ವಾಲ್ಮೀಕಿ ಹಗರಣ; ಇಡಿ ಶೋಧ ಬಳಿಕ ಬೆಚ್ಚಿ ಬೀಳಿಸೋ ಸತ್ಯ ಬಾಯ್ಬಿಟ್ಟ ಪಂಪಣ್ಣ
ವಾಲ್ಮೀಕಿ ನಿಮಗದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಚುರುಕುಗೊಳಿಸಿದೆ. ದದ್ದಲ್ ಹಾಗೂ ಮಾಜಿ ಪಿಎ ಪಂಪಣ್ಣ ಮನೆಯಲ್ಲಿ ನಿನ್ನೆ(ಗುರುವಾರ) ತಡ ರಾತ್ರಿ ಇಡಿ ಟೀಂ ಶೋಧ ಕಾರ್ಯ ಮುಗಿಸಿದೆ. ಇದರ ಬೆನ್ನಲ್ಲೇ ಪಂಪಣ್ಣ ಬೆಚ್ಚಿ ಬೀಳಿಸುವ ಸತ್ಯ ಬಾಯ್ಬಿಟ್ಟಿದ್ದಾರೆ.
ರಾಯಚೂರು, ಜು.12: ಕಳೆದ ಎರಡು ದಿನಗಳಿಂದ ರಾಯಚೂರು(Raichur)ನಗರದಲ್ಲಿ ದದ್ದಲ್ ನಿವಾಸ ಹಾಗೂ ಮಾಜಿ ಪಿಎ ಪಂಪಣ್ಣ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಸುಧೀರ್ಘ ವಿಚಾರಣೆ ನಡೆಸಿದ್ದರು. ದಾಳಿ ವೇಳೆ ಪತ್ತೆಯಾದ ಸಾಕ್ಷಾಧಾರಗಳ ಆಧಾರದಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಇಡಿ(ED)ದಾಳಿ ಬರೀ ದದ್ದಲ್ ಹಾಗೂ ಮಾಜಿ ಪಿಎಗೆ ಸೀಮಿತವಾಗಿರ್ಲಿಲ್ಲ. ದದ್ದಲ್ ಪತ್ನಿ ಕುಟುಂಬಸ್ಥರಿಗೂ ಇಡಿ ಚಾರ್ಜ್ ಮಾಡಿತ್ತು. ನಿನ್ನೆ(ಗುರುವಾರ) ತಡ ರಾತ್ರಿ ಯಾರನ್ನೂ ವಶಕ್ಕೆ ಪಡೆಯದೇ ಇಡಿ ಅಧಿಕಾರಿಗಳು ದಾಳಿ ಮುಗಿಸಿದ್ದಾರೆ. ದದ್ದಲ್ ಮನೆಯಲ್ಲಿ ಹಾಗೂ ಪಂಪಣ್ಣ ಮನೆಯಲ್ಲಿ ಸಿಕ್ಕ ಸಾಕ್ಷಾಧಾರಗಳನ್ನ ಫೈಲಿನಲ್ಲಿರಿಸಿ ದಾಖಲೆಗಳ ಸಮೇತ ಇಡಿ ಟೀಂ ಕಾರ್ಯಾಚರಣೆ ಮುಗಿಸಿದೆ.
ಪಂಪಣ್ಣ ಹೆಸರು ಉಲ್ಲೇಖಿಸಿದ್ದೇ ವಾಲ್ಮೀಕಿ ನಿಗಮದ ಎಂಡಿ
ಇತ್ತ ದದ್ದಲ್ ಅಳಿಯ ಚನ್ನಬಸವ ಇಡಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದ್ರೆ, ಮಾಜಿ ಪಿಎ ಪಂಪಣ್ಣ ಇಡಿ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದೇ ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ರಿಂದ. ಪದ್ಮನಾಭ್ ಎಸ್ಐಟಿ ಕಸ್ಟಡಿಯಲ್ಲಿದ್ದಾಗ ಪಂಪಣ್ಣಗೆ 55 ಲಕ್ಷ ಹಣ ನೀಡಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದರಂತೆ. ಹೀಗಾಗಿ ಎಸ್ಐಟಿ ಪಂಪಣ್ಣಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದೆ. ಆದ್ರೆ, ನಾನು ಹಣ ಪಡದೇ ಇಲ್ಲ ಎಂದು ಪಂಪಣ್ಣ ಹೇಳುತ್ತಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ; ಇಡಿ ಬಂಧನದ ವಿರುದ್ಧ ಕೇಜ್ರಿವಾಲ್ ಅರ್ಜಿ ಕುರಿತು ಇಂದು ಸುಪ್ರೀಂ ಕೋರ್ಟ್ ತೀರ್ಪು
ಪಂಪಣ್ಣ ಹಣ ಪಡದೇ ಇಲ್ಲ ಎಂದರೆ, ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಪಂಪಣ್ಣ ಹೆಸರು ಉಲ್ಲೇಖಿಸಿದರೂ ಎನ್ನುವ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಪಂಪಣ್ಣ ಉತ್ತರಿಸಿ, ‘ಪದ್ಮನಾಭ್ ಯಾಕೆ ಹಾಗೇ ಅಂದರು ಅವರಿಗೆ ಗೊತ್ತು. ನಾನು ಬೆಂಗಳೂರಿಗೆ ಹೋದಾಗ ಅವರನ್ನ ಭೇಟಿಯಾಗಿ ಬರ್ತಿದ್ದೆ ಅಷ್ಟೆ ಅಂತಲೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳುತ್ತಿದ್ದಾರೆ. ಎರಡು ದಿನದ ಇಡಿ ದಾಳಿ ವೇಳೆ ಅಧಿಕಾರಿಗಳು ಒಟ್ಟು ಆಸ್ತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ದದ್ದಲ್ ಪರಿಚಯ, ವಾಲ್ಮೀಕಿ ನಿಗಮದ ಲಿಂಕ್, ನಿಗಮದ ಎಂಡಿ ಪದ್ಮನಾಭ್ ಹೀಗೆ ವಿವಿಧ ಆಯಾಮಗಳಲ್ಲಿ ಪ್ರಶ್ನೆಗಳನ್ನ ಕೇಳಿ ಹೇಳಿಕೆ ಪಡೆದುಕೊಂಡಿದ್ದಾರಂತೆ.
ಅದೇನೆ ಇರಲಿ ಪಂಪಣ್ಣ ನನಗೇನು ಗೊತ್ತಿಲ್ಲ ಅಂತಿದ್ದರೆ, ಅತ್ತ ದದ್ದಲ್ ಕೂಡ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಇಡಿ ಮಾತ್ರ ತಮಗೆ ಸಿಕ್ಕಿ ಸಾಕ್ಷಾಧಾರಗಳನ್ನ ಮುಂದಿಟ್ಟುಕೊಂಡು ತನಿಖೆ ಮುಂದುವರೆಸಿದ್ದು, ಇದರ ಉರುಳು ಯಾರನ್ನ ಸುತ್ತಿಕೊಳ್ಳತ್ತೋ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ