲ್ಕೋಡ್ ಗ್ರಾಮದಲ್ಲಿ ಟಿವಿ9 ಗೆ ಪ್ರತಿಕ್ರಿಯಿಸಿರೊ ಹೋರಾಟಗಾರ ಚನ್ನಪ್ಪಗೌಡ, ನನಗೆ ಮಹಾನ್ ನಾಯಕ, ಯಾವ ನಾಯಕ ಗೊತ್ತಿಲ್ಲ. ನಾನು ಯಾವುದಾದರು ಪಕ್ಷದ ಸಿಂಬಾಲ್ ಹಾಕಿಕೊಂಡಿದ್ದಿನಾ..? ಮೂರು ಪಾರ್ಟಿಗಳ ಸಿಂಬಾಲ್ ಹಾಕಿಕೊಂಡಿಲ್ಲ. ನನ್ನ ಮೇಲೆ ಅವರು ತಪ್ಪು ಭಾವನೆ ತಿಳಿದುಕೊಂಡಿದ್ದಾರಾ ಗೊತ್ತಿಲ್ಲ. ಮಹಾನ್ ನಾಯಕನನ್ನು ಹೊರ ತರೋದು ಒಳ್ಳೆ ಕೆಲಸ. ನಾನು ತಪ್ಪಿತಸ್ಥನಾಗಿ, ತಪ್ಪು ಸುದ್ದಿ ಕೊಟ್ಟಿದ್ರೆ ನನ್ನ ವಿರುದ್ಧ ಕ್ರಮವಾಗಲಿ. ನಾನು ಯಾವ ಪಾರ್ಟಿ ಪರ-ವಿರೋಧವಿಲ್ಲ. ನಾನೂ ಕನ್ನಡಾಂಬೆ ಮಗ, ಕನ್ನಡ ಹೋರಾಟ ಅಷ್ಟೆ ಗೊತ್ತು ಎಂದರು.

ಮಹಾನ್ ನಾಯಕ ಅಥವಾ ಆತನ ಆಪ್ತರಿಂದ ಸಂಪರ್ಕಿಸಿರೊ ಶಂಕೆ ವಿಚಾರವಾಗಿ ಮಾತನಾಡಿದ್ದು, ಮಹಾನ್ ನಾಯಕನ ಕಡೆಯವರು ನನ್ನ ಸಂಪರ್ಕಕ್ಕೆ ಯಾರೂ ಬಂದಿಲ್ಲ. ಸತ್ಯಕ್ಕೆ ದೂರವಾದ ಮಾತು, ಸುಳ್ಳು ಹೇಳಬಾರದು. ಒಂದು ನ್ಯಾಯ ಕೊಡಿಸೊ ಕೆಲಸ ಮಾಡುತ್ತಿದ್ದೇನೆ. ಮೂರು ಪಕ್ಷದವರು ಬಂದು ಹಿಂದೆ ಸರಿ ಅಂದ್ರು, ನಾನು ಹಿಂದೆ ಸರಿಯೋ ಮಾತೇ ಇಲ್ಲ. ನಾನು ರಾಜುಗೌಡ ಸಾಹೆಬ್ರಿಗೆ ಕೇಳೊದಿಷ್ಟೆ, ನನ್ನದು ತಪ್ಪಿದ್ರೆ, ನನ್ನ ವಿರುದ್ಧವೂ ಎಫ್​ಐಆರ್ ದಾಖಲಿಸಿ, ಜೈಲಿಗಟ್ಟಲಿ. ನಾನು ಶಿಕ್ಷೆ ಅನುಭವಿಸುತ್ತೇನೆ. ನನಗೆ ಯಾರೂ ಪರಿಚಯವಿಲ್ಲ. ಯಾರ ಇನ್ ಫ್ಲುಯೆನ್ಸ್ ಇಲ್ಲ. ಯಾವ ಪಾರ್ಟಿಯವರು ನನಗೆ ಹೇಳಿಯೂ ಇಲ್ಲ. ಯಾರ ಮಾತು ಕೇಳಿ, ನನಗೇನಾದ್ರು ಸಮಸ್ಯೆ ಆದ್ರೆ ಪಾರ್ಟಿಯವರು ಬರ್ತಾರಾ ಸ್ವಾಮಿ..? ನಾನೂ ಸ್ವಂತ ಹೋರಾಟ ಮಾಡುತ್ತಿದ್ದೇನೆ. ಯಾವ ಮಹಾನ್ ನಾಯಕನೂ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಈ ವಿಚಾರವಾಗಿ ಯಾದಗಿರಿಯ ಸುರಪುರ ಪೊಲೀಸರಿಂದ ತನಿಖೆ‌ ಚುರುಕಾಗಿದ್ದು, ವಂಚನೆ ಕೇಸ್ ಬೆಳಕಿಗೆ ತಂದ ಹೋರಾಟಗಾರ ಚನ್ನಪ್ಪಗೌಡಗೆ ಖಾಕಿ ನೋಟಿಸ್ ಜಾರಿ ಮಾಡಿದೆ. ಚನ್ನಪ್ಪಗೌಡಗೆ ನೋಟಿಸ್ ನೀಡಿ, ಪೊಲೀಸರು ವಿಚಾರಣೆ ನಡೆಸಿದ್ದು, ಸುರಪುರ ಚನ್ನಪ್ಪಗೌಡ ವಿಚಾರಣೆಯ ಎಕ್ಸ್ ಕ್ಲುಸಿವ್ ದೃಶ್ಯ ಟಿವಿ9ಗೆ ಲಭ್ಯವಾಗಿವೆ. ಸುರಪುರ ಸಿಪಿಐ ಸುನೀಲ್​ರಿಂದ ಚನ್ನಪ್ಪಗೌಡ ವಿಚಾರಣೆ ಮಾಡಲಾಗುತ್ತಿದೆ. ಕೇಸ್ ಹಿನ್ನೆಲೆ, ಲೇಡಿ ಕಿಂಗ್ ಪಿನ್ ರೇಖಾ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ಹಣ ವಹಿವಾಟು ದಾಖಲೆ, ಹಣ ಹಿಂದಿರುಗಿಸೊದಾಗಿ ಮಾಡಿದ್ದ ಅಗ್ರೀಮೆಂಟ್ ಕಾಪಿ, ಚೆಕ್ ಸೇರಿ‌ ವಿವಿಧ ದಾಖಲೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಆರೋಪಿತೆ ರೇಖಾ ಉತ್ತರ ಕರ್ನಾಟಕ ಭಾಗದ ಲಿಂಕ್ ಪಡೆದಿದ್ದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು, ಆಡಿಯೋ‌ ಕ್ಲಿಪ್ ವೈರಲ್ ಆಗಿದ್ದೇಕೆ..? ಆಡಿಯೋದಲ್ಲಿ ಸಂಭಾಷಣೆ ನಡೆಸಿರೋರ್ಯಾರು..? ಆಡಿಯೋದಲ್ಲಿ ಶಾಸಕ ರಾಜು ಗೌಡ ಹೆಸರು ದುರ್ಬಳಕೆಯಾಗಿದ್ದೇಕೆ..? ಹೀಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಪೊಲೀಸರ ತನಿಖೆ ವೇಳೆ ಕಿಂಗ್ ಪಿನ್ ರೇಖಾಳ ಮಾಸ್ಟರ್ ಪ್ಲಾನ್ ರಿವೀಲ್ ಆಗಿದ್ದು, ಉತ್ತರ ಕರ್ನಾಟಕ ಭಾಗದ ಲಿಂಕ್​ಗಾಗಿ ಈ ಭಾಗದ ವ್ಯಕ್ತಿ ಟಾರ್ಗೆಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಬೇಕರಿ ಇಟ್ಟುಕೊಂಡಿದ್ದ ಸುರಪುರ ತಾಲ್ಲೂಕು ಮೂಲದ ವ್ಯಕ್ತಿ ಈರಣಗೌಡ ಪರಿಚಯವಾಗಿದ್ದ. ರಂಜಿತ್ ಅನ್ನೋನ ಮೂಲಕ ಈರಣಗೌಡಗೆ ರೇಖಾ ಪರಿಚಯವಾಗಿದ್ದು, ಸರ್ಕಾರಿ ಕೆಲಸ ಕೊಡಿಸೋದಾಗಿ ಆಮೀಷ ಒಡ್ಡಿದ್ದ. ಆಗ ಈರಣಗೌಡ, ತಮ್ಮ ಸಂಬಂಧಿಕರಿಂದ 30 ಲಕ್ಷ ಆಕೆ ಖಾತೆಗೆ ಜಮೆಯಾಗಿತ್ತು. ಬಳಿಕ ಪರಿಚಯಸ್ಥರೂ ಸೇರಿ‌ 13 ಜನರಿಂದ ಸುಮಾರು 1 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಈಕೆ ಅಕೌಂಟ್​ಗೆ ದೆಹಲಿ, ಮುಂಬಯಿನಿಂದ ಲಕ್ಷಾಂತರ ಹಣ ಜಮೆಯಾಗ್ತಿವೆ. ಬಳಿಕ ಸರ್ಕಾರಿ ಕೆಲಸ ಸಿಗದೇ ಇದ್ದಾಗ, ಹಣ ಕೊಟ್ಟೊಂರಿಂದ ಒತ್ತಡ ಹಾಕಲಾಗಿದೆ. ಕೊನೆಗೆ ರೇಖಾ ಟಾರ್ಚರ್ ತಾಳಲಾರದೇ ಬೇಕರಿ ಬ್ಯುಸಿನೆಸ್ ಬಿಟ್ಟಿದ್ದ ಈರಣಗೌಡ, ನಂತರ ರಾಯಚೂರು ಜಿಲ್ಲೆ ಗಡಿಭಾಗದ ದೇವಸ್ಥಾನದಲ್ಲಿ ಅರ್ಚಕನಾಗಿ ಈರಣಗೌಡ ತಲೆ ಮರೆಸಿಕೊಂಡಿದ್ದ. ಬಳಿಕ ಅಲ್ಲಿಯೂ ಬಂದು, ಟ್ರಸ್ಟ್ ಮಾಡೋಣ ಪ್ರಭಾವಿಗಳಿಂದ ಹಣ ಹೂಡಿಕೆ ಮಾಡಿಸುವಂತೆ ಒತ್ತಾಯ ಮಾಡಲಾಗಿದೆ. ರೇಖಾಳ ಟಾರ್ಚರ್ ಹಾಗೂ ಕೆಲಸಕ್ಕಾಗಿ ಹಣ ಕೊಟ್ಟೋರ ಒತ್ತಡಕ್ಕೆ ಮಣಿದು ಸತ್ಯ ಬಾಯ್ಬಿಟ್ಟ ಈರಣಗೌಡ, ಹೋರಾಟಗಾರ ಚನ್ನಪ್ಪಗೌಡ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಇದೇ ವಿಚಾರವನ್ನು ಖಾಕಿ ಎದುರು ಹೇಳಿಕೆ ರೂಪದಲ್ಲಿ ನೀಡಿರೊ‌ ಚನ್ನಪ್ಪಗೌಡ, ನಿನ್ನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆಲ್ಕೋಡ್ ಗ್ರಾಮದಲ್ಲಿ ವಿಚಾರಣೆ ಮಾಡಲಾಗಿದೆ. ಯಾದಗಿರಿ ಸುರಪುರ ಪೊಲೀಸರಿಂದ ಹೇಳಿಕೆ‌ ದಾಖಲು ಮಾಡಿಕೊಳ್ಳಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada