AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eagleton Resort: ವಿಲ್ಲಾದಲ್ಲಿ ವಾಯುಪಡೆ ನಿವೃತ್ತ ಪೈಲಟ್​ ದಂಪತಿ ಹತ್ಯೆ ಪ್ರಕರಣ; ಬಿಹಾರದ ಕೆಲಸಗಾರನ ಅರೆಸ್ಟ್

ತಮಿಳುನಾಡು ಮೂಲದ ರಘುರಾಜನ್, ಏರ್ಪೋರ್ಸ್ನಲ್ಲಿ ಪೈಲಟ್ ಆಗಿ ಕೆಲಸ ಮಾಡ್ತಿದ್ರು. ನಿವೃತ್ತಿ ನಂತರ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಿಲ್ಲಾ ಖರೀದಿಸಿ, ಐದು ವರ್ಷದಿಂದ ವಾಸವಿದ್ರು. ಆದ್ರೆ, ಸೋಮವಾರ ರಾತ್ರಿ ಸುತ್ತಿಗೆಯಿಂದ ದಂಪತಿಯನ್ನ ಹೊಡೆದು ಆರೋಪಿ ಜೋಗಿಂದರ್ ಕೊಲೆ ಮಾಡಿದ್ದಾನೆ.

Eagleton Resort: ವಿಲ್ಲಾದಲ್ಲಿ ವಾಯುಪಡೆ ನಿವೃತ್ತ ಪೈಲಟ್​ ದಂಪತಿ ಹತ್ಯೆ ಪ್ರಕರಣ; ಬಿಹಾರದ ಕೆಲಸಗಾರನ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Feb 09, 2022 | 11:49 AM

ರಾಮನಗರ: ಈಗಲ್ಟನ್ ರೆಸಾರ್ಟ್‌ನ ವಿಲ್ಲಾದಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಆರೋಪಿ ಜೋಗಿಂದರ್ ಸಿಂಗ್ ಎಂಬಾತನನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ 6 ತಿಂಗಳಿಂದ ವಿಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದ ಜೋಗಿಂದರ್ ಸಿಂಗ್ ಸುತ್ತಿಗೆಯಿಂದ ಹೊಡೆದು ವಾಯುಸೇನೆಯ ನಿವೃತ್ತ ಪೈಲಟ್ ರಘುರಾಜನ್, ಪತ್ನಿ ಆಶಾ ಹತ್ಯೆಗೈದಿದ್ದ. ಬಳಿಕ ರಘುರಾಜನ್ ಅಕೌಂಟ್‌ನಿಂದ ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿ ಜೋಗಿಂದರ್ನನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಘಟನೆ ಮಾಹಿತಿ ತಮಿಳುನಾಡು ಮೂಲದ ರಘುರಾಜನ್, ಏರ್ಪೋರ್ಸ್ನಲ್ಲಿ ಪೈಲಟ್ ಆಗಿ ಕೆಲಸ ಮಾಡ್ತಿದ್ರು. ನಿವೃತ್ತಿ ನಂತರ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಿಲ್ಲಾ ಖರೀದಿಸಿ, ಐದು ವರ್ಷದಿಂದ ವಾಸವಿದ್ರು. ಆದ್ರೆ, ಸೋಮವಾರ ರಾತ್ರಿ ಸುತ್ತಿಗೆಯಿಂದ ದಂಪತಿಯನ್ನ ಹೊಡೆದು ಆರೋಪಿ ಜೋಗಿಂದರ್ ಕೊಲೆ ಮಾಡಿದ್ದಾನೆ. ವೃದ್ಧ ದಂಪತಿಗೆ ಇಬ್ಬರು ಮಕ್ಕಳಿದ್ದು, ದೆಹಲಿಯಲ್ಲಿ ಕೆಲಸ ಮಾಡ್ತಿದ್ದಾರೆ. ಇನ್ನು, ಸೋಮವಾರ ತಡರಾತ್ರಿ ರಘುರಾಜನ್ಗೆ ಪುತ್ರ ಕರೆ ಮಾಡಿದ್ದು, ಫೋನ್ ರಿಸೀವ್ ಮಾಡಿರಲಿಲ್ಲ. ಬಳಿಕ, ಜೋಗಿಂದರ್ಗೆ ಕಾಲ್ ಮಾಡಿದ್ದು ಆತ, ಬೆಂಗಳೂರಿಗೆ ಹೋಗಿದ್ದಾರೆ ಅಂದಿದ್ನಂತೆ ಇದ್ರಿಂದ ಸಂಶಯಗೊಂಡ ಅವರು, ನಿನ್ನೆ ಮಧ್ಯಾಹ್ನ ವಿಲ್ಲಾಗೆ ಹೋಗಿ ಚೆಕ್ ಮಾಡುವಂತೆ ರೆಸಾರ್ಟ್ ಸೆಕ್ಯೂರಿಟಿಗೆ ಹೇಳಿದ್ದಾರೆ. ಸೆಕ್ಯೂರಿಟಿ ವಿಲ್ಲಾ ಒಳಗೆ ಹೋಗಿ ನೋಡಿದಾಗ, ಮೊದಲ ಮಹಡಿಯಲ್ಲಿ ಪತಿ, ಕೆಳ ಮಹಡಿಯಲ್ಲಿ ಪತ್ನಿ ಕೊಲೆಯಾಗಿ ಬಿದಿದ್ರು. ಅದೇ ಹೊತ್ತಿಗೆ ಜೋಗಿಂದರ್, ಆತನ ಅಣ್ಣನ ಜತೆ ವಿಲ್ಲಾದ ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದ. ಸದ್ಯ ಈಗ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ಮತ್ತೋರ್ವ ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.

ಇದನ್ನೂ ಓದಿ: ದೇಗುಲದಲ್ಲಿ ಬ್ರಾಹ್ಮಣರಿಗೆ ಪಾದಪೂಜೆ ಕೈಬಿಡಿ: ಪುರಾತನ ಆಚರಣೆಗಳು ಕೇರಳಕ್ಕೆ ಅವಮಾನಕರ -ದೇವಸ್ವಂ ಸಚಿವ ಆದೇಶ

ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ