AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ. 22ರಂದೇ ಹೆರಿಗೆ ಕ್ರೇಜ್: ಬೆಂಗಳೂರಿನಲ್ಲಿ ರಾಮಲಲ್ಲಾ ಪ್ರತಿಷ್ಠಾನೆ ದಿನವೇ 60ಕ್ಕೂ ಹೆಚ್ಚು ಮಕ್ಕಳ ಜನನ

ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅದ್ಧೂರಿಯಾಗಿ ನೆರವೇರಿದೆ. ಅಸಂಖ್ಯ ರಾಮಭಕ್ತರ ಶತಮಾನಗಳ ಕನಸು ಈಡೇರಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಶುಭ ಗಳಿಗೆಯಲ್ಲಿ ತಮ್ಮ ಕಂದಮ್ಮಗಳನ್ನು ಹೆರಲು ನಿರ್ಧರಿಸಿದಂತಿದೆ. ಹೀಗಿರುವಾಗ ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ರಾಜಧಾನಿಯಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ.

ಜ. 22ರಂದೇ ಹೆರಿಗೆ ಕ್ರೇಜ್: ಬೆಂಗಳೂರಿನಲ್ಲಿ ರಾಮಲಲ್ಲಾ ಪ್ರತಿಷ್ಠಾನೆ ದಿನವೇ 60ಕ್ಕೂ ಹೆಚ್ಚು ಮಕ್ಕಳ ಜನನ
ರಾಮಲಲ್ಲಾ, ಪ್ರತಿನಿಧಿಕ ಚಿತ್ರ
Vinay Kashappanavar
| Edited By: |

Updated on:Jan 22, 2024 | 5:48 PM

Share

ಬೆಂಗಳೂರು, ಜನವರಿ 22: ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ (Ramlalla pran pratishtha) ಅದ್ಧೂರಿಯಾಗಿ ನೆರವೇರಿದೆ. ಅಸಂಖ್ಯ ರಾಮಭಕ್ತರ ಶತಮಾನಗಳ ಕನಸು ಈಡೇರಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಶುಭ ಗಳಿಗೆಯಲ್ಲಿ ತಮ್ಮ ಕಂದಮ್ಮಗಳನ್ನು ಹೆರಲು ನಿರ್ಧರಿಸಿದಂತಿದೆ. ಹೀಗಿರುವಾಗ ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ರಾಜಧಾನಿಯಲ್ಲಿ 60ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ. ಸಿಲಿಕಾನ್ ಸಿಟಿಯಲ್ಲಿ ಜ. 22 ಡೆಲಿವರಿ ಡಿಮ್ಯಾಂಡ್ ಕ್ರೇಜ್ ಶುರುವಾಗಿದೆ. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾನೆ ದಿನ ಕಂದಮ್ಮಗಳನ್ನು ಪಡೆಯಲು ಕೆಲ ಪೋಷಕರು ಆಸಕ್ತಿ ವಹಿಸಿದ್ದಾರೆ.

ಈ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಸಿಟಿ ಪೋಷಕರು ಆಸಕ್ತಿ ವಹಿಸಿದ್ದಾರೆ. ಹಾಗಾಗಿ ಇದುವರೆಗೂ ರಾಜ್ಯದಲ್ಲಿ 40ಕ್ಕೂ ಹೆಚ್ಚು ಶಿಶುಗಳು ಜನಿಸಿವೆ.

ಯಾವ ಆಸ್ಪತ್ರೆಯಲ್ಲಿ ಎಷ್ಟು ಶಿಶುಗಳ ಜನನ

  • ವಾಣಿವಿಲಾಸ್ ಆಸ್ಪತ್ರೆಯಲ್ಲಿ 28 ಕಂದಮ್ಮಗಳು ಜನಿಸಿದ್ದು, ಈ ಪೈಕಿ 10 ನಾರ್ಮಲ್, 1 ಸಿಸೇರಿಯನ್ ಮಾಡಲಾಗಿದೆ. ಗಂಡು 16, ಹೆಣ್ಣು 12 ​
  • ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ತನಕ 4 ಶಿಶುಗಳ ಜನನವಾಗಿದ್ದು, ಈ ಪೈಕಿ 2 ಸಹಜ, 2 ಸಿಸೇರಿಯೆನ್​
  • ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಕಂದಮ್ಮಗಳ ಜನನ, 5 ನಾರ್ಮಲ್, 1 ಸಿಸೇರಿಯನ್​
  • ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25 ಕ್ಕೂ ಅಧಿಕ ಮಕ್ಕಳ ಜನನವಾಗಿದೆ.
  • ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ್ದು, ಈ ಹಿನ್ನೆಲೆ ಡೆಲಿವರಿ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗದಗದ ಮಸೀದಿಯಲ್ಲಿ ಪೂಜೆ, ಹೋಮ

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದ ಸಮಯಕ್ಕೇ ಮಗು ಜನಿಸುವಂತಾಗಲಿ ಎಂದು ಪೋಷಕರು ನಿರ್ಧರಿಸಿರುವಂತಹ ಸಾಕಷ್ಟು ಉದಾಹರಣೆಗಳು ಕಂಡುಬಂದಿವೆ. ತಮ್ಮ ಹೆರಿಗೆ ದಿನಾಂಕವನ್ನು ಜನವರಿ 22 ರ ಮೊದಲು ಅಥವಾ ನಂತರ ಕೆಲವು ದಿನಗಳಲ್ಲಿ ಮಾಡುವಂತೆ ಸಹ ವೈದ್ಯರಿಗೆ ವಿನಂತಿ ಮಾಡಿಕೊಂಡಿದ್ದಾರೆ.

ವಿಶಿಷ್ಟ ಕಾರ್ಯಕ್ಕೆ ಸಾಕ್ಷಿಯಾದ ಸಿದ್ದೇಶ್ವರ ಸಂಸ್ಥೆಯ ಆಸ್ಪತ್ರೆ

ವಿಜಯಪುರದಲ್ಲೊಂದು ವಿಶಿಷ್ಟ ಕಾರ್ಯಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಆಸ್ಪತ್ರೆ ಸಾಕ್ಷಿಯಾಗಿದೆ. ಮೂರು ಗಂಡು ಮಕ್ಕಳಿಗೆ ರಾಮ ಎಂದು ನಾಮಕರಣ ಮಾಡಲಾಗಿದ್ದು, ಒಂದು ಹೆಣ್ಣು ಮಗುವಿಗೆ ಸೀತಾ ಎಂದು ಹೆಸರಿಡಲಾಗಿದೆ. ಶಾಸಕ ಯತ್ನಾಳ ಪುತ್ರ ರಾಮನಗೌಡ ಪಾಟೀಲ್, ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ. ಆಸ್ಪತ್ರೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:36 pm, Mon, 22 January 24

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್