ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಗುಣಮಟ್ಟದ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು
ರಾಜ್ಯದ 36 ರೈಲ್ವೆ ನಿಲ್ದಾಣಗಳ 112 ಆಹಾರ ಸಂಸ್ಥೆಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ತಪಾಸಣೆ ನಡೆಸಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಆಪರೇಷನ್ ಫುಡ್ ರೇಡ್ ಮುಂದುವರಿದಿದೆ. ಲಕ್ಷಾಂತರ ಪ್ರಯಾಣಿಕರಿಗೆ ಶುದ್ಧ ಆಹಾರ ಒದಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದ್ದು, ಜನರ ಜಾಗೃತಿಗೂ ಇದು ಸಹಕಾರಿ ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 20: ರಾಜ್ಯದಲ್ಲಿ ಆಪರೇಷನ್ ಫುಡ್ ರೇಡ್ ಮುಂದುವರಿದಿದೆ. ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ಒಟ್ಟು 36 ರೈಲ್ವೆ ನಿಲ್ದಾಣಗಳಲ್ಲಿನ 112 ಆಹಾರ ಮಳಿಗೆಗಳ ಮೇಲೆ ತೀವ್ರ ತಪಾಸಣೆ ಮಾಡಿದೆ. ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ಯು.ಟಿ. ಖಾದರ್, ‘ಇಂತಹ ತಪಾಸಣೆಗಳಿಂದ ಕೂಡಲೇ ಪರಿಸ್ಥಿತಿ ಬದಲಾಗದಿದ್ದರೂ, ಇದು ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಮತ್ತು ಅವರನ್ನು ಎಜುಕೇಟ್ ಮಾಡಲು ಸಹಾಯ ಮಾಡುತ್ತದೆ. ರೈಲ್ವೆ ಕ್ಯಾಂಟೀನ್ಗಳು ಮತ್ತು ಪ್ಯಾಂಟ್ರಿಗಳಲ್ಲಿ ಶುಚಿತ್ವ ಕಾಪಾಡುವುದು ಅತ್ಯಂತ ಮುಖ್ಯ. ಯಾರಾದರೂ ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಅರಿವು ವ್ಯಾಪಾರಿಗಳಿಗೆ ಇರಬೇಕು. ಆಹಾರ ಮತ್ತು ಸುರಕ್ಷತಾ ಇಲಾಖೆಯು ಪ್ರಮುಖ ರೈಲ್ವೆ ನಿಲ್ದಾಣಗಳ ಪ್ಯಾಂಟ್ರಿ ಮತ್ತು ಅಡುಗೆಮನೆಗಳನ್ನು ಪರಿಶೀಲಿಸಿದೆ. ಈ ದಾಳಿ ಪ್ರಯಾಣಿಕರ ಆರೋಗ್ಯ ಸುರಕ್ಷತೆಗೆ ಪೂರಕವಾಗಿವೆ’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

