ಕರ್ನಾಟಕದ ಈ ಮಠವೊಂದಕ್ಕೆ 3 ಸಾವಿರ ಎಕರೆ ಆಸ್ತಿ ದಾನ ಮಾಡಿದ ಉದ್ಯಮಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2024 | 7:31 PM

ಎಷ್ಟೇ ಹಣ, ಆಸ್ತಿ ಇದ್ದರೂ ಸಾಲದಂತಹ ದಿನಮಾನದಲ್ಲಿ ಇದ್ದೇವೆ. ಆದರೆ, ಆಶ್ಚರ್ಯ ಎಂಬಂತೆ ಗಣಿ ಉದ್ಯಮ ನಡೆಸುತ್ತಿರುವ ರಾಜಸ್ಥಾನ ಮೂಲದ ಪಿ.ಬಿ ಓಸ್ವಾಲ್ ಜೈನ್ ಎಂಬುವವರು, ಕರ್ನಾಟಕದ ಮಠವೊಂದಕ್ಕೆ ಬರೊಬ್ಬರಿ 3 ಸಾವಿರ ಎಕರೆ ಆಸ್ತಿಯನ್ನು ಬರೆದು, ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಕರ್ನಾಟಕದ ಈ ಮಠವೊಂದಕ್ಕೆ 3 ಸಾವಿರ ಎಕರೆ ಆಸ್ತಿ ದಾನ ಮಾಡಿದ ಉದ್ಯಮಿ
ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಆಸ್ತಿ ದಾನ ಮಾಡಿದ ಉದ್ಯಮಿ ಪಿ.ಬಿ ಓಸ್ವಾಲ್ ಜೈನ್
Follow us on

ರಾಮನಗರ, ಅ.08: ಎಷ್ಟೇ ಹಣ, ಆಸ್ತಿ ಇದ್ದರೂ ಸಾಲದಂತಹ ದಿನಮಾನದಲ್ಲಿ ಇದ್ದೇವೆ. ಆದರೆ, ಆಶ್ಚರ್ಯ ಎಂಬಂತೆ ಗಣಿ ಉದ್ಯಮ ನಡೆಸುತ್ತಿರುವ ರಾಜಸ್ಥಾನ ಮೂಲದ ಪಿ.ಬಿ ಓಸ್ವಾಲ್ ಜೈನ್ ಎಂಬುವವರು, ತಮ್ಮ 78ನೇ ವಯಸ್ಸಿನಲ್ಲಿ 3 ಸಾವಿರ ಎಕರೆ ಆಸ್ತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ‌ ಪಾಲನಹಳ್ಳಿ ಮಠ(Palanahalli Mutt)ಕ್ಕೆ ದಾನ ಮಾಡಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಹೌದು, ಉದ್ಯಮಿ ಓಸ್ವಾಲ್ ಅವರು ವ್ಯಾಪಾರ ವಹಿವಾಟಿನಿಂದ ಸಂಪಾದಿಸಿದ ಆಸ್ತಿ ಸಂಪತ್ತೆಲ್ಲವನ್ನೂ ದಾನದ ರೂಪದಲ್ಲಿ ಮಠಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಇದೀಗ ಆಸ್ತಿಯ ದಾಖಲೆಗಳನ್ನ ಮಠಕ್ಕೆ ‌ಒಪ್ಪಿಸಿದ ಅವರು, ತಮ್ಮ ಸ್ವಯಾರ್ಜಿತ ಆಸ್ತಿ ಮಾತ್ರ ಇಬ್ಬರು ಮಕ್ಕಳಿಗೆ ಕೊಟ್ಟಿದ್ದಾರೆ.

ಇದನ್ನೂ ಓದಿ:ವಿಶ್ವದಲ್ಲೇ ಅತಿಹೆಚ್ಚು ಆಸ್ತಿಹೆಚ್ಚಳ ಕಂಡ ಗೌತಮ್ ಅದಾನಿ ಈಗ ಅಂಬಾನಿಗಿಂತಲೂ ಶ್ರೀಮಂತ; ಇಲ್ಲಿದೆ ಪಟ್ಟಿ

ಪಾಲನಹಳ್ಳಿ ಮಠಕ್ಕೆ ದಾನ ಮಾಡಲು ಕಾರಣವೇನು?

ಇನ್ನು ರಾಜಸ್ಥಾನ ಮೂಲದ ಉದ್ಯಮಿ ಕರ್ನಾಟಕದ ಮಠವೊಂದಕ್ಕೆ ಆಸ್ತಿ ಬರೆಯಲು ಕಾರಣ ನೋಡುವುದಾರೆ, ‘ ಉದ್ಯಮಿ ಓಸ್ವಾಲ್ ಅವರು ಕಳೆದ 27 ವರ್ಷದಿಂದ ಪಾಲನಹಳ್ಳಿ ಮಠದ ಭಕ್ತರು. ಕಂಪನಿ ಪ್ರಾರಂಭದ ದಿನದಿಂದಲೂ ಮಠದ ಶ್ರೀಗಳ ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯುತ್ತಿದ್ದಾರೆ. ಅದರಂತೆ ಮಠದ ಶ್ರೀಗಳ ಮಾರ್ಗದರ್ಶನದಿಂದ ಈ ಯಶಸ್ಸು ಸಿಕ್ಕಿದೆ. ಹಾಗಾಗಿ ಮೋಕ್ಷ ಸಾಧನೆಗಾಗಿಯೇ ಮಠಕ್ಕೆ ಆಸ್ತಿ ಬರೆದುಕೊಟ್ಟಿರುವುದಾಗಿ ಉದ್ಯಮಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ