AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆಗೂ ಕುಟುಂಬ ರಾಜಕಾರಣದ ಕರಿ ನೆರಳು: ಕಾರ್ಯಕರ್ತರ ಬಿಟ್ಟು ಕುಡಿಗಳಿಗೇ ಆದ್ಯತೆ ನೀಡುತ್ತಿರುವ ನಾಯಕರಿವರು

ಕುಟುಂಬ ರಾಜಕಾರಣದ ಕರಿನೆರಳು ಈ ಬಾರಿಯ ಲೋಕಸಭೆ ಚುನಾವಣೆಯನ್ನೂ ಬಿಟ್ಟಿಲ್ಲ. ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಮೂರೂ ಪಕ್ಷಗಳು ಇದಕ್ಕೆ ಹೊರತಾಗಿಲ್ಲ. ಈ ಮಧ್ಯೆ, ಕಾಂಗ್ರೆಸ್ ಪಕ್ಷದಲ್ಲಿ ಯಾವ ನಾಯಕರ ಕುಟುಂಬದವರೆಲ್ಲ ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ? ಯಾವೆಲ್ಲ ನಾಯಕರು ಕುಟುಂಬದವರಿಗೆ ಟಿಕೆಟ್ ಕೊಡಲು ಯತ್ನಿಸುತ್ತಿದ್ದಾರೆ ಎಂಬ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆಗೂ ಕುಟುಂಬ ರಾಜಕಾರಣದ ಕರಿ ನೆರಳು: ಕಾರ್ಯಕರ್ತರ ಬಿಟ್ಟು ಕುಡಿಗಳಿಗೇ ಆದ್ಯತೆ ನೀಡುತ್ತಿರುವ ನಾಯಕರಿವರು
ಸಾಂದರ್ಭಿಕ ಚಿತ್ರ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on: Mar 15, 2024 | 11:52 AM

Share

ಬೆಂಗಳೂರು, ಮಾರ್ಚ್​ 15: ಲೋಕಸಭಾ ಚುನಾವಣೆಯಲ್ಲೂ (Lok Sabha Elections) ಕುಟುಂಬ ರಾಜಕಾರಣದ (Dynasty politics) ಕರಿ ನೆರಳು ಕಾಣಿಸಲಾರಂಭಿಸಿದ್ದು, ಕಾರ್ಯಕರ್ತರನ್ನು ಬಿಟ್ಟು ರಾಜಕಾರಣಿಗಳ ಕುಡಿಗಳಿಗೇ ಮಣೆ ಹಾಕಲು ಯತ್ನಿಸಲಾಗುತ್ತಿದೆ. ಕರ್ನಾಟಕದಲ್ಲಿ (Karnataka) ಅನೇಕ ನಾಯಕರು ಕುಟುಂಬಸ್ಥರನ್ನೇ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​​ಗಳಲ್ಲಿ ಕುಟುಂಬದವರಿಗೇ ಮಣೆ ಹಾಕಲಾಗುತ್ತಿದೆ ಎಂಬ ಆರೋಪವಿದೆ. ಈ ಮಧ್ಯೆ, ಕುಟುಂಬದವರನ್ನೇ ಕಣಕ್ಕಿಳಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ಮತ್ತು ಅವರ ಕುಟುಂಬದ ಟಿಕೆಟ್ ಆಕಾಂಕ್ಷಿಗಳ ವಿವರ ಇಲ್ಲಿದೆ.

ರಾಜ್ಯದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರಾಜಕಾರಣಿಗಳ ಮಕ್ಕಳು, ಮರಿಗಳು ಲೋಕಸಭೆ ಚುನಾವಣೆ ಸ್ಪರ್ಧೆಗೆ ಆಸಕ್ತಿ ಹೊಂದಿದ್ದಾರೆ.

ಕುಟುಂಬ ರಾಜಕಾರಣ: ಟಿಕೆಟ್ ಆಕಾಂಕ್ಷಿಗಳ ವಿವರ

  • ಸಾಗರ್ ಖಂಡ್ರೆ – ಸಚಿವ ಈಶ್ವರ್ ಖಂಡ್ರೆ ಪುತ್ರ
  • ಮೃಣಾಲ್ ಹೆಬ್ಬಾಳ್ಕರ್ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ
  • ಪ್ರಯಾಂಕಾ ಜಾರಕಿಹೊಳಿ – ಸಚಿವ ಸತೀಶ್ ಜಾರಕಿಹೊಳಿ ಪುತ್ರಿ
  • ಸುನಿಲ್ ಬೋಸ್ – ಸಚಿವ ಎಚ್​ಸಿ ಮಹದೇವಪ್ಪ ಪುತ್ರ
  • ವೀಣಾ ಕಾಶಪ್ಪನವರ್ – ಶಾಸಕ ವಿಜಯಾನಂದ ಪತ್ನಿ
  • ಸೌಮ್ಯಾ ರೆಡ್ಡಿ – ಸಚಿವ ರಾಮಲಿಂಗ ರೆಡ್ಡಿ ಪುತ್ರಿ
  • ವಿನಯ್ ತಿಮ್ಮಾಪುರ – ಸಚಿವ ಆರ್​​ಬಿ ತಿಮ್ಮಾಪುರ ಪುತ್ರ
  • ಡಾ. ಯತೀಂದ್ರ – ಸಿದ್ದರಾಮಯ್ಯ ಪುತ್ರ
  • ರಾಧಾಕೃಷ್ಣ – ಮಲ್ಲಿಕಾರ್ಜುನ ಖರ್ಗೆ ಅಳಿಯ
  • ರಾಜಶೇಖರ್ ಹಿಟ್ನಾಳ್ – ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ
  • ಶಿವಲೀಲಾ ಕುಲಕರ್ಣಿ – ಶಾಸಕ ವಿನಯ್ ಕುಲಕರ್ಣಿ ಪತ್ನಿ
  • ಗೀತಾ ಶಿವರಾಜ್ ಕುಮಾರ್ – ಸಚಿವ ಮಧು ಬಂಗಾರಪ್ಪ ಸಹೋದರಿ
  • ಸಂಯುಕ್ತಾ ಪಾಟೀಲ್ – ಸಚಿವ ಶಿವಾನಂದ ಪಾಟೀಲ್ ಪುತ್ರಿ
  • ರಜತ್ ಉಳ್ಳಾಗಡ್ಡಿ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧಿ
  • ಪ್ರಭಾ ಮಲ್ಲಿಕಾರ್ಜುನ – ಸಚಿವ ಎಸ್​​ಎಸ್ ಮಲ್ಲಿಕಾರ್ಜುನ ಪತ್ನಿ
  • ನರಸಿಂಹರಾಜು – ಸಚಿವ ಕೆಎಚ್ ಮುನಿಯಪ್ಪ ಪುತ್ರ

ಇದನ್ನೂ ಓದಿ: ಡಾ ಮಂಜುನಾಥ್​ ರಾಜಕೀಯ ಪ್ರವೇಶ ಹಿಂದಿನ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಇಷ್ಟು ಮಂದಿ ಕೂಡ ಲೋಕಸಭೆ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಗೀತಾ ಶಿವರಾಜ್ ಕುಮಾರ್​ಗೆ ಈಗಾಗಲೇ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ. ಉಳಿದಂತೆ ಇತರ ನಾಯಕರು ಸಹ ಸಂಬಂಧಿಕರು, ಮಕ್ಕಳಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ನೀರೆರೆಯಲು ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ರೀತಿಯಲ್ಲಿಯೂ ಹಿಂದೇಟು ಹಾಕುತ್ತಿಲ್ಲ ಎಂಬ ಆರೋಪ ಬಲವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!