ಸಿಎಂ ಸಿದ್ದರಾಮಯ್ಯ ಬಗ್ಗೆ ರಾಮಕೃಷ್ಣ ಹೆಗಡೆ ಅವತ್ತೆ ಎಚ್ಚರಿಕೆ ನೀಡಿದ್ದರು: ಹೆಚ್ಡಿ ದೇವೇಗೌಡ
ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿರುವ ಶಾಸಕ ಶ್ರೀನಿವಾಸ್ ಅಳಿಯ ಚೇತನ್ ಕೆಂಪರಾಜು ಮನೆಗೆ ಹೆಚ್ಡಿ ದೇವೇಗೌಡ ಭೇಟಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತ ದಿ.ಕೆಂಪರಾಜು ಪುತ್ರ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಸಿದ್ದರಾಮಯ್ಯ ಬಗ್ಗೆ ಹುಷಾರು ಅಂತಾ ರಾಮಕೃಷ್ಣ ಹೆಗಡೆ ಅವತ್ತೆ ಎಚ್ಚರಿಕೆ ನೀಡಿದ್ದರು ಎಂದಿದ್ದಾರೆ.
ಚಿಕ್ಕಮಗಳೂರು, ಮಾರ್ಚ್ 15: ಸಿದ್ದರಾಮಯ್ಯ ಬಗ್ಗೆ ಹುಷಾರು ಅಂತಾ ರಾಮಕೃಷ್ಣ ಹೆಗಡೆ ಅವತ್ತೆ ಹೇಳಿದ್ದರು. ಅವರ ಮಾತು ಕೇಳದೆ ಸಿದ್ದರಾಮಯ್ಯಗೆ ಅವಕಾಶ ನೀಡಿದೆ. ನನ್ನ 92ನೇ ವಯಸ್ಸಿನಲ್ಲೂ ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Deve Gowda) ಹೇಳಿದ್ದಾರೆ. ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ನೂ ಬದುಕಿದ್ದಾನೆ, ಅವರನ್ನೇ ಕೇಳಿ ಎಂದು ಹೇಳಿದ್ದಾರೆ. ತನ್ನದೇ ಸಮಾಜದವರನ್ನು ಸಿದ್ದರಾಮಯ್ಯ ಬೆಳೆಯಲು ಬಿಡಲಿಲ್ಲ. ದೇವೇಗೌಡರ ಆಪ್ತರೆಂಬ ಕಾರಣಕ್ಕೆ ಹಲವರನ್ನು ಮಂತ್ರಿ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಈ ದೇಶದ ಅತ್ಯಂತ ಎತ್ತರಕ್ಕೆ ಬೆಳೆದಂತಹ ರಾಜಕಾರಣಿ ಮೋದಿ
ಮೋದಿ ಅವರನ್ನು ಬಿಟ್ಟು ಯಾವುದೇ ಒಬ್ಬ ವ್ಯಕ್ತಿ ಅವರ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಈ ದೇಶದ ಅತ್ಯಂತ ಎತ್ತರಕ್ಕೆ ಬೆಳೆದಂತಹ ರಾಜಕಾರಣಿ ಮೋದಿ. ಕೆಲವು ಪತ್ರಿಕೆಗಳಲ್ಲಿ 18 ಇನ್ನೂ ಕೆಲವು ಪತ್ರಿಕೆಗಳಲ್ಲಿ 24 ಫೀಟ್ ಗೆಲ್ಲುತ್ತೆವೆ ಎಂದಿದ್ದಾರೆ. ಸುಮ್ಮನೆ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಜನ ಮೆಚ್ಚಬೇಕಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹಾಸನ ಕ್ಷೇತ್ರದ ಗೆಲುವಿಗೆ ನಿರ್ಣಾಯಕವಾಗಿರುವ ಕಡೂರಿನಲ್ಲಿ ದಳಪತಿ ದೇವೇಗೌಡ ರಣತಂತ್ರ
ಮೋದಿ ದೇಶದ ಸರ್ವೋಚ್ಚ ನಾಯಕ. ಅವರ ಸಮಾನವಾಗಿ ಯಾವ ನಾಯಕನು ದೇಶದಲ್ಲಿ ಇಲ್ಲ. INDIA ಕೂಟದಲ್ಲಿ ಮೋದಿ ಸಮಕ್ಕೆ ಯಾರು ಇಲ್ಲ. ಒಂದೊಂದು ಚಾನೆಲ್ನಲ್ಲಿ ಒಂದೊಂದು ಸಮೀಕ್ಷೆ ಬರುತ್ತಿದೆ. ಇದಕ್ಕೆಲ್ಲ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ. ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಪತ್ರಿಕೆಯಲ್ಲಿ ನೋಡಿದೆ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಹಿಂದೆಯೇ ಕುಮಾರಸ್ವಾಮಿ 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಕುಟುಂಬ ರಾಜಕಾರಣದ ಕರಿ ನೆರಳು: ಕಾರ್ಯಕರ್ತರ ಬಿಟ್ಟು ಕುಡಿಗಳಿಗೇ ಆದ್ಯತೆ ನೀಡುತ್ತಿರುವ ನಾಯಕರಿವರು
ಹಾಸನ ಲೋಕಸಭಾ ಕ್ಷೇತ್ರ ಗೆಲುವಿಗೆ ಹೆಚ್ಡಿ ದೇವೇಗೌಡ ರಾಜಕೀಯ ತಂತ್ರ ರೂಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತ ದಿ.ಕೆಂಪರಾಜು ಪುತ್ರ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿರುವ ಶಾಸಕ ಶ್ರೀನಿವಾಸ್ ಅಳಿಯ ಚೇತನ್ ಕೆಂಪರಾಜು ಮನೆಗೆ ಹೆಚ್ಡಿ ದೇವೇಗೌಡ ಭೇಟಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.