ಮತ್ತೆ ತಲೆ ಎತ್ತಿದ ಸಮಸ್ಯೆ; ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಗೃಹಿಣಿ ಸಾವು

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜುಕೂರು ಗ್ರಾಮದಲ್ಲಿ ಲಕ್ಷ್ಮೀ(28) ಎಂಬ ಗೃಹಿಣಿ ವಿಷ ಜಲದಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ವಿಪರೀತ ವಾಂತಿಯಿಂದ ಮೃತಪಟ್ಟಿದ್ದಾರೆ.

ಮತ್ತೆ ತಲೆ ಎತ್ತಿದ ಸಮಸ್ಯೆ; ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಗೃಹಿಣಿ ಸಾವು
ತುಂಗಭದ್ರಾ ನದಿ ನೀರು
TV9kannada Web Team

| Edited By: Ayesha Banu

Jul 04, 2022 | 9:19 AM

ರಾಯಚೂರು: ರಾಯಚೂರಿನಲ್ಲಿ ಮತ್ತೆ ಕಲುಷಿತ ನೀರಿನ(Contaminated Water) ಅವಾಂತರ ಹೆಚ್ಚಾಗಿದೆ. ಕಳೆದ ಬಾರಿ ಕಲುಷಿತ ನೀರು ಸೇರವಿಸಿ 7 ಮಂದಿ ಪ್ರಾಯ ಕಳೆದುಕೊಂಡಿದ್ದರು. ಆದ್ರೆ ಈಗ ಮತ್ತೆ ನಿನ್ನೆ ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಇದರ ನಡುವೆ ವಿಷ ಜಲ ಸೇವಿಸಿದ ಕಾರಣ ಗೃಹಿಣಿ ಪ್ರಾಣ(Woman Died) ಕಳೆದುಕೊಂಡಿದ್ದಾರೆ.

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜುಕೂರು ಗ್ರಾಮದಲ್ಲಿ ಲಕ್ಷ್ಮೀ(28) ಎಂಬ ಗೃಹಿಣಿ ವಿಷ ಜಲದಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ವಿಪರೀತ ವಾಂತಿಯಿಂದ ಮೃತಪಟ್ಟಿದ್ದಾರೆ. ವಿಪರೀತ ವಾಂತಿ ಭೇದಿ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಲಕ್ಷ್ಮೀಗೆ ಲೋ ಬೀಪಿ ಆಗಿದೆ. ಆಗ ಸ್ಥಳೀಯ ವೈದ್ಯರು ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಗೃಹಿಣಿ ಲಕ್ಷ್ಮೀ ಮೃತಪಟ್ಟಿದ್ದಾರೆ. ಇದನ್ನೂ ಓದಿ: Health Tips: ಹಾಲು ಮತ್ತು ಮಾಂಸವನ್ನು ಒಟ್ಟಿಗೆ ಸೇವಿಸಲೇ ಬೇಡಿ, ಸೇವಿಸಿದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ

ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಕ್ಯಾನಲ್ ಸ್ಥಿತಿ ಬಟಾಬಯಲು ಜುಕೂರು ಹಾಗೂ ವಲ್ಕಂದಿನ್ನಿ ಗ್ರಾಮಕ್ಕೆ ತುಂಗಭದ್ರಾ ನದಿ ನೀರೆ ಆಧಾರ. ತುಂಗಭದ್ರಾ ನದಿ ನೀರು ನೇರವಾಗಿ ಕಾಲುವೆಗೆ ಸಪ್ಲೈ ಆಗುತ್ತೆ. ಕಾಲುವೆಯಿಂದ ಗ್ರಾಮದ ಟ್ಯಾಂಕ್ ಗೆ ನೀರು ಡಂಪಿಂಗ್ ಆಗುತ್ತೆ. ಬಳಿಕ ಟ್ಯಾಂಕ್ ನಿಂದ ಪ್ರತಿ ಮನೆಗೆ ನೀರು ಸರಬರಾಜಾಗುತ್ತೆ. ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಕ್ಯಾನಲ್ ಸ್ಥಿತಿ ಬಟಾಬಯಲಾಗಿದೆ. ಕ್ಯಾನಲ್ ಗಬ್ಬೆದ್ದು ದುರ್ವಾಸನೆ ಹೊಡೆಯೊ ಸ್ಥಿತಿಯಲ್ಲಿದೆ. ಜನರು ಕ್ಯಾನಲ್ ಪಕ್ಕದಲ್ಲೇ ದನಕರುಗಳನ್ನ ತೊಳೆಯುತ್ತಾರೆ, ಅಲ್ಲೇ ಬಟ್ಟೆ-ಪಾತ್ರೆ ತೊಳೆಯುತ್ತಾರೆ. ಅಲ್ಲದೆ ಕೆಲವರು ಕ್ಯಾನಲ್ ಸಮೀಪವೇ ಬಹಿರ್ದೆಸೆಗೆ ಹೋಗ್ತಾರೆ. ಕ್ಯಾನಲ್ನಲ್ಲಿ ರಾಶಿಗಟ್ಟಲೇ ಕೊಳೆತ ಸ್ಥಿತಿಯಲ್ಲಿರೊ ಬಟ್ಟೆಗಳು ಸಿಗುತ್ತವೆ. ಇದೇ ಕೊಳಚೆ ನೀರನ್ನ ಮೋಟರ್ ಮೂಲಕ ಟ್ಯಾಂಕ್ಗೆ ಡಂಪಿಂಗ್ ಮಾಡಲಾಗುತ್ತೆ. ಬಳಿಕ ಕುಡಿಯಲು ಇದೇ ನೀರು ಬಳಕೆ ಮಾಡಲಾಗುತ್ತೆ. ಹೀಗಾಗಿ ಕಳೆದೊಂದು ವಾರದಿಂದ ಕಲುಷಿತ ನೀರಿನ ಸಮಸ್ಯೆ ಉಲ್ಬಣವಾಗಿದೆ.

ಸಮಸ್ಯೆ ತೀವ್ರತೆ ಪಡೆಯುತ್ತಿದ್ದಂತೆ ಆರೋಗ್ಯ ಇಲಾಖೆ‌ ಹೈಅಲರ್ಟ್ ಜುಕೂರು, ವಲ್ಕಂದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ಘಟನೆ ತೀವ್ರತೆ ಪಡೆಯುತ್ತಿದ್ದಂತೆ ಆರೋಗ್ಯ ಇಲಾಖೆ‌ ಹೈಅಲರ್ಟ್ ಆಗಿದೆ. ತುಂಗಭದ್ರಾ ನದಿ‌ ನೀರು ಕುಡಿಯದಂತೆ ಧ್ವನಿವರ್ಧಕಗಳಲ್ಲಿ ಅನೌನ್ಸ್ ಮಾಡಲಾಗುತ್ತಿದೆ. ನೀರು ಕಾಯಿಸಿ, ಆರಿಸಿ ಕುಡಿಯುವಂತೆ ಗ್ರಾ.ಪಂ. ಸಿಬ್ಬಂದಿ ಅನೌನ್ಸ್ ಮಾಡಿದ್ದಾರೆ. ನಿನ್ನೆ ವಲ್ಕಂದಿನ್ನಿ ಗ್ರಾಮಕ್ಕೆ ಭೇಟಿ ನೀಡಿದ್ದ ಡಿಹೆಚ್​ಒ ಸುರೇಂದ್ರ, ಆರೋಗ್ಯ ಇಲಾಖೆ ಸಿಬ್ಬಂದಿ 24/7 ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ. ವಲ್ಕಂದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 70 ಜನ ಅಸ್ವಸ್ಥಗೊಂಡಿದ್ದಾರೆ. ಜುಕೂರು ಗ್ರಾಮದಲ್ಲಿ ಒಟ್ಟು 49 ಜನರು ಅಸ್ವಸ್ಥಗೊಂಡಿದ್ದಾರೆ. ಒಟ್ಟು 2 ಗ್ರಾಮಗಳ 119 ಜನ ಅಸ್ವಸ್ಥ ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇತ್ತ ಎರಡೂ ಗ್ರಾಮಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು ಎಮರ್ಜೆನ್ಸಿ ಕೇಸ್​ಗಾಗಿ ಗ್ರಾಮದಲ್ಲಿ ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada