ಅವಶ್ಯಕತೆ ಇದ್ರೆ ಗೋ ರಕ್ಷಣೆಗಾಗಿ ಖಡ್ಗ ಎತ್ತಿ ಪರಾಕ್ರಮ ಮೆರೆಯಬೇಕು: ವಿಎಚ್​ಪಿ ಮುಖಂಡನ ವಿಡಿಯೋ ವೈರಲ್

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ವಿಎಚ್​ಪಿ ಮುಖಂಡ ಗೋಪಾಲ್ ನಾಗರಕಟ್ಟೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ವಿಡಿಯೋ ವೈರಲ್ ಆಗುತ್ತಿದೆ. ಗೋ ರಕ್ಷಣೆ ಮಾಡಲು ಅವಶ್ಯಕತೆ ಇದ್ರೆ ಖಡ್ಗವನ್ನ ಎತ್ತಿ ಪರಾಕ್ರಮವನ್ನ ಮೆರೆಯಬೇಕು ಎಂದು ಕರೆ ಕೊಟ್ಟಿದ್ದಾರೆ.

ಅವಶ್ಯಕತೆ ಇದ್ರೆ ಗೋ ರಕ್ಷಣೆಗಾಗಿ ಖಡ್ಗ ಎತ್ತಿ ಪರಾಕ್ರಮ ಮೆರೆಯಬೇಕು: ವಿಎಚ್​ಪಿ ಮುಖಂಡನ ವಿಡಿಯೋ ವೈರಲ್
ವಿಎಚ್​ಪಿ ಮುಖಂಡ ಗೋಪಾಲ್ ನಾಗರಕಟ್ಟೆ
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on: Oct 17, 2023 | 12:22 PM

ರಾಯಚೂರು, ಅ.17: ಗೋ ರಕ್ಷಣೆಗೆ ಅವಶ್ಯಕತೆ ಇದ್ರೆ ಖಡ್ಗ ಎತ್ತುವಂತೆ ವಿಎಚ್​ಪಿ ಮುಖಂಡ ಕರೆ ನೀಡಿದ್ದು ವಿವಾದಕ್ಕೆ ಗುರಿಯಾಗಿದೆ. ಹೌದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ವಿಎಚ್​ಪಿ ಮುಖಂಡ ಗೋಪಾಲ್ ನಾಗರಕಟ್ಟೆ (Gopal Nagarakatte) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ವಿಡಿಯೋ ವೈರಲ್ ಆಗುತ್ತಿದೆ. ಒಂದು ಗೋವು ಸಹ ಕಸಾಯಿ ಖಾನೆಗೆ ಹೋಗಬಾರದು. ಪ್ರತಿಯೊಬ್ಬರಿಂದ ಗೋ ರಕ್ಷಣೆ ನಡೀಬೇಕು. ಗೋ ರಕ್ಷಣೆಗೆ ಅವಶ್ಯಕತೆ ಇದ್ರೆ ಖಡ್ಗ ಎತ್ತಿ ಎಂದು ವಿಎಚ್​ಪಿ (Vishva Hindu Parishad) ಮುಖಂಡ ಗೋಪಾಲ್ ನಾಗರಕಟ್ಟೆ ಅವರು ಕರೆ ಕೊಟ್ಟಿದ್ದಾರೆ.

ಭಾರತ ಗೋಮಾತೆಯ ನೆಲ. ಗೋ ಮಾತೆಯ ರಕ್ತದಿಂದ ಭಾರತ ಮಾತೆ ಆಕ್ರಂದನ ಪಡುತ್ತಿದ್ದಾಳೆ. ಗೋ ಮಾತೆ ಕೂಗು, ಅವಳನ್ನ ಕತ್ತಿರಿಸೋವಾಗಿನ ನೋವು ನೋಡಿ ಭೂ ಮಾತೆ ದುಖಃದಿಂದ ತತ್ತರಿಸುತ್ತಿದ್ದಾಳೆ. ಗೋ ಮಾತೆಯನ್ನ ದುಖಃದಿಂದ ನಿವಾರಣೆ ಮಾಡಿ, ಗೋ ಹತ್ಯೆ ನಿಲ್ಲಿಸಬೇಕಿದೆ. ನಮ್ಮದು ಮಾಂಸ ಮಾರಾಟ ಮಾಡೋ ದೇಶ ಆಗಬಾರದು. ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಒಂದು ಗೋವು ಸಹ ಕಸಾಯಿ ಖಾನೆಗೆ ಹೋಗಬಾರದು. ಗೋ ರಕ್ಷಣೆ ನಡಿಯಬೇಕು. ರೈತರು ನಿಶ್ಚಯ ಮಾಡಬೇಕು. ನಮ್ಮ ತಾಯಿಯನ್ನು ನೋಡಿದ ಹಾಗೆ ಗೋ ಮಾತೆಯನ್ನು ನೋಡಬೇಕು. ಕಟುಕರು ಗೋ ಅಪಹರಣ ಮಾಡಿದಾಗ ಶಿವಾಜಿ ಮಹಾರಾಜರ ಹಾಗೆ ನಮ್ಮ ರಕ್ತ ಬಿಸಿ ಮಾಡಿಕೊಂಡು, ಬಾಹು ಬಲವನ್ನ ಇಟ್ಟುಕೊಂಡು ಗೋ ಮಾತೆ ರಕ್ಷಣೆ ಮಾಡಬೇಕು. ಗೋ ರಕ್ಷಣೆ ಮಾಡಲು ಅವಶ್ಯಕತೆ ಇದ್ರೆ ಖಡ್ಗವನ್ನ ಎತ್ತಿ ಪರಾಕ್ರಮವನ್ನ ಮೆರೆಯಬೇಕು ಎಂದು ಗೋಪಾಲ್ ನಾಗರಕಟ್ಟೆ ಅವರು ಯುವಕರನ್ನು ಹುರಿದುಂಬಿಸಲು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರಜೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ, ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?

ಹಿಂದೂ ಯುವತಿಯರನ್ನ ಪ್ರೇಮ ಜಾಲದಲ್ಲಿ ಸಿಲುಕಿಸಲಾಗ್ತಿದೆ

ಇನ್ನು ಮತ್ತೊಂದೆಡೆ ಗೋಪಾಲ್ ನಾಗರಕಟ್ಟೆ ಅವರು ಲವ್ ಜಿಹಾದ್ ವಿರುದ್ಧ ಕಿಡಿ ಕಾರಿದ್ದಾರೆ. ವಯಸ್ಸು ಜಾಸ್ತಿ ಆಗ್ತಿದೆ, ಶರೀರ ಬೆಳೆದಿದೆ, ಬುದ್ದಿ ಇನ್ನು ಸಂಪೂರ್ಣ ಬೆಳದಿಲ್ಲ. ಮುಂದಿನ ಆತಂಕದ ಅರಿವಿಲ್ಲದ ಹಿಂದೂ ಯುವತಿಯರನ್ನ ಪ್ರೇಮ ಜಾಲದಲ್ಲಿ ಸಿಲುಕಿಸಲಾಗ್ತಿದೆ. ಮತಾಂತರಗೊಳಿಸಿ ಲವ್ ಜಿಹಾದ್ ಅನ್ನೋ ದುಷ್ಟ ಯಂತ್ರದ ಮೂಲಕ ಮುಸಲ್ಮಾನರನ್ನಾಗಿ ನರಕಯಾತನೆ ಕೊಡಲಾಗ್ತಿದೆ. ಮುಸಲ್ಮಾನ ಯುವಕರ ಷಡ್ಯಂತ್ರಕ್ಕೆ ಬಲಿಯಾಗಿ ಮುಸಲ್ಮಾನರ ಮನೆಗೆ ನಮ್ಮ ಯುವತಿಯರು ಹೋಗುತ್ತಿದ್ದಾರೆ. ಮುಸಲ್ಮಾನರ ಗುಹೆಗೆ ತೆರಳಿ ನಮ್ಮ ಯುವತಿಯರನ್ನ ಭಜರಂಗದ ಮರಳಿ ಕರೆತರ್ತಿದೆ. ಬಳಿಕ ಹಿಂದೂ ಯುವಕರೊಂದಿಗೆ ಮದುವೆ ಮಾಡುವ ಪರಾಕ್ರಮ ಹಿಂದೂ ಯುವಕರು ಮಾಡ್ತಿದ್ದಾರೆ.

ಇಂಗ್ಲಿಷ್ನಲ್ಲಿ ಒಂದು ಮಾತಿದೆ ಅಫೇನ್ಸ್ ಇಸ್ ದ ಬೆಸ್ಟ್ ವೇ ಆಫ್ ಡಿಫೇನ್ಸ್ ಅಂತ. ಮೂಗು ಮುಚ್ಚಿದ್ರೆ ಬಾಯಿ ತೆರಿತಾರೆ. ನಮ್ಮ ಜಾತಿ ಯುವಕ ಯುವತಿಯರೇ ಬೇಗ ಯೋಚನೆ ಮಾಡಿ. ಇಡೀ ದೇಶದಲ್ಲಿ ಮುಸಲ್ಮಾನ ಯುವತಿಯರು ಇಷ್ಟ ಪಡೋದು ಹಿಂದೂ ಯುವಕರನ್ನ. ಯಾಕಂದ್ರೆ ಅವರಿಗೆ ಬುರ್ಕಾ ಬೇಕಿಲ್ಲ. ಹೀಗಾಗಿ ಬಹನ್ ಬಚಾವೋ, ಬೇಟಿ ಬಚಾವೋ, ಬಹು ಲಾವೋ ಕ್ರಮ ಮಾಡಬೇಕು. ಇದಕ್ಕೆ ಅಪ್ಪ ಅಮ್ಮನೂ ಕೂಡ ಸಮರ್ಥನೆ ಮಾಡೋ ಭಾವ ನಮ್ಮಲ್ಲಿ ಬರ್ಬೇಕು ಎಂದು ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ