ಮಾಜಿ ಸಚಿವ HM ರೇವಣ್ಣ ದರ್ಪ: ಅಪಘಾತ ಕೇಸಿಗೆ ಪರಿಹಾರ ಕೊಡುವುದಾಗಿ ಕರೆಸಿ ಅವಮಾನ
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಕುಟುಂಬಕ್ಕೆ ಪರಿಹಾರ ನೀಡದೇ ಹೆಚ್.ಎಂ.ರೇವಣ್ಣ ಅವಮಾನಿಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮೃತ ಯುವಕನ ಕುಟುಂಬಸ್ಥರು ಹೆಚ್ ಎಂ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನಗ ಸಾವನ್ನ ನೆನೆದು ತಾಯಿ ಕಣ್ಣೀರು ಹಾಕಿದ್ದಾರೆ.

ರಾಮನಗರ, ಜನವರಿ 08: ಮಾಜಿ ಸಚಿವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ (HM Revanna) ಪುತ್ರನ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡದೇ ಅವಮಾನಿಸಿರುವ (Insult) ಆರೋಪ ಕೇಳಿಬಂದಿದೆ. ಈ ಬಗ್ಗೆ ಹೆಚ್ ಎಂ ರೇವಣ್ಣ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಡೆದದ್ದೇನು?
ಮಾಜಿ ಸಚಿವ ಹಾಗೂ ರಾಜ್ಯ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹೆಚ್ ಎಂ ರೇವಣ್ಣ ವಿರುದ್ಧ ಅಪಘಾತದಲ್ಲಿ ಸಾವನ್ನಪ್ಪಿದ ರಾಜೇಶ್ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಡಿಸೆಂಬರ್ 11 ರಂದು ಮಾಗಡಿಯ ನಿವಾಸದಲ್ಲಿ ಹೆಚ್ ಎಂ ರೇವಣ್ಣ ವಿಶೇಷವಾದ ಪೂಜೆ ಹಮ್ಮಿಕೊಂಡಿದ್ದರು. ಈ ಒಂದು ಪೂಜೆಯಲ್ಲಿ ರೇವಣ್ಣ ಪುತ್ರ ಶಶಾಂಕ್ ಕೂಡ ಭಾಗಿಯಾಗಿ, ಪೂಜೆ ಮುಗಿಸಿಕೊಂಡು ವಾಪಾಸ್ ಮಾಗಡಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಬಳಿ KA 51 MQ 0555 ನಂಬರ್ನ ಫಾರ್ಚ್ಯೂನರ್ ಕಾರು ಬೈಕ್ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ರಾಜೇಶ್ (23) ಎಂಬ ಯುವಕ ಸಾವನ್ನಪ್ಪಿದ್ದ. ಕುದೂರು ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ಕೂಡ ದಾಖಲಾಗಿತ್ತು.
ಪರಿಹಾರ ನೀಡದೇ ಅವಮಾನ
ಇನ್ನು ಪ್ರಕರಣ ಸಾಕಷ್ಟು ಗಂಭೀರ ಪಡೆಯುತ್ತಿದ್ದಂತೆ ಎಂಟ್ರಿಕೊಟ್ಟಿದ್ದ ಹೆಚ್ ಎಂ ರೇವಣ್ಣ, ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಮೃತನ ತಂದೆ ಗುಡ್ಡೇಗೌಡ, ತಾತಿ ನಾಗರತ್ನ ಹಾಗೂ ಸಹೋದರಿ ನಂದಿನಿ ಅವರನ್ನ ರೇವಣ್ಣ ಅವರ ನಿವಾಸಿದಲ್ಲಿ ಭೇಟಿ ಮಾಡಿದ್ದರು. ಸಾಕಷ್ಟು ಅವಮಾನಿಸಿದರಂತೆ. ಕುಟುಂಬದ ಸಾಲ ಇದ್ದರೇ ನಾನೇನು ಮಾಡಲಿ. ಬೇರೆಯವರು ಅಪಘಾತ ಮಾಡಿದರೆ ಇದೇ ರೀತಿ ಪರಿಹಾರ ಕೇಳುತ್ತಿದ್ದರಾ? ಎರಡು ಲಕ್ಷ ರೂ ಪರಿಹಾರ ಅಂತಾ ಕೊಡುತ್ತೇನೆ. ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಎದ್ದು ಹೋಗಿ, ಮಾಧ್ಯಮಗಳ ಮುಂದೆ ಯಾಕೆ ಹೋದರಿ. ಕೋರ್ಟ್ನಲ್ಲಿ ಹೋಗಿ ನೋಡಿಕೊಳ್ಳಿ ಎಂದು ಅಪಮಾನ ಮಾಡಿದರಂತೆ. ಪರಿಹಾರ ಕೊಡುವುದಾಗಿ ಕರೆಸಿ ಅಪಮಾನ ಮಾಡಿದರು ಅಂತಾ ಮೃತ ತಾಯಿ ಕಣ್ಣೀರು ಹಾಕಿದರೆ, ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆ ಮೇಲೆ ಮಾಜಿ ಸಚಿವ ಹೆಚ್ಎಂ ರೇವಣ್ಣ ಹಲ್ಲೆ ಆರೋಪ, ದೂರು ದಾಖಲು
ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಾದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಮಾನವೀಯತೆ ಮರೆತ್ರಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಇತ್ತ ಮಗನು ಇಲ್ಲದೇ, ಅತ್ತ ಪರಿಹಾರವೂ ಸಿಗದೇ ರಾಜೇಶ್ ಕುಟುಂಬ ಪರದಾಟ ನಡೆಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.