ಅನಾಮಧೇಯ ವ್ಯಕ್ತಿಯಿಂದ ಜನ್ ಧನ್ ಖಾತೆಗೆ ಕೋಟಿ ಕೋಟಿ ಹಣ: ದಂಪತಿ ಕಂಗಾಲು!

|

Updated on: Feb 05, 2020 | 6:33 PM

ರಾಮನಗರ: ಎಲ್ಲರ ಹೆಸರಲ್ಲೂ ಒಂದ್ ಬ್ಯಾಂಕ್ ಅಕೌಂಟ್​ ಇರ್ಬೇಕು. ಪ್ರತಿಯೊಬ್ರು ಡೆಬಿಟ್ ಕಾರ್ಡ್ ಹೊಂದ್ಬೇಕು. ಝೀರೋ ಬ್ಯಾನೆಲ್ಸ್​​ ಇದ್ರೂ ಖಾತೆ ತೆರಿಬೋದು. ಅದೇ ಜನ್ ಧನ್ ಯೋಜನೆ. ಬಡವರಿಗೆ ವರವಾಗಿರೋ ಮಹತ್ವದ ಯೋಜನೆ ಹೆಸ್ರಲ್ಲಿ ಮಹಾ ಮೋಸವೇ ನಡೆದೋಗಿದೆ. ವಂಚನೆ ಅನ್ನೋ ವಾಸನೆ ಸುಳಿದಾಡ್ತಿದೆ. ಗೊತ್ತಿಲ್ಲದೇ ಖಾತೆಗೆ ಕೋಟಿ ಕೋಟಿ ಹಣ ಸಂದಾಯ! ಯೆಸ್.. ಬಡವರೂ ಒಂದಿಷ್ಟು ಹಣ ಉಳಿಸ್ಲಿ. ಅವ್ರೂ ಬ್ಯಾಂಕ್​ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಿ ಅಂತ ಜನ್-ಧನ್ ಯೋಜನೆ ಜಾರಿಗೆ ತಂದಿದ್ರು. ಆದ್ರೆ, ರಾಮನಗರ ಜಿಲ್ಲೆ […]

ಅನಾಮಧೇಯ ವ್ಯಕ್ತಿಯಿಂದ ಜನ್ ಧನ್ ಖಾತೆಗೆ ಕೋಟಿ ಕೋಟಿ ಹಣ: ದಂಪತಿ ಕಂಗಾಲು!
Follow us on

ರಾಮನಗರ: ಎಲ್ಲರ ಹೆಸರಲ್ಲೂ ಒಂದ್ ಬ್ಯಾಂಕ್ ಅಕೌಂಟ್​ ಇರ್ಬೇಕು. ಪ್ರತಿಯೊಬ್ರು ಡೆಬಿಟ್ ಕಾರ್ಡ್ ಹೊಂದ್ಬೇಕು. ಝೀರೋ ಬ್ಯಾನೆಲ್ಸ್​​ ಇದ್ರೂ ಖಾತೆ ತೆರಿಬೋದು. ಅದೇ ಜನ್ ಧನ್ ಯೋಜನೆ. ಬಡವರಿಗೆ ವರವಾಗಿರೋ ಮಹತ್ವದ ಯೋಜನೆ ಹೆಸ್ರಲ್ಲಿ ಮಹಾ ಮೋಸವೇ ನಡೆದೋಗಿದೆ. ವಂಚನೆ ಅನ್ನೋ ವಾಸನೆ ಸುಳಿದಾಡ್ತಿದೆ.

ಗೊತ್ತಿಲ್ಲದೇ ಖಾತೆಗೆ ಕೋಟಿ ಕೋಟಿ ಹಣ ಸಂದಾಯ!
ಯೆಸ್.. ಬಡವರೂ ಒಂದಿಷ್ಟು ಹಣ ಉಳಿಸ್ಲಿ. ಅವ್ರೂ ಬ್ಯಾಂಕ್​ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಿ ಅಂತ ಜನ್-ಧನ್ ಯೋಜನೆ ಜಾರಿಗೆ ತಂದಿದ್ರು. ಆದ್ರೆ, ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಬೀಡಿ ಕಾಲೋನಿ ನಿವಾಸಿ ರೆಹನಾ ಬಾನು ಹಾಗೂ ಸಯ್ಯದ್ ಮಲ್ಲಿಕ್ ದಂಪತಿಗೆ ಇದೇ ಖಾತೆ ಸಂಕಷ್ಟಕ್ಕೆ ಸಿಲುಕಿಸಿದೆ.

ಅದೇನಂದ್ರೆ, ಜನ್-ಧನ್ ಬ್ಯಾಂಕ್ ಅಕೌಂಟ್ ಹೊಂದಿದ್ದ ದಂಪತಿ ಹೆಸ್ರಲ್ಲಿ ಸದ್ದೇ ಇಲ್ಲದೇ ಕೋಟಿ ಕೋಟಿ ವ್ಯವಹಾರ ನಡೆದೋಗಿದೆ. ಕಳೆದ ನಾಲ್ಕು ತಿಂಗಳಿನಿಂದ ಇವರಿಗೆ ಗೊತ್ತೇ ಇಲ್ಲದಂತೆ ಲಕ್ಷ ಲಕ್ಷ ಹಣ ಸಂದಾಯವಾಗಿದೆ. ಪದೇ ಪದೇ ರೆಹನಾ ಬಾನು ಅಕೌಂಟ್​ಗೆ ಹಣ ಸಂದಾಯವಾಗಿರೋದನ್ನ ಬ್ಯಾಂಕ್ ಅಧಿಕಾರಿಗಳು ಪ್ರಶ್ನಿಸಿದಾಗ ಶಾಕ್ ಆಗಿದ್ದಾರೆ.

ಇನ್ನು, ರೆಹನಾ ಬಾನು ಹೂವಿನ ವ್ಯಾಪಾರ ಮಾಡ್ಕೊಂಡು ಬದುಕಿನ ಬಂಡಿ ಸಾಗಿಸ್ತಿದ್ದಾರೆ. ಆದ್ರೆ, ಎಸ್​​ಬಿಎಂ ಬ್ಯಾಂಕ್​ನಲ್ಲಿರೋ ಜನ್-ಧನ್ ಖಾತೆ ನಂಬರ್​ಗೆ ಬರೋಬ್ಬರಿ ಮೂವತ್ತು ಕೋಟಿ ಹಣ ಸಂದಾಯವಾಗಿದೆ.
ಅನಾಮಧೇಯ ವ್ಯಕ್ತಿ ರೆಹನಾ ಬಾನು ಅಕೌಂಟ್​​ ನಂಬರ್​ಗೆ ತನ್ನ ಮೊಬೈಲ್ ನಂಬರ್ ರಿಜಿಸ್ಟರ್ ಮಾಡ್ಕೊಂಡಿದ್ದಾನೆ.

ಮಹಿಳೆ ಬ್ಯಾಂಕ್​​ ಖಾತೆ ಸೀಜ್:
ಬಳಿಕ ಪ್ರತಿನಿತ್ಯ ಹಣವನ್ನ ಹಾಕಿ ತಕ್ಷಣವೇ ಬೇರೆಡೆ ಆನ್​ಲೈನ್​ ಮೂಲಕ ಹಣ ವರ್ಗಾವಣೆ ಮಾಡಿದ್ದಾನೆ. ಹೀಗಾಗಿ ರೆಹನಾ ಬಾನು ಬ್ಯಾಂಕ್ ಖಾತೆಯನ್ನ ಚನ್ನಪಟ್ಟಣ ಪೊಲೀಸ್ರು ಸೀಜ್ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ. ಇನ್ನು ಈ ಬಗ್ಗೆ ತೆಲಂಗಾಣ, ಆಂಧ್ರ, ಮುಂಬೈನಲ್ಲಿಯೂ ಕೂಡ ಪ್ರಕರಣ ದಾಖಲಾಗಿರೋದು ಸಂಶಯ ಹುಟ್ಟುಹಾಕಿದೆ.

ಈ ಬಗ್ಗೆ ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್​​ಲೈನ್​​​ ಮೋಸ ಮಾಡುವವರು ಈ ಅಕೌಂಟ್​​ ಅನ್ನು ದುರ್ಬಳಕೆ ಮಾಡಿಕೊಂಡಿರೋದು ಕಂಡು ಬಂದಿದೆ. ಬೇರೆ ರಾಜ್ಯಗಳಲ್ಲೂ ಕೂಡ ಪ್ರಕರಣ ದಾಖಲಾಗಿದೆ. ಬ್ಯಾಂಕ್​​ ಖಾತೆಯನ್ನ ಸೀಜ್ ಮಾಡಿದ್ದಾರೆ. 30 ಕೋಟಿ ರೂಪಾಯಿ ಹಣ ಸಂದಾಯ ಆಗಿರೋದು ಕಂಡು ಬಂದಿಲ್ಲ.

ಒಟ್ನಲ್ಲಿ ಯಾರದ್ದೋ ಬ್ಯಾಂಕ್​ ಖಾತೆಯನ್ನ ಹ್ಯಾಕ್ ಮಾಡಿ ವ್ಯವಹಾರ ಮಾಡಿರೋದು ಅನುಮಾನ ಮೂಡಿಸಿದೆ. ಈ ಹಣದ ವ್ಯವಹಾರ ಮಾಡಿರೋ ಆನಾಮಧೇಯ ವ್ಯಕ್ತಿ ಯಾರು ಅನ್ನೋದು ಖಾಕಿ ತನಿಖೆ ಬಳಿಕ ಸತ್ಯ ಬಯಲಾಗಬೇಕಿದೆ.






Published On - 6:32 pm, Wed, 5 February 20