ಮಂತ್ರಾಲಯ ರಾಯರ 352ನೇ ಉತ್ತರಾಧನಾ ಮಹೋತ್ಸವ: ರಾಜಬೀದಿಯಲ್ಲಿ ಜರುಗಿದ ಮಹಾ ರಥೋತ್ಸವ

ತುಂಗಭದ್ರಾ ದಡದಲ್ಲಿರುವ ರಾಯರ ಸನ್ನಿಧಿಯಲ್ಲಿಂದು ರಾಯರ ಉತ್ತರಾಧನೆ ಸಡಗರ ಮನೆ ಮಾಡಿತ್ತು. ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಆರಾಧನೆ ಜೊತೆ ಶ್ರೀಗಳು, ಭಕ್ತರು ಬಣ್ಣದೋಕುಳಿಯಲ್ಲಿ ಮಿಂದೆದ್ದು ವಸಂತೋತ್ಸವ ಆಚರಿಸಿದರು. ಮಹಾರಥೋತ್ಸವಕ್ಕೆ ಶ್ರೀಗಳು ಹೆಲಿಕಾಪ್ಟರ್ ಮೂಲಕ ಆಗಮಿಸಿ ಪುಷ್ಪಾರ್ಚನೆ ಮಾಡಲಾಯಿತು.

Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Sep 02, 2023 | 8:42 PM

ರಾಯಚೂರು, ಸೆಪ್ಟೆಂಬರ್​ 2: ತುಂಗಭದ್ರಾ ದಡದಲ್ಲಿರುವ ರಾಯರ ಸನ್ನಿಧಿಯಲ್ಲಿಂದು ರಾಯರ ಉತ್ತರಾಧನೆ (UTTARADHANE) ಸಡಗರ ಮನೆ ಮಾಡಿತ್ತು. ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಆರಾಧನೆ ಜೊತೆ ಶ್ರೀಗಳು, ಭಕ್ತರು ಬಣ್ಣದೋಕುಳಿಯಲ್ಲಿ ಮಿಂದೆದ್ದು ವಸಂತೋತ್ಸವ ಆಚರಿಸಿದರು. ಕೊನೆಗೆ ಮಹಾರಥೋತ್ಸವಕ್ಕೆ ಶ್ರೀಗಳು ಹೆಲಿಕಾಪ್ಟರ್ ಮೂಲಕ ಆಗಮಿಸಿ ಪುಷ್ಪಾರ್ಚನೆ ಮಾಡಿದರು. ಲಿಯುಗ ಕಾಮಧೇನು ಗುರು ರಾಘವೇಂದ್ರ ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಆಚರಿಸಲಾಗುತ್ತೆ. ಅದೇ ರೀತಿ ಇಂದು ರಾಯರ ಸನ್ನಿಧಿಯಲ್ಲಿ ಸಂಭ್ರಮದಿಂದ ಉತ್ತರಾಧನೆ ಆಚರಿಸಲಾಯಿತು.

ಇಂದು ಎಂದಿನಂತೆ ಶ್ರೀ ಮಠದಲ್ಲಿ ಪಾರಾಯಣ, ನೈರ್ಮಲ್ಯ ವಿಸರ್ಜನೆ,ಮೂಲರಾಮದೇವರ ಪೂಜೆಗಳ ನ್ನ ನೆರವೇರಿಸಲಾಯಿತು. ಜೊತೆಗೆ ರಾಯರ ಮೂಲ ಬೃಂದಾವನಕ್ಕೆ ಶ್ರೀಗಳಾದ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಉತ್ತರಾಧನೆ ವೇಳೆ ಆಚರಿಸಲಾಗುವ ವಸಂತೋತ್ಸವದ ಅಂಗವಾಗಿ ಶ್ರೀಗಳು ರಾಯರಿಗೆ ಬಣ್ಣವನ್ನ ಅರ್ಪಿಸಿದರು. ನಂತರ ಶ್ರೀಗಳು ಭಕ್ತರಿಗೆ, ಅರ್ಚಕರಿಗೆ ಬಣ್ಣವನ್ನ ಎರಸಿ ಬಣ್ಣದೋಕುಳಿ ಆಡುವ ಮೂಲಕ ವಸಂತೋತ್ಸವ ಆಚರಣೆ ಮಾಡಿದರು. ಅಪಾರ ಭಕ್ತರು ಈ ವಸಂತೋತ್ಸವದಲ್ಲಿ ಭಾಗಿಯಾಗಿದ್ದು ವಿಶೇಷ.

ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವ ಶುರು, ಮಠದಲ್ಲಿ ಮನೆಮಾಡಿದ ಸಂಭ್ರಮ

ಉತ್ತರಾಧನೆ ಹಿನ್ನೆಲೆ ಇಂದು ರಾಯರು ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಬಳಿಕ ಗುರುರಾಯರನ್ನ ಪ್ರಹ್ಲಾದ್ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸದತ್ತ ಶ್ರೀಗಳು ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಶ್ರೀಗಳು ಭಕ್ತರಿಗೆ ಆಶಿರ್ವಚನೆ ಮಾಡಿದರು. ಈ ಬಾರಿ ವಿಶೇಷವಾಗಿ ಚಂದ್ರಯಾನ 3 ಯಶಸ್ವಿಯಾಗಿದ್ದನ್ನ ನೆನೆದರು. ಇದು ವಿಶ್ವದಲ್ಲೇ ಹೆಮ್ಮೆಯ ವಿಷಯ. ಹೀಗಾಗಿ ಚಂದ್ರಯಾನ 3 ರ ಮಾದರಿಯಲ್ಲಿ ಸೂರ್ಯನತ್ತ ಹೊರಟಿರುವ ಆದಿತ್ಯ ಎಲ್​1 ಕೂಡ ಯಶಸ್ವಿಯಾಗಲಿ ಅಂತ ಹಾರೈಸಿದರು. ಜೊತೆಗೆ ದೇಶ ಭಕ್ತಿ ಮುಖ್ಯ ಅನ್ನೋದನ್ನ ಭಕ್ತರಿಗೆ ಸಾರಿ ಹೇಳಿದರು.

ಇದನ್ನೂ ಓದಿ: ಮಂತ್ರಾಲಯ ಶ್ರೀ ಗುರು ರಾಘವೇಂದ್ರ ರಥೋತ್ಸವಕ್ಕೆ ಹರಿದುಬಂದ ಭಕ್ತ ಸಾಗರ, ಇಲ್ಲಿದೆ ವಿಡಿಯೋ

ಶ್ರೀ ಮಠದ ರಾಜಬೀದಿಯಲ್ಲಿ ಮಹಾ ರಥೋತ್ಸವ ಜರುಗಿತು. ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ರಥೋತ್ಸವದ ವೇಳೆ ಶ್ರೀಗಳಾದ ಸುಬುಧೇಂದ್ರ ತೀರ್ಥರು ಹೆಲಿಕಾಪ್ಟರ್ ಮೂಲಕ ಆಗಮಿಸಿ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡಿದರು. ಒಟ್ಟು ಮೂರು ಬಾರಿ ಹೆಲಿಕಾಪ್ಟರ್ ಮೂಲಕ ಮಹಾ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡಲಾಯ್ತು.

ಮಹಾರಥೋತ್ಸವ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಿದವು. ಉತ್ತರಾಧನೆ ಸಂಭ್ರಮಕ್ಕೆ ಸಾಕ್ಷಿಯಾದ ಭಕ್ತರು ಸಂತಸ ಇಮ್ಮಡಿಗೊಂಡಿದ್ದಂತು ಸುಳ್ಳಳ್ಳ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್