ಡಿವೈಡರ್ಗೆ ಗುದ್ದಿ ಗಾಳಿಯಲ್ಲಿ 3 ಬಾರಿ ಪಲ್ಟಿ ಹೊಡೆದ ಕಾರು: ಚಾಲಕನ ಪ್ರಾಣ ಉಳಿಸಿದ ಸೀಟ್ ಬೆಲ್ಟ್
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರು ಡಿವೈಡರ್ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದಿದೆ. ಕಾರು ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣ ಉಳಿದಿದೆ. ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದೆ. ಇದರಿಂದ ಚಿಕ್ಕ ಗಾಯವಿಲ್ಲದೆ ಯವಕ ಬಚಾವ್ ಆಗಿದ್ದಾನೆ.
ರಾಮನಗರ, ಡಿಸೆಂಬರ್ 11: ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ (Seat Belt) ಧರಿಸಿ ಎಂದು ಸಂಚಾರಿ ಪೊಲೀಸರು (Traffic Police) ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಕೂಡ ಸೀಟ್ ಬೆಲ್ಟ್ ಧರಿಸದೆ ಅನೇಕರು ವಾಹನ ಚಲಾಯಿಸುತ್ತಿದ್ದು, ಇದರಿಂದ ಅಪಘಾತದ ಸಂದರ್ಭದಲ್ಲಿ ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ. ಈ ಪ್ರಕರಣದಲ್ಲಿ ಯುವಕ ಸಂಚಾರಿ ನಿಯಮ ಪಾಲಿಸಿದ್ದರಿಂದ ಪ್ರಾಣ ಉಳಿದಿದೆ. ಹೌದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru-Mysore Highway) ಕಾರು ಡಿವೈಡರ್ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದಿದೆ. ಕಾರು ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣ ಉಳಿದಿದೆ. ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದೆ.
ಇದರಿಂದ ಚಿಕ್ಕ ಗಾಯವಿಲ್ಲದೆ ಯವಕ ಬಚಾವ್ ಆಗಿದ್ದಾನೆ. ಕಾರಿನ ಅವಸ್ಥೆ ನೋಡಿದರೇ ಚಾಲಕ ಬದುಕಿದ್ದೇ ಪವಾಡ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಓರ್ವ ಯುವಕ ಕಾರಿನಲ್ಲಿ ಹೊರಟಿದ್ದನು. ದಾರಿ ಮಧ್ಯೆ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ನಿಯ ಡಿವೈಡರ್ಗೆ ಗುದ್ದಿದೆ. ಹೆದ್ದಾರಿ ಡಿವೈಡರ್ ಕೂಡ ಪೀಸ್ ಪೀಸ್ ಆಗಿದ್ದು, ಸೂಚನಾ ಫಲಕ ಸರ್ವೀಸ್ ರಸ್ತೆಗೆ ಬಿದ್ದಿದೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
KSRTC ಬಸ್ಗೆ ಬೈಕ್ ಡಿಕ್ಕಿ; ಹೆಲ್ಮೆಟ್ ಹಾಕಿದ್ದರಿಂದ ಬೈಕ್ ಸವಾರ ಬಚಾವ್
ತುಮಕೂರು: ಸರ್ಕಾರಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಹೆಲ್ಮೆಟ್ ಹಾಕಿದ್ದರಿಂದ ಬೈಕ್ ಸವಾರ ಬಚಾವ್ ಆಗಿದ್ದಾನೆ. ಯುವಕರ ತಂಡ ಬೈಕ್ಗಳಲ್ಲಿ ಲಾಂಗ್ ಡ್ರೈವ್ ಹೊರಟಿತ್ತು. ಈ ವೇಳೆ ಒಂದು ಬೈಕ್ ಬಸ್ಗೆ ಡಿಕ್ಕಿ ಹೊಡೆದಿದೆ. ಬಸ್ಗೆ ಬೈಕ್ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಉತ್ತರಕನ್ನಡ: ಕೆಎಸ್ಆರ್ಸಿಟಿ ಬಸ್-ಕಾರು ಮಧ್ಯೆ ಭೀಕರ ಅಪಘಾತ, ಐವರು ದುರ್ಮರಣ
ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ
ಆನೇಕಲ್: ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿಫಾರಂ ಗೇಟ್ ಬಳಿ ನಡೆದಿದೆ. ಪುಟ್ಟೇನಹಳ್ಳಿ ನಿವಾಸಿ ಸತ್ಯೇಂದ್ರ ಸಿಂಗ್ ಮೃತ ದುರ್ದೈವಿ. ಸಿಮೆಂಟ್ ಮಿಕ್ಸರ್ ಲಾರಿ ವೀವರ್ಸ್ ಕಾಲೋನಿಯಿಂದ ಕೋಳಿ ಫಾರಂ ಗೇಟ್ ಕಡೆಗೆ ಬರುತ್ತಿತ್ತು. ಕೋಳಿ ಫಾರಂ ಗೇಟ್ ನಿಂದ ವೀವರ್ಸ್ ಕಾಲೋನಿ ಕಡೆಗೆ ಬೈಕ್ ಸವಾರ ಹೊರಟಿದ್ದನು. ಅತಿ ವೇಗವಾಗಿ ಬಂದ ಕಾರಣ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕ್ ಸವಾರನಿಗೆ ಗುದ್ದಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಳಿಕ ಲಾರಿ ಅಂಗಡಿಗಳ ಮೇಲೆ ಉರುಳಿ ಬಿದ್ದಿದೆ. ಅಂಗಡಿಗಳಲ್ಲಿನ ವಸ್ತುಗಳು ಧ್ವಂಸಗೊಂಡಿವೆ. ಕುಮಾರಸ್ವಾಮಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ