ಅಯೋಧ್ಯೆ ರಾಮಮಂದಿರದ ಮಂಡಲ ಪೂಜೆಗೆ ರಾಯಚೂರಿನ ಇಬ್ಬರು ಪಂಡಿತರು ಆಯ್ಕೆ

ಜನವರಿ 22ರಂದು ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಆಗಲಿದೆ. ಬಳಿಕ ಅಯೋಧ್ಯೆಯಲ್ಲಿ 48 ದಿನಗಳ ಪೂಜಾ ಕೈಂಕರ್ಯ ನೆರವೇರಲಿದೆ. ರಾಮಮಂದಿರದ ಮಂಡಲ ಪೂಜೆಗೆ ರಾಯಚೂರು ಜಿಲ್ಲೆಯ ಇಬ್ಬರು ಪಂಡಿತರು ಆಯ್ಕೆ ಆಗಿದ್ದಾರೆ. ಫೆಬ್ರವರಿ 4 ಕ್ಕೆ ಮಂಡಲ ಪೂಜೆಯಲ್ಲಿ ಆದಯ್ಯ ಸ್ವಾಮಿ ಭಾಗಿಯಾಗಲಿದ್ದಾರೆ. ಫೆಬ್ರವರಿ 6ಕ್ಕೆ ಶ್ರೀಧರ್ ಸ್ವಾಮಿ ಅವರು ಮಂಡಲ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

ಅಯೋಧ್ಯೆ ರಾಮಮಂದಿರದ ಮಂಡಲ ಪೂಜೆಗೆ ರಾಯಚೂರಿನ ಇಬ್ಬರು ಪಂಡಿತರು ಆಯ್ಕೆ
ಅಯೋಧ್ಯೆ ರಾಮಮಂದಿರದ ಮಂಡಲ ಪೂಜೆಗೆ ರಾಯಚೂರಿನ ಇಬ್ಬರು ಪಂಡಿತರು ಆಯ್ಕೆ
Follow us
ಭೀಮೇಶ್​​ ಪೂಜಾರ್
| Updated By: ಆಯೇಷಾ ಬಾನು

Updated on:Jan 20, 2024 | 9:44 AM

ರಾಯಚೂರು, ಜ.20: ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಹೀಗಾಗಿ ಅಯೋಧ್ಯೆಯಲ್ಲಿ ಅಕ್ಷರಶಃ ಸ್ವರ್ಗವೇ ಧರೆಗಿಳಿದಂತಿದೆ. ಇಡೀ ರಾಮನೂರು ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ (Ayodhya Ram Mandir). ಮತ್ತೊಂದೆಡೆ ಅಯೋಧ್ಯೆ ರಾಮಮಂದಿರಕ್ಕೆ ರಾಯಚೂರಿನ ಅಳಿಲು ಸೇವೆ ಅಪಾರ. ರಾಯಚೂರಿನ ವಿರೇಶ್ ಅವರು ಗೋಪುರ, ಗರ್ಭಗುಡಿ ಶಿಲ್ಪಕಲೆ ಕಾರ್ಯ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ರಾಮಮಂದಿರದ ಮಂಡಲ ಪೂಜೆಗೆ ಜಿಲ್ಲೆಯ ಇಬ್ಬರು ಪಂಡಿತರು ಆಯ್ಕೆ ಆಗಿದ್ದಾರೆ.

ಜನವರಿ 22ರಂದು ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಆಗಲಿದೆ. ಬಳಿಕ ಅಯೋಧ್ಯೆಯಲ್ಲಿ 48 ದಿನಗಳ ಪೂಜಾ ಕೈಂಕರ್ಯ ನೆರವೇರಲಿದೆ. ಮಂಡಲ ಪೂಜೆ, ರುದ್ರಾಭಿಷೇಕ, ಬ್ರಹ್ಮೋತ್ಸವ ಸೇರಿ ಇನ್ನಿತರ ಪೂಜೆಗಳು ನಡೆಯಲಿವೆ. ಉಡುಪಿ ಪೇಜಾವರ ಶ್ರೀಗಳ ಸದಸ್ಯತ್ವದ ತಂಡ ಮಂಡಲ ಪೂಜೆ ನೆರವೇರಿಸಲಿದೆ. ಆ ಮಂಡಲ ಪೂಜೆಗೆ ರಾಯಚೂರು ಜಿಲ್ಲೆಯ ಇಬ್ಬರು ಪಂಡಿತರು ಆಯ್ಕೆ ಆಗಿದ್ದಾರೆ. ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ಆದಯ್ಯ ಸ್ವಾಮಿ ಹಾಗೂ ಮಸ್ಕಿ ತಾಲೂಕಿನ ಹಸಮಕಲ್ನ ಶ್ರೀಧರ್ ಸ್ವಾಮಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಉತ್ಸಾಹ; ಯುಕೆ ಸಂಸತ್ತಿನಲ್ಲಿಯೂ ಶ್ರೀರಾಮನ ಜಪ

48 ದಿನಗಳ ಕಾಲ ನಡೆಯಲಿರುವ ಮಂಡಲ ಪೂಜೆಯಲ್ಲಿ ಜಿಲ್ಲೆಯ ಇಬ್ಬರು ಪಂಡಿತರು ಭಾಗಿಯಾಗಲಿದ್ದಾರೆ. ಮಂಡಲ ಪೂಜೆ ಮೂಲಕ 9 ನವಗ್ರಹಗಳು, 12 ರಾಶಿ, 27 ನಕ್ಷತ್ರಗಳ ಜೊತೆ ಎಲ್ಲಾ ದೇವಾನು ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ದೇವರ ಪ್ರಾಣಪ್ರತಿಷ್ಟಾಪನೆ ಆದ ಬಳಿಕ ಮಂಡಲ ಪೂಜೆ ಕಡ್ಡಾಯ. ಏಕೆಂದರೆ ಮಂಡಲ ಪೂಜೆಯಿಂದ ಶ್ರೀ ರಾಮಚಂದ್ರನಿಗೆ ವಿಶೇಷ ಶಕ್ತಿ ಬರುತ್ತೆ ಎಂಬ ಪ್ರತೀತಿ ಇದೆ. ಫೆಬ್ರವರಿ 4 ಕ್ಕೆ ಮಂಡಲ ಪೂಜೆಯಲ್ಲಿ ಆದಯ್ಯ ಸ್ವಾಮಿ ಭಾಗಿಯಾಗಲಿದ್ದಾರೆ. ಫೆಬ್ರವರಿ 6ಕ್ಕೆ ಶ್ರೀಧರ್ ಸ್ವಾಮಿ ಅವರು ಮಂಡಲ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

ಮಂಡಲ ಪೂಜೆಗೆ ಪಂಡಿತರ ಆಯ್ಕೆ ಹೇಗಿತ್ತು?

ಉಡುಪಿ ಪೇಜಾವರ ಶ್ರೀಗಳ ಸದಸ್ಯತ್ವದ ತಂಡದಿಂದ ಆಸಕ್ತ ಪಂಡಿತರ ಸಂಪರ್ಕ ಮಾಡಲಾಯಿತು. ವೇದಗಳಲ್ಲಿ ಆಸಕ್ತಿ ಇರುವವರ ನಂಬರ್ ಸಂಗ್ರಹಿಸಿ ಮಾಹಿತಿ ಕಲೆ ಹಾಕಲಾಯಿತು. ವೇದ ಅಧ್ಯಯನದಲ್ಲಿ ಪಂಡಿತರು, ಅನುಭವಿಗಳ ಕುರಿತು ದಾಖಲೆ ಸಂಗ್ರಹಿಸಲಾಯಿತು. ಬಳಿಕ ಆಸಕ್ತರ ಹಿನ್ನೆಲೆ ವೇದ ಅಧ್ಯಯನಗಳ ಬಗ್ಗೆ ದಾಖಲೆ ಪರಿಶೀಲನೆ ಮಾಡಿ ನಂತರ ಇಬ್ಬರು ಪಂಡಿತರನ್ನು ಅಯೋಧ್ಯಯಲ್ಲಿ ನಡೆಯಲಿರುವ ಮಂಡಲ ಪೂಜೆಗೆ ಆಯ್ಕೆ ಮಾಡಲಾಯಿತು.

ಪ್ರಾಣಪ್ರತಿಷ್ಠೆ ಸಂಬಂಧಿತ ಹೋಮಗಳಲ್ಲಿ ಕನ್ನಡದ ಪುರೋಹಿತರು ಭಾಗಿ

ಜ.22ರಂದು ಬಾಲರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಹೋಮ ಹವನಗಳಲ್ಲಿ ಕರ್ನಾಟಕದ ಪುರೋಹಿತರು ಭಾಗಿಯಾಗುತ್ತಿದ್ದಾರೆ. ಹೀಗಾಗಿ ಅಯೋಧ್ಯೆಯಲ್ಲಿ ಕರ್ನಾಟಕದ 24 ಅರ್ಚಕರು ಬಂದು ಸೇರಿದ್ದಾರೆ. ಗಣ, ರಾಮತಾರಕ ಸೇರಿ ಹಲವು ಹೋಮ ಹವನಗಳಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಅರ್ಚಕರು ಇಂದು ಹನುಮಾನ್​ ಹೋಮ ನಡೆಸಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:48 am, Sat, 20 January 24