AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಧನೂರು ತಾಲ್ಲೂಕಿಗೂ ವ್ಯಾಪಿಸಿದ ಕಲುಷಿತ ನೀರಿನ ಸಮಸ್ಯೆ: ಚರ್ಮದ ಸಮಸ್ಯೆ, ಅಲರ್ಜಿಗೆ ತುತ್ತಾಗುತ್ತಿರುವ ಗ್ರಾಮಸ್ಥರು

ಸಿಂಧನೂರು ತಾಲ್ಲೂಕಿಗೂ ಕಲುಷಿತ ನೀರಿನ ಸಮಸ್ಯೆ ವ್ಯಾಪಿಸಿದೆ. ಚರ್ಮದ ಸಮಸ್ಯೆ, ಅಲರ್ಜಿಗೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ.

ಸಿಂಧನೂರು ತಾಲ್ಲೂಕಿಗೂ ವ್ಯಾಪಿಸಿದ ಕಲುಷಿತ ನೀರಿನ ಸಮಸ್ಯೆ: ಚರ್ಮದ ಸಮಸ್ಯೆ, ಅಲರ್ಜಿಗೆ ತುತ್ತಾಗುತ್ತಿರುವ ಗ್ರಾಮಸ್ಥರು
ಕಲುಷಿತ ನೀರು ಸೇವಿಸಿ ಚರ್ಮದ ಸಮಸ್ಯೆ, ಅಲರ್ಜಿಗೆ ತುತ್ತಾಗಿರೊ ಗ್ರಾಮಸ್ಥರು.
TV9 Web
| Edited By: |

Updated on: Aug 07, 2022 | 12:19 PM

Share

ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರಿನ (Contaminated Water) ಸಮಸ್ಯೆ ಇನ್ನೂ ತಪ್ಪಿಲ್ಲ. ಸಿಂಧನೂರು ತಾಲ್ಲೂಕಿಗೂ ಕಲುಷಿತ ನೀರಿನ ಸಮಸ್ಯೆ ವ್ಯಾಪಿಸಿದೆ. ಚರ್ಮದ ಸಮಸ್ಯೆ, ಅಲರ್ಜಿಗೆ ಗ್ರಾಮಸ್ಥರು ತುತ್ತಾಗುತ್ತಿದ್ದಾರೆ. ಇಷ್ಟೇಲ್ಲಾ ಅವಾಂತರವಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ರೋಗಿಗಳನ್ನ ಭೇಟಿಯಾಗಿ, ಸಮಸ್ಯೆ ಆಲಿಸಿಲ್ಲ. ಸಿಂಧನೂರು ತಾಲ್ಲೂಕಿನ ಬಂಗಾರಿ ಕ್ಯಾಂಪ್, ವೆಂಕಟಗಿರಿ ಕ್ಯಾಂಪ್​​ಗಳಲ್ಲಿ ಘಟನೆ ಕಂಡುಬಂದಿದೆ. ಮಕ್ಕಳು, ವೃದ್ಧರು, ವಯಸ್ಕರರಿಗೂ ಅಲರ್ಜಿ ಬಾಧಿಸುತ್ತಿದೆ. ಕೆರೆಯ ಕಲುಷಿತ ನೀರು ಕಡಿಯಲು ಬಳಕೆ ಮಾಡುತ್ತಿದ್ದು, ಸ್ನಾನ, ಅಡುಗೆಗೆ ಇದೇ ನೀರು ಅನಿವಾರ್ಯತೆ ಎನ್ನುವಂತ್ತಾಗಿದೆ. ತುರಿಕೆ ತಾಳಲಾರದೆ ಚಿಕ್ಕ ಮಕ್ಕಳು ಕಿರುಚಾಟದಿಂದ ಗೋಳಾಡುತ್ತಿದ್ದಾರೆ. ಸದ್ಯ ಸುಮಾರು 30ಕ್ಕೂ ಹೆಚ್ಚು ಜನರಿಗೆ ಇದೇ ಅಲರ್ಜಿ. ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರಿಗೆ ಅಧಿಕಾರಿಗಳು ಕಲುಷಿತ ನೀರು ಕುಡಿಸುತ್ತಿದ್ದಾರೆ. ಬಸವನ ಕ್ಯಾಂಪ್ ಬಳಿ ಕಾಲುವೆಯಲ್ಲಿ ಜನ ಕಸ ಬೀಸಾಡುತಿದ್ದಾರೆ.

ಇದನ್ನೂ ಓದಿ: ಲಿಂಗಸುಗೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಉಪ್ಪು ನೀರು ಕುಡಿಯಬೇಕಾದ ಅಸಹಾಯಕ ಪರಿಸ್ಥಿತಿಯಲ್ಲಿ ಜನತೆ

ದನಕರುಗಳ ಹೊಸಲು, ಊರಿನ ಕಸ-ಕಡ್ಡಿಯನನ್ನ ಇದೇ ಕಾಲುವೆಗೆ ಜನ ಬೀಸಾಡುತ್ತಾರೆ. ಅಲ್ಲಿಂದಲೇ ಕಾಲುವೆ ನೀರು ಸಂಪೂರ್ಣ ಕಲುಷಿತವಾಗಿದೆ. ಬಳಿಕ ಕೆರೆ ಸ್ಬಚ್ಛಗೊಳಸಿದೇ ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ನೀರು ಸಂಗ್ರಹಣೆ ಮಾಡಲಾಗುತ್ತದೆ. ಬಳಿಕ ಮತ್ತೆ ನೀರು ಕಲುಷಿತಗೊಂಡಿದೆ. ಈ ನೀರನ್ನ ಶುದ್ಧೀಕರಣ ಮಾಡದೇ ಮನೆ-ಮನೆಗೆ ಸರಬರಾಜು ಮಾಡಲಾಗುತ್ತಿದೆ.

ಕೇಸ್ ಸ್ಟಡಿ-1;

ರೋಗಿ: 8 ತಿಂಗಳ ಮಗು ನಾಗರಾಜ್, ಅಲರ್ಜಿಗೊಳಗಾದವರು ಹಾಗೂ ಮಗು ತಂದೆ ಈತನ 8 ತಿಂಗಳ ಮಗು ಅಲರ್ಜಿಯಿಂದ ನರಳಾಟ ಮೈ ಕೈ ಉಜ್ಜಿಕೊಂಡು ಬಾಧೆ ಪಡುತ್ತಿರೊ ಕಂದಮ್ಮ ಕಾಲು,ತಲೆ ಭಾಗಕ್ಕೆ ಅಂಟಿರೊ ಅಲರ್ಜಿ ಕಳೆದ ಜೂನ್ 26 ರಿಂದ ಚಿಕಿತ್ಸೆ ಪಡೆಯುತ್ತಿರೊ ಮಗು ಸಿಂಧನೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇನ್ನೂ ವಾಸಿಯಾಗದ ಅಲರ್ಜಿ,ಚಿಕಿತ್ಸೆ ಮುಂದುವರಿಕೆ ಮಗು ತಂದೆ ನಾಗರಾಜ್ ಗೂ ಉಲ್ಬಣಿಸಿದ್ದ ಅಲರ್ಜಿ

ಕೇಸ್ ಸ್ಟಡಿ-2; ರೋಗಿ; 7 ತಿಂಗಳ ಮಗು ರಾಘವೇಂದ್ರ, ಅಲರ್ಜಿಗೊಳಗಾದೋರು ಹಾಗೂ ಮಗು ತಂದೆ ಇವರ 7 ತಿಂಗಳ ಮಗು ಅಲರ್ಜಿಯಿಂದ ಗೋಳಾಟ ಕಾಲು,ಹೊಟ್ಟೆ ಭಾಗಕ್ಕೆ ಅಂಟಿರೊ ತುರಿಕೆ(ಅಲರ್ಜಿ) ಕಳೆದೊಂದು ತಿಂಗಳಿನಿಂದ ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಬಳಿಕ ಸಿಂಧನೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸದ್ಯ ಈ ಮಗುವಿಗೂ ಚಿಕಿತ್ಸೆ ಮುಂದುವರಿಕೆ ಮಗು ತಂದೆ ರಾಘವೇಂದ್ರ, ತಾಯಿ ಹಾಗೂ ಹಾಗೂ ಮಗು ಅಕ್ಕಳಿಗೂ ಉಂಟಾಗಿದ್ದ ತುರಿಕೆ ರೋಗ

ಕೇಸ್ ಸ್ಟಡಿ-3; ರೋಗಿ;ಶಶಿಕುಮಾರ್(34) ಎರಡು ಮುಂಗೈ,ಹೊಟ್ಟೆ ಭಾಗಕ್ಕೆ ಸಂಪೂರ್ಣ ಅಲರ್ಜಿ,ತುರಿಕೆ ರೋಗದ ಸಮಸ್ಯೆ ಕಳೆದೊಂದು ತಿಂಗಳಿನಿಂದ ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಔಷಧಿ ಪಡೆದರೂ ವಾಸಿಯಾಗದ ತುರಿಕೆ,ಅಲರ್ಜಿ ಶಶಿಕುಮಾರ್ ನಿಂದ ಪತ್ನಿಗೂ ಅಂಟಿರೋ ಅಲರ್ಜಿ ಈ ಹಿನ್ನೆಲೆ ಹಾಸಿಗೆಗಳನ್ನ ಬೇರ್ಪಡಿಸಿ ವಾಸ ಸದ್ಯ ಶಶಿಕುಮಾರ್ ಗೆ ಚಿಕಿತ್ಸೆ ಮುಂದುವರಿಕೆ

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.