ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿ ದುರಂತ ಅಂತ್ಯ

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಭೀಕರ ಮಾರಾಮಾರಿಯಲ್ಲಿ 45 ವರ್ಷದ ವ್ಯಕ್ತಿ ಓರ್ವನನ್ನು ಹತ್ಯೆ ಮಾಡಲಾಗಿದೆ. ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯನ್ನ ಹೊಡೆದು ಕೊಲೆ ಮಾಡಲಾಗಿದೆ. ಸದ್ಯ ಮಾನ್ವಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.

ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿ ದುರಂತ ಅಂತ್ಯ
ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ವ್ಯಕ್ತಿ ದುರಂತ ಅಂತ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Mar 05, 2025 | 3:27 PM

ರಾಯಚೂರು, ಮಾರ್ಚ್​​ 05: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯ ನಡೆದಿದ್ದ ಮಾರಾಮಾರಿಯನ್ನು ಬಿಡಿಸಲು ಹೋಗಿದ್ದ ವ್ಯಕ್ತಿಯನ್ನೇ ಹೊಡೆದು ಕೊಲೆ (kill) ಮಾಡಿರುವಂತಹ ದುರಂತ ಘಟನೆ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ಮಾರ್ಚ್​​ 3ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭೀಮಪ್ಪ ಕಾವಲಿ (45) ಮೃತ ವ್ಯಕ್ತಿ. ಸದ್ಯ ಮಾನ್ವಿ ಪೊಲೀಸರು ಉರುಕುಂದ, ವೇಂಕಟೇಶ್, ಗೋಕಯ್ಯ, ತಿಮ್ಮಪ್ಪ ಸೇರಿ ಏಳು ಜನರು ಬಂಧಿಸಿದ್ದಾರೆ. ದೂರು, ಪ್ರತಿ ದೂರು ದಾಖಲಾಗಿದೆ.

ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದ ಹೊರ ಭಾಗದಲ್ಲಿ ಹಳ್ಳದ ರಸ್ತೆ ಕಾಮಗಾರಿ ನಡೆಯಿತ್ತಿದೆ. ಇದೇ ಕಾಮಗಾರಿಯ ಬೋರ್ಡ್​ಗೆ ಆರೋಪಿ ವಿರೇಶ್ ಟ್ರ್ಯಾಕ್ಟರ್​​​ ಗುದ್ದಿಸಿದ್ದ. ಈ ಬಗ್ಗೆ ಕಾಮಗಾರಿ ಮಾಡಿಸುತ್ತಿದ್ದ ವೆಂಕೋಬಾ ಹಾಗೂ ವಿರೇಶ್ ನಡುವೆ ಕಿರಿಕ್ ಉಂಟಾಗಿದೆ. ಆಗ ವಿರೇಶ್​ನಿಂದ ವೆಂಕೋಬಾ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಸಾಲ ತೀರಿಸೋಕೆ ಬುರ್ಖಾ ತೊಟ್ಟು ವೃದ್ದೆಯ ಚಿನ್ನಾಭರಣ ಕದ್ದ ಖತರ್ನಾಕ್​ ಮಹಿಳೆಯರು

ಇದನ್ನೂ ಓದಿ
ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್​ನಿಂದಲೇ ಟ್ರೈನಿಂಗ್! ಆರೋಪಿ ಅಂದರ್
ಬೆಂಗಳೂರು: 17 ಲಕ್ಷ ಮೌಲ್ಯದ ಡ್ರಗ್ಸ್​ ವಶ: ಇಬ್ಬರು ವಿದೇಶಿಗರ ಬಂಧನ
ಕೋಲಾರದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು
ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ

ಈ ವಿಚಾರವಾಗಿ ವೆಂಕೋಬಾ ಹಾಗೂ ವಿರೇಶ್​ನ ಕುಟುಂಬಗಳ ನಡುವೇ ಭೀಕರ ಹೊಡೆದಾಟ ನಡೆದಿದೆ. ಆಗ ಎರಡು ಕಡೆಯವರು ಸಂಬಂಧಿಕರೇ ಅಂತ ಜಗಳ ಬಿಡಿಸಲು ಭೀಮಪ್ಪ ಹೋಗಿದ್ದ. ಆಗ ಭೀಮಪ್ಪನನ್ನೇ ದೊಣ್ಣೆ, ರಾಡ್​​ಗಳಿಂದ ಹೊಡೆದು ವಿರೇಶ್ ಹಾಗೂ ಆತನ ಕಡೆಯವರು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಪ್ರಮುಖ ಆರೋಪಿ ವಿರೇಶ್​ಗೂ ಗಾಯವಾಗಿದ್ದು, ಬಳ್ಳಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

3 ದಿನದ ಹಿಂದೆ ವಿವಾಹವಾಗಿದ್ದ ಯುವಕ ಹೃದಯಾಘಾತದಿಂದ ಸಾವು

3 ದಿನದ ಹಿಂದೆ ವಿವಾಹವಾಗಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ದಾರುಣ ಘಟನೆಯೊಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಿನ್ನೆ ನಡೆದಿದೆ. ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್(28) ಮೃತ ವ್ಯಕ್ತಿ.

ಇದನ್ನೂ ಓದಿ: ರಾಯಚೂರಿನಲ್ಲಿ ಎರಡು ಬೈಕ್​​ಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಮೂವರು ದುರ್ಮರಣ

ಕಳೆದ ಭಾನುವಾರವಷ್ಟೇ ಮೃತ ಶಶಾಂಕ್ ಹಸೆಮಣೆ ಏರಿದ್ದ. ಜಾರ್ಖಂಡ್ ಮೂಲದ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಆದರೆ ವಿಧಿಯಾಟಕ್ಕೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:26 pm, Wed, 5 March 25