AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಬಾಲ ಬಿಚ್ಚಿದ ಸೇಂದಿ ದಂಧೆಕೋರರು! ಮಾರುವೇಷದಲ್ಲಿ ದಾಳಿ ನಡೆಸಿದ ಅಬಕಾರಿ ಟೀಂ

ಈ ಸೇಂದಿ ದಂಧೆಕೋರರು ಪ್ರಯಾಣಿಕರ ಸೋಗಿನಲ್ಲಿ ರೈಲಿನ ಮೂಲಕ ಇಂದು(ಅ.17) ರಾಯಚೂರಿಗೆ ಬರುತ್ತಿದ್ದರು. ಅಪಾರ ಪ್ರಮಾಣದ ಸೇಂದಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದಿದ್ದ ಅಬಕಾರಿ ಪೊಲೀಸರು ಕೂಡ ಪ್ರಯಾಣಿಕರ ಸೋಗಿನಲ್ಲಿಯೇ ಹೋಗಿ ದಾಳಿ ಮಾಡಿ, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರಿನಲ್ಲಿ ಬಾಲ ಬಿಚ್ಚಿದ ಸೇಂದಿ ದಂಧೆಕೋರರು! ಮಾರುವೇಷದಲ್ಲಿ ದಾಳಿ ನಡೆಸಿದ ಅಬಕಾರಿ ಟೀಂ
ಬಂಧಿತ ಆರೋಪಿಗಳು, ಅಬಕಾರಿ ಡಿಸಿ
ಭೀಮೇಶ್​​ ಪೂಜಾರ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Oct 17, 2023 | 9:37 PM

Share

ರಾಯಚೂರು, ಅ.17: ಬಿಸಿಲುನಾಡು ರಾಯಚೂರಿನಲ್ಲಿ ಸೇಂದಿ ದಂಧೆ(Toddy Scam)ಈಗಲೂ ಜೀವಂತವಾಗಿದೆ. ಆಂಧ್ರ, ತೆಲಂಗಾಣ ಗಡಿಯಲ್ಲಿರುವ ಕೆಲ ಗ್ರಾಮಗಳು ಸೇರಿದಂತೆ ರಾಯಚೂರು(Raichur)ನಗರದಲ್ಲಿಯೇ ದಂಧೆ ಫುಲ್​ ಆಕ್ಟಿವ್ ಆಗಿದೆ. ಸಿಎಚ್ ಪೌಡರ್ ಹೆಸರಿನ ನಿಷೇಧಿತ ಕೆಮಿಕಲ್​ನಿಂದ ಈ ಸೇಂದಿ ತಯಾರಿಸಲಾಗುತ್ತೆ. ಈ ದಂಧೆಕೋರರು ಬಡವರು, ಕೂಲಿ ಕಾರ್ಮಿಕ ವರ್ಗದ ಜನರನ್ನೇ ಟಾರ್ಗೆಟ್ ಮಾಡುತ್ತಾರೆ. ಸರ್ಕಾರದ ಪರವಾನಿಗೆ ಹೊಂದಿರುವ ಮದ್ಯಕ್ಕೆ ಹೋಲಿಸಿದ್ರೆ, ಈ ಸೇಂದಿಗೆ ಅತೀ ಕಡಿಮೆ ದರ ಇದ್ದು, ಈ ದಂಧೆಕೋರರು ರಸ್ತೆ ಮಾರ್ಗ ಹಾಗೂ ರೈಲು ಮಾರ್ಗದ ಮೂಲಕ ಸೇಂದಿ, ಸಿಎಚ್ ಪೌಡರ್ ಸರಬರಾಜು ಮಾಡುತ್ತಾರೆ. ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ , ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಬಕಾರಿ ಪೊಲೀಸರು ಪ್ರಯಾಣಿಕರ ಸೋಗಿನಲ್ಲಿಯೇ ಹೋಗಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಹೌದು, ಈ ಸೇಂದಿ ದಂಧೆಕೋರರು ಪ್ರಯಾಣಿಕರ ಸೋಗಿನಲ್ಲಿ ರೈಲಿನ ಮೂಲಕ ಇಂದು(ಅ.17) ರಾಯಚೂರಿಗೆ ಬರುತ್ತಿದ್ದರು. ಅಪಾರ ಪ್ರಮಾಣದ ಸೇಂದಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದಿದ್ದ ಅಬಕಾರಿ ಪೊಲೀಸರು ಕೂಡ ಪ್ರಯಾಣಿಕರ ಸೋಗಿನಲ್ಲಿ ರಾಯಚೂರು ನಗರದ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಇನ್ನೇನು ತೆಲಂಗಾಣದ ಕೃಷ್ಣಾ ಕಡೆಯಿಂದ ಬಂದ ಟ್ರೈನ್​ನಲ್ಲಿ ಸೇಂದಿ ದಂಧೆಕೋರರು ಮಾಲು ಸಮೇತ ಕೆಳಗಿಳಿದಿದ್ದೆ ತಡ, ಅಬಕಾರಿ ಟೀಂ ಆ ದಂಧೆಕೋರರನ್ನು ಲಾಕ್ ಮಾಡಿದರು.

ಇದನ್ನೂ ಓದಿ:ಜನರ ಕಣ್ಣಿಗೆ ಹೈಪೈ ಲೈಫ್, ಮಾಡೋದು ಮಣ್ಣು ತಿನ್ನುವ ಕೆಲಸ: ಸೇಂದಿ ಮಾಫಿಯಾದ ಕಿಲಾಡಿ ದಂಪತಿ ಅರೆಸ್ಟ್

ಆರು ಜನ ಆರೋಪಿಗಳು ವಶಕ್ಕೆ

ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ತಡ ಸುಳ್ಳು ಹೇಳುವುದಕ್ಕೆ ಯತ್ನಿಸಿದ್ದ ಆರೋಪಿಗಳು, ತಮ್ಮ ಮಾಲು ಸಮೇತ ಸೆರೆ ಸಿಕ್ಕಿದ್ದಾರೆ. ಸುಬ್ಬಲಮ್ಮ, ರಾಮಾಂಜಿನೆಯ, ಲಕ್ಷ್ಮಿ, ನರಸಮ್ಮ, ಚಿನ್ನಿಕುಮಾರ್ ಸೇರಿದಂತೆ 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಆರೋಪಿಗಳು ಸಾಗಾಟ ಮಾಡುತ್ತಿದ್ದ 120 ಕ್ಕೂ ಹೆಚ್ಚು ಲೀಟರ್ ಸೇಂದಿಯನ್ನು ಜಪ್ತಿ ಮಾಡಿದ್ದಾರೆ. ಬಂಧಿತರೆಲ್ಲರೂ ರಾಯಚೂರು ನಗರದ ನಿವಾಸಿಗಳಾಗಿದ್ದು, ತೆಲಂಗಾಣ, ಆಂಧ್ರದಿಂದ ಸೇಂದಿ ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಒಂದು ಲೀಟರ್ ಸೇಂದಿಗೆ ಬರೀ 10 ರಿಂದ 20 ರೂಪಾಯಿ ಅಷ್ಟೆ. ಹೀಗಾಗಿ ಕಾರ್ಮಿಕ ವರ್ಗದ ಜನ ಹೆಚ್ಚಾಗಿ ಇದೇ ಸೇಂದಿಗೆ ದಾಸರಾಗಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿಟ್ಟುಕೊಂಡು ತಮ್ಮ ಖಾಯಂ ಗಿರಾಕಿಗಳಿಗೆ ಮಾತ್ರ ಸೇಂದಿ ಮಾರಾಟ ಮಾಡಲಾಗುತ್ತೆ.

ಸದ್ಯ ಘಟನೆ ಸಂಬಂಧ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ತೆಲಂಗಾಣದಿಂದ ಸಪ್ಲೈ ಯಾರು ಮಾಡುತ್ತಾರೆ. ಅವರ ನೆಟ್​ವರ್ಕ್ ಹೇಗೆಲ್ಲಾ? ಆಪರೇಟ್​ ಆಗುತ್ತಿದೆ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್