ನಡು ರಸ್ತೆಯಲ್ಲೇ ಯೂ ಟರ್ನ್ ಹೊಡೆದ ಕೆಎಸ್ಆರ್ಟಿಸಿ ಬಸ್: ಟೋಲ್ನಿಂದ ಬಚಾವ್ ಆಗಲು ಪ್ರಯಾಣಿಕರ ಪ್ರಾಣ ಸಂಕಟಕ್ಕೆ ದೂಡಿದ ಡ್ರೈವರ್
ಟೋಲ್ ಉಳಿಸುವ ಕಾರಣಕ್ಕೆ ನಡು ರಸ್ತೆಯಲ್ಲೇ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಯೂ ಟರ್ನ್ ಮಾಡಿ ರಾಂಗ್ ಸೈಡ್ನಲ್ಲಿ ಹೋಗಿರುವಂತಹ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಸಮೀಪದಲ್ಲಿ ನಡೆದಿದೆ. ಸದ್ಯ ಸಾಮಾಜಿಕ ಜಾಲಾತಣದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದು, ಬಸ್ ಡ್ರೈವರ್ ವಿರುದ್ಧ ಕಿಡಿಕಾರಲಾಗಿದೆ.
ರಾಮನಗರ, ಜುಲೈ 31: ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಸಮೀಪದಲ್ಲಿ ನಡು ರಸ್ತೆಯಲ್ಲೇ ಕೆ ಎ 42 F 2233 ನಂಬರಿನ ಕೆಎಸ್ಆರ್ಟಿಸಿ ಬಸ್ (KSRTC bus) ಯೂ ಟರ್ನ್ ಮಾಡಲಾಗಿದೆ. ಟೋಲ್ ಉಳಿಸುವ ಕಾರಣಕ್ಕೆ ಯೂ ಟರ್ನ್ ಮಾಡಲಾಗಿದೆ ಎನ್ನಲಾಗುತ್ತಿದ್ದು, ಆದರೆ ಪ್ರಯಾಣಿಕರ ಪ್ರಾಣ ಸಂಕಟಕ್ಕೆ ತಳ್ಳಿದ ಡ್ರೈವರ್ ವಿರುದ್ಧ ಜನರು ಕಿಡಿಕಾರಿದ್ದಾರೆ. ಜೊತೆಗೆ ಬಸ್ ಹಿಂದೆ ಬರುತ್ತಿದ್ದ ಇತರೆ ವಾಹನ ಸವಾರರಲ್ಲಿಯೂ ಇದು ಆತಂಕ ಮೂಡಿಸಿದೆ.
ಸದ್ಯ ಸಾಮಾಜಿಕ ಜಾಲಾತಣದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟ್ಟರ್ಗೆ ವಿಡಿಯೋ ಟ್ಯಾಗ್ ಮಾಡಲಾಗಿದೆ. ಇನ್ನೂ ನಾಳೆಯಿಂದ ಬೈಕ್ ಬ್ಯಾನ್ ಬಗ್ಗೆ ತಯಾರಿ ಪ್ರಾಧಿಕಾರ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ: ಆಗಸ್ಟ್ 1 ರಿಂದ ಬೈಕ್, ಆಟೋ ಸಂಚಾರ ನಿರ್ಬಂಧ, ಮಧ್ಯರಾತ್ರಿಯಿಂದಲೇ ಆದೇಶ ಜಾರಿ
Who is responsible for many accidents on #BengaluruMysoreExpressway? Is it @NHAI_Official or senseless drivers? This @KSRTC_Journeys driver taking reverse turn and going on wrong side at 8 am today near Bidadi. @nitin_gadkari pic.twitter.com/HMmDfRUPXd
— Narshima Upadhyaya (@NarshimaU) July 29, 2023
ನರಸಿಂಹ ಉಪಾಧ್ಯಾಯ ಎಂಬುವವರು ಈ ಘಟನೆ ಕುರಿತಾಗಿ ಟ್ವೀಟ್ ಮಾಡಿದ್ದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಭವಿಸುತ್ತಿರುವ ಅನೇಕ ಅಪಘಾತಗಳಿಗೆ ಯಾರು ಜವಾಬ್ದಾರರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರನಾ ಅಥವಾ ಇಂತಹ ಅರ್ಥಹೀನ ಚಾಲಕರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ AI ಕ್ಯಾಮೆರಾ: ಮಿತಿಗಿಂತ ಜಾಸ್ತಿ ವೇಗವಾಗಿ ವಾಹನ ಓಡಿಸಿದ್ರೆ ಬೀಳುತ್ತೆ ಫೈನ್..!
ಇಂದು ಬೆಳಿಗ್ಗೆ 8 ಗಂಟೆಗೆ ಬಿಡದಿ ಬಳಿ ಕೆಎಸ್ ಆರ್ಟಿಸಿ ಬಸ್ ಚಾಲಕ ಯೂ ಟರ್ನ್ ತೆಗೆದುಕೊಂಡು ರಾಂಗ್ ಸೈಡ್ನಲ್ಲಿ ಹೋಗುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೂ ಟ್ಯಾಗ್ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:57 pm, Mon, 31 July 23