ಡಿಸಿಎಂ ಕಾರ್ಯಕ್ರಮದಲ್ಲಿ ಕಳ್ಳನ ಕೈಚಳಕ; ಶಾಸಕರ ಆಪ್ತ ಸಹಾಯಕನ ಜೇಬಿಗೆ ಕತ್ತರಿ
ಮಾಗಡಿ(Magadi)ತಾಲೂಕಿನ ಕುದೂರಿನಲ್ಲಿ ಏರ್ಪಡಿಸಲಾಗಿದ್ದ ಡಿಸಿಎಂ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಆಪ್ತ ಸಹಾಯಕನ ಜೇಬಿನಿಂದ ಬರೊಬ್ಬರಿ 50 ಸಾವಿರ ಹಣವನ್ನು ಕಳ್ಳತನ (Theft)ಮಾಡಲಾಗಿದೆ.
ರಾಮನಗರ,ಅ.06: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಕಾರ್ಯಕ್ರಮದಲ್ಲಿ ಕಳ್ಳ ಕೈಚಳಕ ತೋರಿಸಿದ ಘಟನೆ ಮಾಗಡಿ(Magadi)ತಾಲೂಕಿನ ಕುದೂರಿನಲ್ಲಿ ನಡೆದಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಆಪ್ತ ಸಹಾಯಕನ ಜೇಬಿನಿಂದ ಬರೊಬ್ಬರಿ 50 ಸಾವಿರ ಹಣವನ್ನು ಕಳ್ಳತನ (Theft)ಮಾಡಲಾಗಿದೆ. ಇದೀಗ ಸುತ್ತಮುತ್ತಲಿನ ಸ್ಥಳದಲ್ಲಿ ಕಳ್ಳನ ಪತ್ತೆಗಾಗಿ ಕುದೂರು ಪೊಲೀಸರು ಬಲೆಬೀಸಿದ್ದಾರೆ.
ಇನ್ನು ಇದೇ ಅಕ್ಟೋಬರ್ 01 ರಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಅಸಮಧಾನ ವ್ಯಕ್ತಪಡಿಸಿದ್ದ ಜೆಡಿಎಸ್ ಶಾಸಕರನ್ನು ಕರೆಯಿಸಿ ರಾಮನಗರ ಬಿಡದಿ ತೋಟದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಕಾರ್ಯಕರ್ತನ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಿರುವಂತಹ ಘಟನೆ ನಡೆದಿತ್ತು. ಹೌದು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾತನಾಡಿಸುವ ವೇಳೆ ಕುಂದಾಪುದ ಜೆಡಿಎಸ್ ಕಾರ್ಯಕರ್ತನ ಜೇಬಿಗೆ ಕೈ ಹಾಕಿ ಬರೊಬ್ಬರಿ 40 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಕಾರ್ಯಕರ್ತರು, ಕಳ್ಳನನ್ನ ಹಿಡಿದಿದ್ದರು. ಕೂಡಲೇ ಕುಮಾರಸ್ವಾಮಿ ಗನ್ ಮ್ಯಾನ್ಗಳಿಂದ ಖದೀಮನಿಗೆ ಗೂಸಾ ಕೊಡಲಾಗಿತ್ತು. ಇದೀಗ ಇಂತಹ ಘಟನೆ ನಡೆದಿದೆ.
ಇದನ್ನೂ ಓದಿ:Burglary: ಬಿಜೆಪಿ ಮುಖಂಡನ ಮನೆ ಬೀಗ ಒಡೆದು ಕಳ್ಳತನ, ಕಳ್ಳರ ಖತರ್ನಾಕ್ ಐಡಿಯಾ ಕಂಡು ಪೊಲೀಸರಿಗೇ ಶಾಕ್
ನಗರದ ಪ್ರದೇಶದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ, ಜನರಲ್ಲಿ ಆತಂಕ
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಸಿದ್ದಿಕೇರಿ ಮರೆಮ್ಮ ದೇವಸ್ಥಾನ ಸಮೀಪದ ಬೆಟ್ಟದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾದ ಘಟನೆ ಬೆಳಕಿಗೆ ಬಂದಿದೆ. ಹೌದು, ಜೋಡಿ ಚಿರತೆಗಳ ದೃಶ್ಯವನ್ನು ಸ್ಥಳಿಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಚಿರತೆ ಕಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಕೂಡಲೇ ಜೋಡಿ ಚಿರತೆಗಳ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಿದ್ದಿಕೇರಿ ಬೆಟ್ಟವು ದಿನನಿತ್ಯ ಜನ ಹಾಗೂ ಜಾನುವಾರುಗಳ ಸಂಚಾರ ಹೊಂದಿದೆ. ಈ ಹಿನ್ನಲೆ ಚಿರತೆಗಳ ಸೆರೆಗೆ ಅರಣ್ಯ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 6 October 23