Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಬೈ ಎಲೆಕ್ಷನ್​ ಅಖಾಡಕ್ಕೆ ಡಿಕೆಶಿ: ಸ್ವಾಗತ ಮಾಡುತ್ತಲೇ ತಿವಿದ ಸಿಪಿ ಯೋಗೇಶ್ವರ್

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಕಾಂಗ್ರೆಸ್​​ನಿಂದ ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿಯಲು ಮುಂದಾಗಿದೆ. ಇನ್ನು ಈ ಬಗ್ಗೆ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಡಿಕೆಶಿಗೆ ಸ್ವಾಗತಿಸುತ್ತಲೇ ತಿವಿದಿದ್ದಾರೆ.

ಚನ್ನಪಟ್ಟಣ ಬೈ ಎಲೆಕ್ಷನ್​ ಅಖಾಡಕ್ಕೆ ಡಿಕೆಶಿ: ಸ್ವಾಗತ ಮಾಡುತ್ತಲೇ ತಿವಿದ ಸಿಪಿ ಯೋಗೇಶ್ವರ್
ಡಿಕೆ ಶಿವಕುಮಾರ್, ಸಿಪಿ ಯೋಗೇಶ್ವರ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ರಮೇಶ್ ಬಿ. ಜವಳಗೇರಾ

Updated on:Jun 20, 2024 | 6:05 PM

ರಾಮನಗರ, (ಜೂನ್ 20): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ (ಜೂನ್ 19) ಇಡೀ ದಿನ ಚನ್ನಪಟ್ಟಣ ಕ್ಷೇತ್ರದಲ್ಲಿ ಓಡಾಡಿದ್ದು, ಉಪಚುನಾವಣೆಯಲ್ಲಿ ಸ್ಪರ್ಧಸುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು (ಜೂನ್ 20) ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣಕ್ಕೆ ಬರುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಸ್ವಾಗತ. ಚನ್ನಪಟ್ಟಣಕ್ಕೆ ಬಂತು ಸ್ಪರ್ಧೆ ಅವರು ಮಾಡಲಿ. ಈ ಹಿಂದೆ ಇದ್ದ ಚನ್ನಪಟ್ಟಣ ತಾಲ್ಲೂಕಿನ ಸಾತನೂರು ಕ್ಷೇತ್ರದಿಂದ ಸ್ವರ್ಧೆ ಮಾಡುತ್ತಿದ್ದರು. ಚನ್ನಪಟ್ಟಣವನ್ನು ಕನಕಪುರಕ್ಕೆ ಹೋಲಿಕೆ‌ ಮಾಡುತ್ತಿದ್ದಾರೆ. ಕನಕಪುರ ಮಾಡಲ್ ಅಂದ್ರೆ ಏನು? ದೌರ್ಜನ್ಯ, ಕೊಲೆ ಸುಲಿಗೆ ನಾ? ಇದು ಕನಕಪುರ ಮಾಡೆಲ್ ನಾ ಎಂದು ಟಾಂಗ್ ಕೊಟ್ಟರು.

ನಾವು ಕುಮಾರಸ್ವಾಮಿ ಅವರು ಯಾವುದೇ ನಮ್ಮ ವಿರೋಧಿ ಪಕ್ಷಗಳ ಮುಖಂಡರ ವಿರುದ್ಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು‌ ಮಾಡಿಲ್ಲ. ಕನಕಪುರದಲ್ಲಿ ಡಿಕೆ ಬ್ರದರ್ಸ್ ಮಾಡಿಸಿದ್ದಾರೆ. ಇದು ಕನಕಪುರ ಮಾಡೆಲ್ ನಾ? ಚನ್ನಪಟ್ಟಣದಲ್ಲಿ ಜನ ಆರ್ಥಿಕವಾಗಿ ಸದೃಢವಾಗಿದ್ದಾರೆ. ನೀರಾವರಿ ಅಭಿವೃದ್ಧಿಯಾಗಿದೆ. ಕನಕಪುರ ಏನಾಗಿದೆ? ಜನಸಾಮಾನ್ಯರ ಬದುಕು ಸಾಮಾನ್ಯವಾಗಿ ಇದ್ಯಾ? ಜನಸಾಮಾನ್ಯರ ಬದುಕು ಅಲ್ಲಿ ಸದೃಢವಾಗಿ‌ ಇಲ್ಲ. ನಿನ್ನೆ ಡಿಕೆ ಶಿವಕುಮಾರ್ ಬಂದಾಗ ನನಗೆ ಯಾಕೆ ಭಯ ಅಂದ್ರೆ ಅವರು ನಡೆದುಕೊಂಡ ರೀತಿ. ಅಧಿಕಾರಿಗಳನ್ನು ಬೆಂಗಳೂರಿಗೆ ಕರೆದು ಸಭೆ ಮಾಡುತ್ತಾರೆ. ತಾಲ್ಲೂಕು ಅಧಿಕಾರಿಗಳ ಸಭೆ ಮಾಡುವಾಗ ಫೋನ್ ಒಳಗಡೆ ಬಿಟ್ಟಿಲ್ಲ. ಮಾಧ್ಯಮದವರನ್ನು ಹೊರಗಡೆ ಇಟ್ಟು ಸಭೆ ಮಾಡುತ್ತಾರೆ. ಯಾಕೆ ಇದು ಖಾಸಗಿ ಕಾರ್ಯಕ್ರಮ ನಾ. ನಾನು ಕುಮಾರಸ್ವಾಮಿ ಕಾಲದಲ್ಲಿ ಯಾವುದೇ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಮಾಡಿಲ್ಲ. ಡಿಕೆ ಸುರೇಶ್ ಅವರ ಸೋಲಿನಿಂದ ಡಿಕೆಶಿ ಹತಾಶರಾಗಿದ್ದಾರೆ ಎಂದರು.

ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಡಿಕೆ ಶಿವಕುಮಾರ್ ಪಣ: ಚನ್ನಪಟ್ಟಣದಲ್ಲಿ ಸೋಲಿನಲ್ಲೂ ಗೆಲುವು ಹುಡುಕಿದ ಡಿಸಿಎಂ‌

ಚನ್ನಪಟ್ಟಣದಲ್ಲಿ ವಾಮಾ ಮಾರ್ಗದಲ್ಲಿ ಚುನಾವಣೆ ಮಾಡಲು ಡಿಕೆಶಿ ಮುಂದಾಗಿದ್ದಾರೆ. ಚುನಾವಣೆ ನಮ್ಮ‌ಪರ ಇದೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸರ್ಕಾರದ ಮಾಡಿರುವುದು ಜನರ ಮುಂದೆ‌ ಇದೆ. ಚನ್ನಪಟ್ಟಣಕ್ಕೆ ಮುಖ್ಯಮಂತ್ರಿ ಅಂತಾ ಘೋಷಣೆ ಕೂಗಿದಾಗಲೆ ಹತ್ತರಿಂದ ಹದಿನೈದು ಸಾವಿರ ಮತಗಳು ಕಡಿಮೆ ಆಗಿವೆ. ಚನ್ನಪಟ್ಟಣಕ್ಕೆ ಅವರ ಸಾಕ್ಷಿ ಗುಡ್ಡೆ ಏನಿದೆ. ಇದ್ರೆ ತೋರಿಸಲಿ. ಅವರು ಅಭಿವೃದ್ಧಿ ಮಾಡಿದ್ರೆ ಕಳೆದ ಆರೇಳು ವರ್ಷಗಳಿಂದ ಮಾಡಬಹುದು. ಡಿಕೆ ಶಿವಕುಮಾರ್ ಅವರು ವಾಮಾ ಮಾರ್ಗದ ಚುನಾವಣೆ ನಡೆಸಲು ತಂತ್ರ ಮಾಡುತ್ತಿದ್ದಾರೆ. ಅವರು ಬಂದ್ರೆ ಚುನಾವಣೆ ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.

ನಾನು ಟಿಕೆಟ್ ಆಕಾಂಕ್ಷಿ ಅಲ್ಲ

ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ಪಕ್ಷ ಹೈ ಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳತ್ತಾರೋ ಅದಕ್ಕೆ ನಾನು ಬದ್ದ. ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಬದ್ಧ. ಅವರ ತೀರ್ಮಾನ ಅತೀ ಮುಖ್ಯ. ಡಿಕೆ ಸುರೇಶ್ ಗೆಲ್ಲುಲು ಸಾಧ್ಯವಿಲ್ಲ ಅಂತಾ ಅವರೇ ಒಪ್ಪಿಕೊಂಡಿದ್ದಾರೆ. ಯಾಕಂದ್ರೆ ಅವರೇ ಚನ್ನಪಟ್ಟಣ ಕ್ಷೇತ್ರದ ಬರುತ್ತಿರುವುದು ಅವರಿಗೆ ಗೊತ್ತಾಗಿದೆ..ಈಗಾಗಿ ಅವರೇ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಲು ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು ಅಂತಾ ಏನು ಇಲ್ಲ. ಸಿದ್ದರಾಮಯ್ಯ ಹಾಗೂ ಅವರ ಶಾಸಕರು ತೀರ್ಮಾನ ತೆಗೆದುಕೊಂಡರೆ ಈಗಲೂ ಅವರು ಸಿಎಂ ಆಗಬಹುದು ಎಂದು ಟಾಂಗ್ ಕೊಟ್ಟರು.

ಇಲ್ಲಿಂದಲೇ ಡಿಕೆಶಿ ರಾಜಕೀಯ ಮುಗಿಯಲುಬಹುದು

ಚನ್ನಪಟ್ಟಣದಲ್ಲಿ ಡಿಕೆಶಿ ರಾಜಕೀಯ ಭವಿಷ್ಯ ಪ್ರಾರಂಭ ವಿಚಾರದ ಬಗ್ಗೆ ಮಾತನಾಡಿ ಸಿಪಿ ಯೋಗೇಶ್ವರ್, ಅವರ ರಾಜಕೀಯ ಇಲ್ಲಿಂದಲೇ ಮುಗಿಯಲುಬಹುದು? ಬಿಜೆಪಿ ಜೆಡಿಎಸ್ ಮತದಾರರ ಒಂದಾಣಿಕೆ ಸ್ವಲ್ಪ ಕಷ್ಟವಾಯಿತು. ನಾವು ಅವಗಲೇ ಒಂದಾಗಿದ್ರೆ ಈ ಹಿನ್ನಡೆಯಾಗುತ್ತಿರಲಿಲ್ಲ. ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆ ಬೇರೆ ರೀತಿಯಲ್ಲಿ. ಚನ್ನಪಟ್ಟಣದಲ್ಲಿ ನಡೆಯುತ್ತದೆ. ಚನ್ನಪಟ್ಟಣದಲ್ಲಿ ಯಾವತ್ತು ಘಟಾನುಘಟಿ ನಾಯಕರೇ ಸ್ಪರ್ಧೆ ಮಾಡುತ್ತಿದ್ದಾರೆ. ಡಿಕೆಶಿ ಬಂದ್ರೆ ಏನು ಸಮಸ್ಯೆ ಇರಲ್ಲಿ ಅವರೇ ಬರಲಿ. ನಾನು ಎನ್ ಡಿಎ ಪರವಾಗಿಯೇ ಇರುತ್ತೇನೆ. ಎನ್ ಡಿಎ ಅಭ್ಯರ್ಥಿ ಗೆಲುತ್ತಾರೆ. ವರಿಷ್ಠರು ತೀರ್ಮಾನ ಮಾಡಿದರೆ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತೇನೆ. ಮಂಜುನಾಥ್ ಅವರ ಗೆಲುವಿಗೆ ಶ್ರಮ ಪಟ್ಟ ರೀತಿಯಲ್ಲಿ ಚನ್ನಪಟ್ಟಣದಲ್ಲಿ ಶ್ರಮ ಪಡುತ್ತೇವೆ. ಚನ್ನಪಟ್ಟಣ ಎನ್ ಡಿಎ ಅಭ್ಯರ್ಥಿಯನ್ನು ಗೆಲಿಸಿಕೊಂಡು ಬರುತ್ತೇವೆ. ನಾವು ಮುಂದಿನ ವಾರದಿಂದ ಚುನಾವಣಾ ಪ್ರಚಾರ ಪ್ರಾರಂಭ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:05 pm, Thu, 20 June 24

ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ