ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಸಹೋದರಿಯರ ರಕ್ಷಾ ಬಂಧನ

| Updated By: guruganesh bhat

Updated on: Aug 22, 2021 | 11:35 PM

Raksha Bandhan 2021: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಉಪ ವಲಯ‌ ಸಂಚಾಲಕರಾದ ಬಿ ಕೆ ಲೀಲಾ. ಇಂದು‌ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ರಕ್ಷಾ ಬಂಧನ ಹಬ್ಬದ ಅಂಗವಾಗಿ ರಾಖಿ ಕಟ್ಟಿ ಶುಭ ಕೋರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಸಹೋದರಿಯರ ರಕ್ಷಾ ಬಂಧನ
ಮುಖ್ಯಮಂತ್ರಿ ಕೈಗೂ ರಕ್ಷಾ ಬಂಧನ
Follow us on

ಬೆಂಗಳೂರು: ಇಂದು ಆಚರಿಸಲ್ಪಡುತ್ತಿರುವ ರಕ್ಷಾ ಬಂಧನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸಹೋದರಿಯರು ರಾಖಿ ಕಟ್ಟಿದ್ದಾರೆ. ಅಂದಹಾಗೆ ಮುಖ್ಯಮಂತ್ರಿಗಳಿಗೆ ರಾಖಿ ಕಟ್ಟಿದವರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಉಪ ವಲಯ‌ ಸಂಚಾಲಕರಾದ ಬಿ ಕೆ ಲೀಲಾ. ಇಂದು‌ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ರಕ್ಷಾ ಬಂಧನ ಹಬ್ಬದ ಅಂಗವಾಗಿ ರಾಖಿ ಕಟ್ಟಿ ಶುಭ ಕೋರಿದರು. ಮುಖ್ಯಮಂತ್ರಿಗಳ ಆರ್ ಟಿ ನಗರ ನಿವಾಸದಲ್ಲಿ ಲೀಲಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಖಿ ಕಟ್ಟಿದರು. ರಾಖಿ ಕಟ್ಟಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮ ಕುಮಾರಿಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಾಣೆಯಾಗಿದ್ದ ತಂಗಿಯನ್ನು ರಕ್ಷಾ ಬಂಧನದಂದೇ ಅಣ್ಣನಿಗೆ ಹುಡುಕಿಕೊಟ್ಟ ಪೊಲೀಸರು
ಬೆಂಗಳೂರು: ಕಾಣೆಯಾಗಿದ್ದ ತಂಗಿಯನ್ನು ಪತ್ತೆಮಾಡಿದ ಬೆಂಗಳೂರು ಪೊಲೀಸರು ರಕ್ಷಾ ಬಂಧನದಂದೇ ಅಣ್ಣನಿಗೆ ಒಪ್ಪಿಸಿದ ಮಾನವೀಯ ಘಟನೆಯೊಂದು ವರದಿಯಾಗಿದೆ. ಪೊಲೀಸ್ ಠಾಣೆಯಲ್ಲೇ ರಾಖಿ ಕಟ್ಟುವ ಮೂಲಕ ತನ್ನ ತಂಗಿಯನ್ನು ಅಣ್ಣ ಮನೆಗೆ ಬರಮಾಡಿಕೊಂಡಿದ್ದಾನೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸರೇ ರಕ್ಷಾ ಬಂಧನದಂದು ಕಾಣೆಯಾಗಿದ್ದ ತಂಗಿಯನ್ನು ಅಣ್ಣನಿಗೆ ಹುಡುಕಿಕೊಟ್ಟ ಮಹಾನುಭಾವರು.

ಆಗಸ್ಟ್ 6 ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಿಂದ 46 ವರ್ಷದ ರಿಮಿ ಅಡ್ಡಿ ಎಂಬ ಮಹಿಳೆ ನಾಪತ್ತೆಯಾಗಿದ್ದರು. ಹೀಗಾಗಿ ಸೋದರ ವಿವೇಕ ಅಡ್ಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನುಬಿದ್ದಿದ್ದ ಅಮೃತಹಳ್ಳಿ ಪೊಲೀಸರು ಇದುವರೆಗೆ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದರು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತಮುತ್ತ ಸೇರಿದಂತೆ , ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ‌ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿ ತನಿಖೆ ಮುಂದುವರೆಸಿದ್ದರು. ಇದೇ ಹೊತ್ತಿನಲ್ಲಿ ನಾಪತ್ತೆಯಾಗಿದ್ದ ರಿಮಿ ಅಡ್ಡಿ ಇಂದು ಮಾಗಡಿ ಬಳಿ ಪತ್ತೆಯಾಗಿದ್ದರು. ಇಂದೇ ರಕ್ಷಾ ಬಂದನವೂ ಇರುವುದನ್ನು ಅರಿತ ಪೊಲೀಸರು ಅಣ್ಣ ತಂಗಿಯರ ಸಂಬಂಧದ ಮಹತ್ವ ಅರಿತು ಸೋದರ ವಿವೇಕ್ ಅಡ್ಡಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲೇ ಕೇಕ್ ಕತ್ತರಿಸಿ ಅಣ್ಣನ ಕೈಲಿ ರಾಖಿ ಕಟ್ಟಿಸುವ ಮೂಲಕ ರಿಮಿ ಅಡ್ಡಿಯ ಅವರನ್ನು ಅವರ ಅಣ್ಣ ವಿವೇಕ್ ಅಡ್ಡಿ ಅವರನ್ನು ಒಗ್ಗೂಡಿಸಿದ್ದಾರೆ.

ಇದನ್ನೂ ಓದಿ:  

ಅಮೆರಿಕ ಕೆಂಡಾಮಂಡಲ: 2ನೇ ಮಹಾಯುದ್ಧದ ಐತಿಹಾಸಿಕ ಚಿತ್ರಕ್ಕೆ ತಾಲಿಬಾನ್ ಅಣಕ, ಬೈಡೆನ್ ರಾಜೀನಾಮೆಗೆ ಹೆಚ್ಚಾಯ್ತು ಒತ್ತಡ

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

(Raksha Bandhan 2021 Brahma Kumari Sisters tied Rakhi to CM Basavaraj Bommai)

Published On - 6:38 pm, Sun, 22 August 21